ದೆಹಲಿ(ಏ.18): ತವರಿನಲ್ಲಿ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಿರಾಸೆಯಾಗಿದೆ. ಮುಂಬೈ ವೇಗಿ ರಾಹುಲ್ ಚಹಾರ್ ದಾಳಿಗೆ ಡೆಲ್ಲಿ ತತ್ತರಿಸಿತು. ಹೀಗಾಗಿ ರೋಹಿತ್ ಶರ್ಮಾ ಸೈನ್ಯದ ವಿರುದ್ಧ ಡೆಲ್ಲಿ 40 ರನ್ ಸೋಲು ಅನುಭವಿಸಿದೆ. ಇತ್ತ ಮುಂಬೈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಗೆಲುವಿಗೆ 169 ರನ್ ಟಾರ್ಗೆಟ್ ಪಡೆ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ ಹಾಗೂ ಪೃಥ್ವಿ ಶಾ 49 ರನ್ ಜೊತೆಯಾಟ ನೀಡಿದರು. ಧವನ್ 35 ರನ್ ಕಾಣಿಕೆ ನೀಡಿದರೆ, ಪೃಥ್ವಿ ಶಾ 20 ರನ್ ಸಿಡಿಸಿ ಔಟಾದರು. ಟಾರ್ಗೆಟ್ ಚೇಸ್ ಮಾಡೋ ವಿಶ್ವಾಸದಲ್ಲಿದ್ದ ಡೆಲ್ಲಿ ತಂಡಕ್ಕೆ ಮುಂಬೈ ವೇಗಿಗಳು ಶಾಕ್ ನೀಡಿದರು.

ಕಾಲಿನ್ ಮುನ್ರೊ,  ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ನಿರಾಸೆ ಮೂಡಿಸಿದರು. ಆತಂಕದಲ್ಲಿದ್ದ ತಂಡಕ್ಕೆ ಕ್ರಿಸ್ ಮೋರಿಸ್ ಹಾಗೂ ಅಕ್ಸರ್ ಪಟೇಲ್ ಆಸರೆಯಾದರು. ಮಾರಿಸ್ 11 ರನ್  ಸಿಡಿಸಿ ಔಟಾದರು. ಕೀಮೋ ಪೌಲ್ ರನೌಟ್‌ಗೆ ಬಲಿಯಾದರು. ಹೋರಾಟ ನೀಡಿದ ಅಕ್ಸರ್ ಪಟೇಲ್ 26 ರನ್ ಸಿಡಿಸಿ ಔಟಾದರು. ಡೆಲ್ಲಿ 9 ವಿಕೆಟ್ ನಷ್ಟಕ್ಕೆ 128 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.