ಗರಿಷ್ಠ ವಿಕೆಟ್ ಪಡೆದ ಬೌಲರ್'ಗಳಲ್ಲಿ ವೇಗಿ ಲಸಿತ್ ಮಾಲಿಂಗ ಮೊದಲ ಸ್ಥಾನದಲ್ಲಿದ್ದರೆ, ಲೆಗ್ ಸ್ಪಿನ್ನರ್'ಗಳಾದ ಅಮಿತ್ ಮಿಶ್ರಾ, ಪೀಯೂಶ್ ಚಾವ್ಲಾ ಟಾಪ್ 3 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 11 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಟಾಪ್ 10 ಬೌಲರ್'ಗಳ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

ಬ್ಯಾಟ್ಸ್'ಮನ್'ಗಳೇ ಪ್ರಾಬಲ್ಯ ಮೆರೆಯುವ ಚುಟುಕು ಕ್ರಿಕೆಟ್'ನಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಬೌಲರ್'ಗಳೂ ಕಮಾಲ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಭಾರತದ ಟಿ20 ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡಾ ಇದಕ್ಕೆ ಹೊಸತಲ್ಲ. 

ಲಂಕಾ ಮೂಲದ ವೇಗಿ, ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಬೌಲರ್ ಲಸಿತ್ ಮಾಲಿಂಗ್ ಈ ವರೆಗಿನ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದುವರೆಗೆ 154 ವಿಕೆಟ್ ಕಬಳಿಸಿರುವ ಮಾಲಿಂಗ ಪ್ರಸ್ತುತ ಉತ್ತಮ ಫಾರ್ಮ್'ನಲ್ಲಿದ್ದು, ಪ್ರಸಕ್ತ ಆವೃತ್ತಿಯಲ್ಲೂ ಬ್ಯಾಟ್ಸ್'ಮನ್'ಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುವ ಸಾಧ್ಯತೆಯಿದೆ. ಇದುವರೆಗಿನ 11 ಆವೃತ್ತಿಗಳಲ್ಲಿ ಟಾಪ್ 10 ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್'ಗಳ ಪಟ್ಟಿಯಲ್ಲಿ ತಲ 5 ವೇಗದ ಬೌಲರ್'ಗಳು ಹಾಗೂ 5 ಸ್ಪಿನ್ನರ್'ಗಳು ಸ್ಥಾನ ಪಡೆದಿರುವುದು ಮತ್ತೊಂದು ವಿಶೇಷ. ಹರ್ಭಜನ್ ಸಿಂಗ್ ಇದುವರೆಗೂ 500ಕ್ಕೂ ಹೆಚ್ಚು ಓವರ್ ಮಾಡಿದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. ಗರಿಷ್ಠ ವಿಕೆಟ್ ಪಡೆದ ಬೌಲರ್'ಗಳಲ್ಲಿ ವೇಗಿ ಲಸಿತ್ ಮಾಲಿಂಗ ಮೊದಲ ಸ್ಥಾನದಲ್ಲಿದ್ದರೆ, ಲೆಗ್ ಸ್ಪಿನ್ನರ್'ಗಳಾದ ಅಮಿತ್ ಮಿಶ್ರಾ, ಪಿಯೂಶ್ ಚಾವ್ಲಾ ಟಾಪ್ 3 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 11 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಟಾಪ್ 10 ಬೌಲರ್'ಗಳ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

1. ಲಸಿತ್ ಮಾಲಿಂಗ: 154


2. ಅಮಿತ್ ಮಿಶ್ರಾ: 136

3. ಪಿಯೂಶ್ ಚಾವ್ಲಾ: 140

4. ಡ್ವೇನ್ ಬ್ರಾವೊ: 136

5. ಹರ್ಭಜನ್ ಸಿಂಗ್: 134

6. ಭುವನೇಶ್ವರ್ ಕುಮಾರ್: 120

7. ಸುನಿಲ್ ನರೈನ್: 112

8. ಉಮೇಶ್ ಯಾದವ್: 111

9. ರವಿಚಂದ್ರನ್ ಅಶ್ವಿನ್: 110

10. ಆಶಿಶ್ ನೆಹ್ರಾ: 105

ಇಲ್ಲಿದೆ ಟಾಪ್ 10 ಬೌಲರ್’ಗಳ ಸಂಪೂರ್ಣ ಪಟ್ಟಿ...

ಸ್ಥಾನಬೌಲರ್ಪಂದ್ಯಇನ್ನಿಂಗ್ಸ್ಓವರ್ವಿಕೆಟ್
1ಲಸಿತ್ ಮಾಲಿಂಗ110110426.2154
2ಅಮಿತ್ ಮಿಶ್ರಾ136136476.5146
3ಪಿಯೂಶ್ ಚಾವ್ಲಾ144143476.1140
4ಡ್ವೇನ್ ಬ್ರಾವೋ122118386.5136
5ಹರ್ಭಜನ್ ಸಿಂಗ್149145516.2134
6ಭುವನೇಶ್ವರ್ ಕುಮಾರ್102102376.2120
7ಸುನಿಲ್ ನರೈನ್9897382112
8ಉಮೇಶ್ ಯಾದವ್108107375.3111
9ರವಿಚಂದ್ರನ್ ಅಶ್ವಿನ್125122432.2110
10ಆಶಿಶ್ ನೆಹ್ರಾ8887314105

* 2018ರ IPL ಮುಕ್ತಾಯದ ವೇಳೆಗೆ