ಯೋ-ಯೋ ಟೆಸ್ಟ್: ವಿರಾಟ್-ಧೋನಿ ಪಾಸ್; ಸಿಎಸ್’ಕೆ ಸ್ಟಾರ್ ಆಟಗಾರ ಫೇಲ್..!

Ambati Rayudu Fails Yo-Yo Test Likely to Miss Out on India Return
Highlights

ಫಿಟ್ನೆಸ್ ಪರೀಕ್ಷೆಯಲ್ಲಿ ಕೊಹ್ಲಿಯ ಅಂಕವೆಷ್ಟು (ಕನಿಷ್ಠ 16.1 ಅಂಕ) ಎಂಬ ಮಾಹಿತಿಯನ್ನು ಬಿಸಿಸಿಐ ಬಹಿರಂಗಗೊಳಿಸಿಲ್ಲ. ಕೊಹ್ಲಿ ಯೋ-ಯೋ ಪರೀಕ್ಷೆಯಲ್ಲಿ ಉರ್ತ್ತೀಣರಾದರೂ, ಕುತ್ತಿಗೆ ನೋವಿನಿಂದ ಚೇತರಿಸಿಕೊಂಡರೆ ಮಾತ್ರ ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಆಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು(ಜೂ.16]: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಸೇರಿ ಯುಕೆ ಪ್ರವಾಸಕ್ಕೆ ಆಯ್ಕೆಯಾಗಿರುವ ಆಟಗಾರರ ಫಿಟ್ನೆಸ್ ಟೆಸ್ಟ್ ನಡೆಯಿತು. ಐಪಿಎಲ್ ವೇಳೆ ಕುತ್ತಿಗೆ ನೋವಿಗೆ ಒಳಗಾಗಿದ್ದ ವಿರಾಟ್, ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಿಂದ ಹಿಂದೆ ಸರಿಯಬೇಕಾಯಿತು.

ಬಿಸಿಸಿಐ ಭಾರತೀಯ ಆಟಗಾರರಿಗೆ ಯೋ-ಯೋ ಫಿಟ್ನೆಸ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಇದೇ ತಿಂಗಳ ಕೊನೆಯಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ 2 ಟಿ20 ಪಂದ್ಯ, ಬಳಿಕ ಇಂಗ್ಲೆಂಡ್ ಪ್ರವಾಸಕ್ಕಾಗಿ ಆಟಗಾರರ ಪರೀಕ್ಷೆ ನಡೆಸಲಾಯಿತು. ಯೋ-ಯೋ ಪರೀಕ್ಷೆಯಲ್ಲಿ ಕೊಹ್ಲಿ ನಿರಾಯಾಸವಾಗಿ ಉತ್ತೀರ್ಣರಾದರು. ಆದರೂ ಕುತ್ತಿಗೆ ನೋವು ಸಂಪೂರ್ಣವಾಗಿ ವಾಸಿಯಾದಂತೆ ಕಾಣಲಿಲ್ಲ ಎಂದು ವರದಿಯಾಗಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಕೊಹ್ಲಿಯ ಅಂಕವೆಷ್ಟು (ಕನಿಷ್ಠ 16.1 ಅಂಕ) ಎಂಬ ಮಾಹಿತಿಯನ್ನು ಬಿಸಿಸಿಐ ಬಹಿರಂಗಗೊಳಿಸಿಲ್ಲ. ಕೊಹ್ಲಿ ಯೋ-ಯೋ ಪರೀಕ್ಷೆಯಲ್ಲಿ ಉರ್ತ್ತೀಣರಾದರೂ, ಕುತ್ತಿಗೆ ನೋವಿನಿಂದ ಚೇತರಿಸಿಕೊಂಡರೆ ಮಾತ್ರ ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಆಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಜು ಫಿಟ್ನೆಸ್ ಪರೀಕ್ಷೆ ಫೇಲಾಗಲು ಕಾರಣವೇನು? ಅಷ್ಟಕ್ಕೂ ಯೋ ಯೋ ಟೆಸ್ಟ್ ಅಂದ್ರೇನು..?

ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಸುರೇಶ್ ರೈನಾ, ಧೋನಿ, ಭುವನೇಶ್ವರ್ ಕುಮಾರ್, ಜಸ್‌’ಪ್ರೀತ್ ಬುಮ್ರಾ, ಸಿದ್ದಾರ್ಥ್ ಕೌಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಮನೀಶ್ ಪಾಂಡೆ ಸಹ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಲ್ಗೊಂಡರು.

ಐಪಿಎಲ್ ಹೀರೋ ರಾಯುಡುಗೆ ಆಘಾತ

ಕಳೆದ ತಿಂಗಳಷ್ಟೇ ಐಪಿಎಲ್‌ನಲ್ಲಿ 600ಕ್ಕೂ ಹೆಚ್ಚು ರನ್ ಕಲೆಹಾಕಿ, ಭಾರತ ತಂಡಕ್ಕೆ ವಾಪಸಾದ ಅಂಬಟಿ ರಾಯುಡು ಯೋ-ಯೋ ಟೆಸ್ಟ್‌ನಲ್ಲಿ ಫೇಲಾಗಿದ್ದಾರೆ. ಹೀಗಾಗಿ, ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಅವರನ್ನು ತಂಡದಿಂದ ಕೈಬಿಡಲಾಗುವುದು. ಮೂಲಗಳ ಪ್ರಕಾರ, ರಾಯುಡು 14ಕ್ಕಿಂತ ಕಡಿಮೆ ಅಂಕ ಗಳಿಸಿದರು ಎನ್ನಲಾಗಿದೆ. ಬಿಸಿಸಿಐ ಕನಿಷ್ಠ 16.1 ಅಂಕ ಗಳಿಸಬೇಕು ಎಂದು ಕಡ್ಡಾಯಗೊಳಿಸಿದೆ. ರಾಯುಡು ಸ್ಥಾನಕ್ಕೆ ಬದಲಿ ಆಟಗಾರರನನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ.

loader