ಪುಣೆ[ಮೇ.05]: ಚೆನ್ನೈ ಸೂಪರ್’ಕಿಂಗ್ಸ್ ಪಡೆಯ ಪ್ರತಿಭಾನ್ವಿತ ಕ್ರಿಕೆಟಿಗ ಅಂಬಟಿ ರಾಯುಡು ಆರ್’ಸಿಬಿ ವಿರುದ್ಧ ವಿನೂತನ ದಾಖಲೆ ಮಾಡಿದ್ದಾರೆ.
ಹಾಲಿ ಆರೆಂಜ್ ಕ್ಯಾಪ್ ಒಡೆಯ ರಾಯಡು ಪ್ರಸಕ್ತ ಆವೃತ್ತಿಯಲ್ಲಿ 400 ರನ್ ಕಲೆಹಾಕಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಅಂಬಟಿ ರಾಯುಡು ಪಾತ್ರರಾಗಿದ್ದಾರೆ.
ರಾಯುಡು ವೈಯುಕ್ತಿಕ 9 ರನ್ ಬಾರಿಸುತ್ತಿದ್ದಂತೆ ಈ ಸಾಧನೆ ಮಾಡಿದರು. ರಾಯುಡು 32 ರನ್ ಬಾರಿಸಿ ಮುರುಗನ್ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದರು. ಈ ಆವೃತ್ತಿಯಲ್ಲಿ ರಾಯುಡು ವೈಯುಕ್ತಿಕ ಸ್ಕೋರ್ 82 ರನ್’ಗಳಾಗಿವೆ.
ಇನ್ನು ಡೆಲ್ಲಿ ಡೇರ್’ಡೆವಿಲ್ಸ್ ಬ್ಯಾಟ್ಸ್’ಮನ್ ರಿಶಭ್ ಪಂತ್ 375 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದರೆ ಕೊಹ್ಲಿ[357] ಮೂರನೇ ಸ್ಥಾನದಲ್ಲಿದ್ದಾರೆ.