ಮಹಿಳೆಯರ ಟಿ20 ಕ್ರಿಕೆಟ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 3-1 ಸರಣಿ ಜಯ

First Published 24, Feb 2018, 8:33 PM IST
Allround India women beat South Africa by 54 runs
Highlights

ಕೇಪ್'ಟೌನ್'ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ 54 ರನ್'ಗಳಿಂದ ಮಣಿಸಿ ಪರಾಕ್ರಮ ಮೆರೆದರು. ಹರಿಣಿಗಳ ತಂಡದ ನಾಯಕಿ ಡಿ ವ್ಯಾನ್ ನಿಕೆರ್ಕ್ ಟಾಸ್ ಗೆದ್ದು ಭಾರತ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು.

ಕೇಪ್'ಟೌನ್(ಫೆ.24): ಭಾರತದ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 3-1 ಕೈವಶ ಮಾಡಿಕೊಂಡಿತು.

ಕೇಪ್'ಟೌನ್'ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ 54 ರನ್'ಗಳಿಂದ ಮಣಿಸಿ ಪರಾಕ್ರಮ ಮೆರೆದರು. ಹರಿಣಿಗಳ ತಂಡದ ನಾಯಕಿ ಡಿ ವ್ಯಾನ್ ನಿಕೆರ್ಕ್ ಟಾಸ್ ಗೆದ್ದು ಭಾರತ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು.

ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಅವರ ಬಿರುಸಿನ ಅರ್ಧ ಶತಕ(62: 50 ಎಸೆತ, 3 ಸಿಕ್ಸ್'ರ್, 8 ಬೌಂಡರಿ ) ಹಾಗೂ ಉದಯೋನ್ಮುಖ ಆಟಗಾರ್ತಿ ಜೆ ರಾಡ್ರಿಗಸ್ (44: 34 ಎಸೆತ, 3 ಬೌಂಡರಿ ಹಾಗೂ 2 ಸಿಕ್ಸ್'ರ್) ಹಾಗೂ ನಾಯಕಿ ಹರ್ಮೀತ್ ಕೌರ್(27: 19 ಎಸೆತ, 1 ಬೌಂಡರಿ ಹಾಗೂ 2 ಸಿಕ್ಸ್'ರ್) ಅವರ ಸ್ಫೋಟಕ ಆಟದಿಂದ 20 ಓವರ್'ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದರು.

ಗಾಯಕ್'ವಾಡ್, ಧಾರ್, ಪಾಂಡೆ ಬೌಲಿಂಗ್ ದಾಳಿಗೆ ಹರಿಣಿಗಳು ಧೂಳಿಪಟ

ಸಾಧಾರಣ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಕನ್ನಡತಿ ರಾಜೇಶ್ವರಿ ಗಾಯ್ಕವಾಡ್ (26/3), ಆರ್.ಧಾರ್ (26/3) ಹಾಗೂ ಎಸ್.ಪಾಂಡೆ 16/3 ಅವರ ಬೌಲಿಂಗ್ ದಾಳಿಗೆ 18 ಓವರ್'ಗಳಿಗೆ 112 ರನ್'ಗಳಿಗೆ ಸರ್ವಪತನ ಕಂಡಿತು. ಸಿಎಲ್ ಟ್ರೈಯಾನ್(25) ಹಾಗೂ ಎಂ.ಕಾಪ್ (27) ಅವರನ್ನು ಬಿಟ್ಟರೆ ಉಳಿದವರ್ಯಾರು 20ರ ಗಡಿ ದಾಟಲಿಲ್ಲ.

ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಮಿಥಾಲಿ ರಾಜ್ ಪಂದ್ಯ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು.

ಸ್ಕೋರ್ ವಿವರ

ಭಾರತ 20 ಓವರ್'ಗಳಲ್ಲಿ 166/4

ದಕ್ಷಿಣ ಆಫ್ರಿಕಾ 18 ಓವರ್'ಗಳಿಗೆ 112/10

ಪಂದ್ಯ ಹಾಗೂ ಸರಣಿ ಶ್ರೇಷ್ಠ: ಮಿಥಾಲಿ ರಾಜ್

ಭಾರತಕ್ಕೆ 3-1 ಸರಣಿ ಜಯ

loader