ಕ್ವಾರ್ಟರ್‌ನಲ್ಲಿ ಮುಗ್ಗರಿಸಿದ ಸೈನಾ -ಶ್ರೀಕಾಂತ್
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿದೆ. ಮಹಿಳೆಯರ ಸಿಂಗಲ್ಸ್ ವಿಭಾದಲ್ಲಿ ಸೈನಾ ನೆಹ್ವಾಲ್ ಸೋಲು ಅನುಭವಿಸಿದರೆ, ಪುರಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಕಿದಂಬಿ ಮುಗ್ಗರಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್(ಮಾ.09): ವಿಶ್ವ ನಂ.1 ಚೈನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ ಭಾರತದ ತಾರಾ ಆಟಗಾರ್ತಿ ಸೈನಾ ನೆಹ್ವಾಲ್‌ರ ಸೋಲಿನ ಗೋಳು ಮುಂದುವರಿದಿದೆ. ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಶುಕ್ರವಾರ, ಸೈನಾ ಮತ್ತೊಮ್ಮೆ ತೈ ತ್ಸು ವಿರುದ್ಧ ಸೋಲುಂಡರು. 15-21, 19-21 ಗೇಮ್‌ಗಳಲ್ಲಿ ಸೋಲುಂಡ 8ನೇ ಶ್ರೇಯಾಂಕಿತ ಆಟಗಾರ್ತಿ ಟೂರ್ನಿಯಿಂದ ಹೊರಬಿದ್ದರು.
ಇದನ್ನೂ ಓದಿ: ಭಾರತಕ್ಕೆ ಕ್ರೀಡಾತಿಥ್ಯ ಕೈತಪ್ಪುವ ಭೀತಿ!
ಕೇವಲ 37 ನಿಮಿಷಗಳಲ್ಲಿ ಗೆಲುವು ಸಾಧಿಸಿದ ತೈ ತ್ಸುಗಿದು ಸೈನಾ ವಿರುದ್ಧ ಸತತ 13ನೇ ಗೆಲುವು. 2015ರಿಂದ ತೈಪೆ ಆಟಗಾರ್ತಿ ವಿರುದ್ಧ ಸೈನಾ ಗೆದ್ದೇ ಇಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಪಂದ್ಯದ ಮೊದಲ ಗೇಮ್ ಅನ್ನು ಸುಲಭವಾಗಿ ಬಿಟ್ಟುಕೊಟ್ಟಸೈನಾ, 2ನೇ ಗೇಮ್‌ನಲ್ಲಿ ಹೋರಾಟ ಪ್ರದರ್ಶಿಸಿದರು. ಆದರೆ ತೈ ತ್ಸು ವೇಗಕ್ಕೆ ಸೈನಾ ಬಳಿ ಉತ್ತರವಿರಲಿಲ.
ಸೋಲಿನ ಬಳಿಕ ಮಾತನಾಡಿದ ಭಾರತೀಯ ಆಟಗಾರ್ತಿ, ‘ಅಗ್ರ ಆಟಗಾರ್ತಿಯರ ವಿರುದ್ಧ ಉತ್ತಮ ಹೋರಾಟ ಪ್ರದರ್ಶಿಸುವಷ್ಟುಫಿಟ್ನೆಸ್ ಮರಳಿ ಪಡೆದಿದ್ದೇನೆ ಎನ್ನುವ ಬಗ್ಗೆ ಖುಷಿ ಇದೆ. ಹೋರಾಟ ಮುಂದುವರಿಸುತ್ತೇನೆ. ಉದರ ಬೇನೆ ಕಾರಣ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚಿನ ಹೋರಾಟ ನಡೆಸಲು ಆಗಲಿಲ್ಲ’ ಎಂದರು.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಫಿಕ್ಸಿಂಗ್ - ಮಂಡಳಿ ಅಧ್ಯಕ್ಷನಿಗೆ 10 ವರ್ಷ ನಿಷೇಧ ಶಿಕ್ಷೆ!
ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್ ಕಿದಂಬಿ ಮುಗ್ಗರಿಸಿದ್ದಾರೆ. ಜಪಾನ್‌ನ ನಕೆಂಟೊಮೊಮೊಟಾ ವಿರುದ್ಧ 12-21, 16-21 ಗೇಮ್‌ಗಳಲ್ಲಿ ಸೋಲುಂಡಿದ್ದಾರೆ.