ಡೇವಿಡ್ ವಾರ್ನರ್ ಬದಲಿಗೆ ಹೈದರಾಬಾದ್ ತಂಡಕ್ಕೆ ಸ್ಪೋಟಕ ಆಟಗಾರ ಆಯ್ಕೆ

First Published 31, Mar 2018, 3:08 PM IST
Alex Hales Replaces David Warner In Sunrisers Hyderabad Squad
Highlights

ಈಗಾಗಲೆ ತಂಡದ ನಾಯಕನನ್ನಾಗಿ ಕೇನ್ ವಿಲಿಯಮ್ಸ್'ನ್ ಅವರನ್ನು ನೇಮಕ ಮಾಡಲಾಗಿದೆ. ಅಲೆಕ್ಸ್ ಹಾಲೆಸ್ ಇಂಗ್ಲೆಂಡ್ ತಂಡದ ಪರ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಏಕೈಕ ಬ್ಯಾಟ್ಸ್'ಮೆನ್ ಆಗಿದ್ದಾರೆ.

ಮುಂಬೈ(ಮಾ.31): ಚಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ಹಾಗೂ ಐಪಿಎಲ್'ನ ಹೈದರಾಬಾದ್ ತಂಡಕ್ಕೆ ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಡೇವಿಡ್ ವಾರ್ನರ್ ಬದಲಿಗೆ ಇಂಗ್ಲೆಂಡ್ ತಂಡದ ಬಲಗೈ ಬ್ಯಾಟ್ಸ್'ಮೆನ್ ಅಲೆಕ್ಸ್ ಹಾಲೆಸ್ ಆಯ್ಕೆ ಮಾಡಿಕೊಳ್ಳಲಾಗಿದೆ.

ಹರಾಜಿನಲ್ಲಿ ಈ ಆಟಗಾರನ ಮೂಲ ಬೆಲೆ 1 ಕೋಟಿ ರೂ.ಇದೆ. ಸನ್ ರೈರ್ಸರ್ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ತಂಡದ ಪ್ರಕಟಣೆ ತಿಳಿಸಲಾಗಿದೆ. ಈಗಾಗಲೆ ತಂಡದ ನಾಯಕನನ್ನಾಗಿ ಕೇನ್ ವಿಲಿಯಮ್ಸ್'ನ್ ಅವರನ್ನು ನೇಮಕ ಮಾಡಲಾಗಿದೆ. ಅಲೆಕ್ಸ್ ಹಾಲೆಸ್ ಇಂಗ್ಲೆಂಡ್ ತಂಡದ ಪರ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಏಕೈಕ ಬ್ಯಾಟ್ಸ್'ಮೆನ್ ಆಗಿದ್ದಾರೆ.

ವಿರೂಪ ಪ್ರಕರಣದಲ್ಲಿ ವಾರ್ನರ್ ಈಗಾಗಲೇ ವಿಶ್ವ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಕ್ಷಮೆ ಕೋರಿದ್ದಾರೆ. ಸ್ಮಿತ್, ವಾರ್ನರ್ ತಲಾ ಒಂದು ವರ್ಷ ಹಾಗೂ ಬ್ಯಾಂಕ್'ಕ್ರಾಪ್ಟ್'ಗೆ 9 ತಿಂಗಳು ನಿಷೇಧ ಹೇರಲಾಗಿದೆ. ಈ ಮೂವರು ಆಟಗಾರರು ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ 3ನೇ ಟೆಸ್ಟ್'ನಲ್ಲಿ ಚಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರು.

loader