2014ರಲ್ಲಿ ಬೆಂಗಳೂರಿನಲ್ಲಿ ಸರ್ಬಿಯಾ ವಿರುದ್ಧ ನಡೆದ ವರ್ಲ್ಡ್ ಗ್ರೂಪ್ ಪ್ಲೇ ಆಫ್ ಪಂದ್ಯವು ನಡೆಯುವ ವೇಳೆಯೇ  ಓರ್ವ ಆಟಗಾರ ತನ್ನ ಗೆಳತಿಯನ್ನು ಕೊಠಡಿಯೊಳಗೆ ಕರೆದುಕೊಂಡು ಹೋಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ನವದೆಹಲಿ(ಡಿ.03): ಅಶಿಸ್ತಿನ ನಡವಳಿಕೆಯ ಆಧಾರದಲ್ಲಿ ಭಾರತೀಯ ಡೇವಿಸ್ ಕಪ್ ಟೆನಿಸ್ ತಂಡದ ‘ಆಡದ ನಾಯಕ’ ಆನಂದ್ ಅಮೃತ್‌ರಾಜ್ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಲು ಭಾರತೀಯ ಟೆನಿಸ್ ಸಂಸ್ಥೆ (ಎಐಟಿಎ) ಚಿಂತನೆ ನಡೆಸಿರುವುದಾಗಿ ‘ಡೆಕ್ಕನ್ ಕ್ರೋನಿಕಲ್’ ಹೇಳಿದೆ.

ಮೂರು ವರ್ಷಗಳ ಹಿಂದೆ ಎಸ್.ಪಿ. ಮಿಶ್ರಾ ಅವರನ್ನು ಡೇವಿಸ್ ಕಪ್ ತಂಡದ ನಾಯಕತ್ವದಿಂದ ಇಳಿಸಿದ್ದಾಗ ಆಟಗಾರರೇ ಆನಂದ್ ಅವರನ್ನು ನಾಯಕರನ್ನಾಗಿ ಆರಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಟಿಎ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ, ‘‘ಇತ್ತೀಚೆಗೆ, ಡೇವಿಸ್ ಕಪ್ ಡ್ರೆಸಿಂಗ್ ರೂಂ ಎನ್ನುವುದು ಯಾರೇ ಆಗಲಿ ಸುಲಭವಾಗಿ ಪ್ರವೇಶಿಸುವಂತ ತಾಣವಾಗಿದೆ’’ ಎಂದು ಆನಂದ್ ವಿರುದ್ಧ ಮಾರ್ಮಿಕವಾಗಿ ಹೇಳಿದ್ದಾರೆ.

2014ರಲ್ಲಿ ಬೆಂಗಳೂರಿನಲ್ಲಿ ಸರ್ಬಿಯಾ ವಿರುದ್ಧ ನಡೆದ ವರ್ಲ್ಡ್ ಗ್ರೂಪ್ ಪ್ಲೇ ಆಫ್ ಪಂದ್ಯವು ನಡೆಯುವ ವೇಳೆಯೇ ಓರ್ವ ಆಟಗಾರ ತನ್ನ ಗೆಳತಿಯನ್ನು ಕೊಠಡಿಯೊಳಗೆ ಕರೆದುಕೊಂಡು ಹೋಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈ ತಿಂಗಳ ಕೊನೆಯಲ್ಲಿ ಅಮೃತ್‌ರಾಜ್ ಅಧಿಕಾರವಧಿ ಮುಕ್ತಾಯವಾಗಲಿದ್ದು, ಅದನ್ನು ಮುಂದುವರೆಸದಿರಲು ಎಐಟಿಎ ನಿರ್ಧರಿಸಿದೆ ಎನ್ನಲಾಗಿದೆ.