ಡಿಸೆಂಬರ್'ನಲ್ಲಿ ನಡೆಯಲಿರುವ ದುಬೈ ಸೂಪರ್ ಸೀರೀಸ್ ಫೈನಲ್ ಅನ್ನು ಗಮನದಲ್ಲಿರಿಸಿಕೊಂಡು ಶ್ರೀಕಾಂತ್ ಈ ತೀರ್ಮಾನ ಕೈಗೊಂಡಿದ್ದಾರೆ.

ನವದೆಹಲಿ(ನ.19): ಗಾಯದ ಸಮಸ್ಯೆಯಿಂದ ಚೀನಾ ಓಪನ್ ಸೂಪರ್ ಸೀರೀಸ್‌'ನಿಂದ ಹಿಂದೆ ಸರಿದಿದ್ದ ಭಾರತದ ತಾರಾ ಶಟ್ಲರ್ ಕಿದಾಂಬಿ ಶ್ರೀಕಾಂತ್, ಮುಂದಿನ ವಾರದಿಂದ ಆರಂಭಗೊಳ್ಳಲಿರುವ ಹಾಂಕಾಂಗ್ ಸೂಪರ್ ಸೀರೀಸ್‌'ನಿಂದಲೂ ಹಿಂದೆ ಸರಿದಿದ್ದಾರೆ.

Add Asianetnews Kannada as a Preferred SourcegooglePreferred

ಡಿಸೆಂಬರ್'ನಲ್ಲಿ ನಡೆಯಲಿರುವ ದುಬೈ ಸೂಪರ್ ಸೀರೀಸ್ ಫೈನಲ್ ಅನ್ನು ಗಮನದಲ್ಲಿರಿಸಿಕೊಂಡು ಶ್ರೀಕಾಂತ್ ಈ ತೀರ್ಮಾನ ಕೈಗೊಂಡಿದ್ದಾರೆ.

‘ಶ್ರೀಕಾಂತ್ ಇದೀಗ ಸುಧಾರಿಸಿದ್ದಾರೆ. ಆದರೆ, ಯಾವುದೇ ಟೂರ್ನಿಗೂ ಮುನ್ನಾ ಅವರು ಶೇ.100ರಷ್ಟು ಗುಣಮುಖವಾಗಿರಬೇಕೆಂದು ನಾವು ಬಯಸುತ್ತೇವೆ. ಆದಕಾರಣ ಶ್ರೀಕಾಂತ್'ಗೆ ಮತ್ತೊಂದು ವಾರ ವಿಶ್ರಾಂತಿ ನೀಡಲು ನಿರ್ಧರಿಸಿದ್ದೇವೆ’ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಪಿಸಿಯೊ ಸಿ.ಕಿರಣ್ ತಿಳಿಸಿದ್ದಾರೆ. ಸ್ನಾಯುಸೆಳೆತಕ್ಕೆ ಒಳಗಾದ ಕಾರಣ ಶ್ರೀಕಾಂತ್‌ಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು.