ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನ್ ತಂಡಕ್ಕೆ ಕನಿಷ್ಠ ಮೊತ್ತದ ಹಣೆಪಟ್ಟಿ

Afghanistan have batted the fewest overs in an innings of their inaugural Test
Highlights

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಲವು ಕುಖ್ಯಾತಿಗೆ ಪಾತ್ರವಾಗಿದೆ. ಅಫ್ಘಾನ್ ತಂಡ ಕಟ್ಟಿಕೊಂಡ ಹಣೆಪಟ್ಟಿ ಯಾವುದು?

ಬೆಂಗಳೂರು(ಜೂ.15): ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯ ಅಸ್ಗರ್ ಸ್ಟಾನಿಕ್‌ಜೈ ತಂಡ ಹಲವು ಕುಖ್ಯಾತಿಗೆ ಪಾತ್ರವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಫ್ಘಾನ್ ಅಲ್ಪ ಮೊತ್ತಕ್ಕೆ ಆಲೌಟ್ ಆಗೋ ಮೂಲಕ ಬಾರಿ ಹಿನ್ನೆಡೆ ಅನುಭವಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ಕೇವಲ 27.5 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಚೊಚ್ಚಲ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಓವರ್ ಆಡಿದ ತಂಡ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. 

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕನಿಷ್ಠ ಓವರ್ ಆಡಿದ ತಂಡ

ತಂಡ ಓವರ್ ಇನ್ನಿಂಗ್ಸ್
ಅಫ್ಘಾನಿಸ್ತಾನ 27.5 1ನೇ
ಬಾಂಗ್ಲಾದೇಶ 46.3 2ನೇ
ನ್ಯೂಜಿಲೆಂಡ್ 47.1 1ನೇ
ಐರ್ಲೆಂಡ್ 47.2 1ನೇ
ಪಾಕಿಸ್ತಾನ 58.2 2ನೇ
ಭಾರತ 59.3 2ನೇ

 

ಅಲ್ಪಮೊತ್ತದ ಜೊತೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತೀ ಕಡಿಮೆ ಮೊತ್ತ ದಾಖಲಿಸಿದ ತಂಡ ಅನ್ನೋ ಕುಖ್ಯಾತಿಗೂ ಅಫ್ಘಾಸ್ತಾನ ಪಾತ್ರವಾಗಿದೆ. 

ಚಿನ್ನಸ್ವಾಮಿಯಲ್ಲಿ ಕನಿಷ್ಠ ಮೊತ್ತ ದಾಖಲಿಸಿದ ತಂಡ

ತಂಡ     ಮೊತ್ತ ಎದುರಾಳಿ     ವರ್ಷ
ಅಫ್ಘಾನಿಸ್ತಾನ 109 ಭಾರತ 2018
ಆಸ್ಟ್ರೇಲಿಯಾ 112 ಭಾರತ 2017
ಪಾಕಿಸ್ತಾನ 116 ಭಾರತ 1987
ಭಾರತ 118 ವೆಸ್ಟ್ಇಂಡೀಸ್ 1975

 

loader