ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದೆ. ಬಾಂಗ್ಲಾದೇಶವನ್ನು ರೋಚಕವಾಗಿ ಮಣಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಢಾಕಾ[ಸೆ.16]: ಸ್ಪಿನ್ನರ್‌ ಮುಜೀಬ್‌ ರಹಮಾನ್‌ (4-15) ಹಾಗೂ ಮೊಹಮದ್‌ ನಬಿ ಆಕರ್ಷಕ ಅರ್ಧಶತಕದ ನೆರವಿನಿಂದ ಆಫ್ಘಾನಿಸ್ತಾನ, ಬಾಂಗ್ಲಾದೇಶ ವಿರುದ್ಧದ ತ್ರಿಕೋನ ಟಿ20 ಸರಣಿಯ 3ನೇ ಪಂದ್ಯದಲ್ಲಿ 25 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ ಆಫ್ಘಾನಿಸ್ತಾನ ಟಿ20ಯಲ್ಲಿ ಸತತ 12ನೇ ಜಯ ಪಡೆ​ದಿದ್ದು, ತನ್ನದೇ ದಾಖಲೆಯನ್ನು ಉತ್ತ​ಮ​ಗೊ​ಳಿಸಿ​ಕೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಂಗ್ಲಾ ಮಣಿಸಿದ ಆಸ್ಟ್ರೇಲಿಯಾ ದಾಖಲೆ ಸರಿಗಟ್ಟಿದ ಅಫ್ಘಾನಿಸ್ತಾನ!

ಭಾನುವಾರ ನಡೆದ ಪಂದ್ಯದಲ್ಲಿ ಆಫ್ಘನ್‌ ನೀಡಿದ 165 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 139 ರನ್‌ಗಳಿಗೆ ಆಲೌಟ್‌ ಆಯಿತು. ಮೊಹ​ಮದ್‌ ನಬಿ 54 ಎಸೆತಗಳ​ಲ್ಲಿ 84 ರನ್‌ ಸಿಡಿಸಿ, ಆಫ್ಘಾ​ನಿ​ಸ್ತಾನ ಸವಾ​ಲಿನ ಮೊತ್ತ ಕಲೆಹಾಕಲು ನೆರ​ವಾ​ಗಿ​ದ್ದರು.

7 ಬಾಲ್‌ಗೆ 7 ಸಿಕ್ಸರ್: ಇತಿಹಾಸ ಬರೆದ ಆಫ್ಘನ್ ಕ್ರಿಕೆಟರ್ಸ್...!

ಆಫ್ಘನ್ ನೀಡಿದ್ದ ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಗುರಿಯಾಯಿತು. ಆರಂಭಿಕರಾದ ಮುಷ್ಫೀಕರ್ ರಹೀಮ್[5], ಲಿಟನ್ ದಾಸ್[0] ಎರಡಂಕಿ ಮೊತ್ತ ದಾಖಲಿಸಲು ವಿಫಲರಾದರು. ನಾಯಕ ಶಕೀಬ್ ಆಟ 15 ರನ್’ಗಳಿಗೆ ಸೀಮಿತವಾಯಿತು. ಮೊಹಮ್ಮದುಲ್ಲಾ[44], ಶಬ್ಬೀರ್ ರೆಹಮಾನ್[24] ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ.

ಟಿ20 ಕ್ರಿಕೆಟ್‌ನಲ್ಲಿ ಆಫ್ಘನ್ ದಾಖಲೆ: ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುವ ಆಫ್ಘಾನಿಸ್ತಾನ ಟಿ20 ಕ್ರಿಕೆಟ್’ನಲ್ಲಿ ಸತತ 12 ಗೆಲುವು ದಾಖಲಿಸಿದ ಅಪರೂಪದ ದಾಖಲೆ ಬರೆದಿದೆ. 2018-19ರ ಅವಧಿಯಲ್ಲಿ ಆಫ್ಘನ್ ಇದುವರೆಗೂ ಸತತ ಒಂದು ಡಜನ್ ಗೆಲುವು ಕಂಡಿದೆ. ಈ ಮೂಲಕ ತಮ್ಮದೇ ದಾಖಲೆಯನ್ನು ಆಫ್ಘನ್ ಅಳಿಸಿ ಹಾಕಿದೆ. 2016-17ರ ಅವಧಿಯಲ್ಲಿ ಆಫ್ಘನ್ 11 ಟಿ20 ಗೆಲುವು ದಾಖಲಿಸಿತ್ತು. ಇದಕ್ಕೂ ಮೊದಲು ಪಾಕಿಸ್ತಾನ 2018ರಲ್ಲಿ ಸತತ 9 ಗೆಲುವು ದಾಖಲಿಸಿತ್ತು. 

ಸ್ಕೋರ್‌:

ಆಫ್ಘಾನಿಸ್ತಾನ 164/6
ಬಾಂಗ್ಲಾದೇಶ 139/10.