ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪಶ್ಚಿಮ ಬಂಗಾಳದ ಸ್ವಪ್ನ ಬರ್ಮನ್ ನೋವಿನಲ್ಲೂ ಸಾಧನೆ ಮಾಡಿದ ಸಾಧಕಿ. ಚಿನ್ನದ ಪದಕ ಗೆದ್ದ ಬೆನ್ನಲ್ಲೇ,  ತನ್ನ ಬಹುದೊಡ್ಡ ಸಮಸ್ಯೆಗೆ ಪರಿಹಾರ ಕೂಡ ಸಿಕ್ಕಿದೆ.

ನವದೆಹಲಿ(ಸೆ.15): 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹೆಪ್ಟಥ್ಲಾನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸ್ಪಪ್ನ ಬರ್ಮನ್ ಐತಿಹಾಸಿಕ ಸಾಧನೆ ಮಾಡಿದ್ದರು. ಗಾಯದ ಸಮಸ್ಯೆ, ಸರಿಯಾದ ಶೂ ಇಲ್ಲದೆ ಓಡಿದ ಸ್ವಪ್ನ ಬರ್ಮನ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಸ್ಪಪ್ನ ಬರ್ಮನ್ ಸಾಮಾನ್ಯ ಶೂ ಸರಿಹೊಂದುವುದಿಲ್ಲ. ಕಾರಣ ಸ್ಪಪ್ನ ಕಾಲಿನಲ್ಲಿ 6 ಬೆರಳುಗಳಿವೆ. ಹೀಗಾಗಿ ಸ್ಪಪ್ನ ಇಲ್ಲೀವರೆಗೂ ಸರಿಯಾದ ಶೂ ಇಲ್ಲದೆ ಓಡಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲೋ ಮೂಲಕ ಸ್ವಪ್ನ ಶೂ ಸಮಸ್ಯೆ ಬಹಿರಂಗವಾಗಿತ್ತು.

ಸಪ್ನ ಸಮಸ್ಯೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ) ಪರಿಹಾರ ಹುಡುಕಿದೆ. ಸ್ಪೋರ್ಟ್ಸ್ ಶೂ ತಯಾರಿಕಾ ಕಂಪೆನಿ ಅಡಿಡಾಸ್ ಜೊತೆ ಸಾಯಿ ಮಾತುಕತೆ ನಡೆಸಿದೆ. ಸ್ವಪ್ನ ಬರ್ಮನ್‌ಗೆ ವಿಶೇಷ ಶೂ ನೀಡುವುದಾಗಿ ಅಡಿಡಾಸ್ ಒಪ್ಪಿಕೊಂಡಿದೆ. 

ಪಶ್ಚಿಮ ಬಂಗಾಳದ ಈ ಚಿನ್ನದ ಸಾಧಕಯ ಬಹುದೊಡ್ಡ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ. ಇಷ್ಟೇ ಅಲ್ಲ ಮುಂದಿನ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಂತಾಗಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.