ಬೆಂಗಳೂರು[ಡಿ.10]: ಟೆಸ್ಟ್ ಕ್ರಿಕೆಟ್’ನಲ್ಲಿ ವಿಕೆಟ್’ಕೀಪರ್ ರಿಷಭ್ ಪಂತ್ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸ್ಥಾನ ತುಂಬುತ್ತಾರೋ ಇಲ್ಲವೋ ಎನ್ನುವುದನ್ನು ಕಾಲವೇ ಉತ್ತರಿಸಬೇಕು. ಆದರೆ ವಿಕೆಟ್ ಹಿಂದೆ ನಿಂತು ಬೌಲರ್’ಗಳ ಹುರಿದುಂಬಿಸುವಲ್ಲಿ ಮಾತ್ರ ಯಶಸ್ವಿಯಾಗುತ್ತಿದ್ದಾರೆ.

ಕ್ರಿಕೆಟ್ ವೃತ್ತಿ ಜೀವನದಲ್ಲಿ ಆರನೇ ಟೆಸ್ಟ್ ಪಂದ್ಯವಾಡಿದ ಪಂತ್, 11 ಕ್ಯಾಚ್ ಪಡೆಯುವ ಮೂಲಕ ವಿಶ್ವದಾಖಲೆ ಸರಿಗಟ್ಟಿದ್ದಾರೆ. ವಿಕೆಟ್ ಕೀಪಿಂಗ್’ನಲ್ಲಿ ಕೈಚಳಕ ತೋರಿರುವ 21 ವರ್ಷದ ಡೆಲ್ಲಿ ಮೂಲದ ಪಂತ್, ಬಾಯಿ ಮೂಲಕವೂ ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ. ಅಡಿಲೇಡ್ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ರಕ್ಷಣಾತ್ಮಕವಾಗಿ ಆಡುತ್ತಿದ್ದ ಉಸ್ಮಾನ್ ಖ್ವಾಜಾ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದ ಪಂತ್, ಅಂತಿಮ ದಿನ ಪ್ಯಾಟ್ ಕಮ್ಮಿನ್ಸ್ ಕಾಲೆಳೆಯುವ ಮೂಲಕ ಸುದ್ದಿಯಾಗಿದ್ದಾರೆ.

ವಿಶ್ವದಾಖಲೆ ನಿರ್ಮಿಸಿ ದಿಗ್ಗಜರ ಸಾಲಿಗೆ ಸೇರಿದ ರಿಷಭ್ ಪಂತ್

ಮೊದಲ ಇನ್ನಿಂಗ್ಸ್’ನಲ್ಲಿ 6 ಕ್ಯಾಚ್ ಪಡೆಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದ ಪಂತ್, ತಾವಾಡುತ್ತಿರುವ 6ನೇ ಪಂದ್ಯದಲ್ಲಿ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ. 

ಅಡಿಲೇಡ್ ದಿಗ್ವಿಜಯ: ಟ್ವಿಟರಿಗರ ಹೃದಯ ಗೆದ್ದ ಮೊದಲ ಟೆಸ್ಟ್

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಪ್ಯಾಟ್ ಕಮ್ಮಿನ್ಸ್ ಪಿಚ್’ಗೆ ಹೊಂದಿಕೊಳ್ಳುವ ಮೊದಲೇ ಪಂತ್ ಸ್ಲೆಡ್ಜಿಂಗ್ ಆರಂಭಿಸಿಬಿಟ್ಟರು. 2 ಓವರ್ ಎದುರಿಸಿದರು ಕಮ್ಮಿನ್ಸ್ ರನ್ ಖಾತೆ ತೆರೆಯದಿದ್ದಾಗ, ’ಈಗ ಕೆಲವು ಸಿಕ್ಸರ್ ನೋಡೋಣ, ಕಮ್ ಆನ್ ಪ್ಯಾಟಿ’ ಎನ್ನುವ ಮೂಲಕ ಸ್ಲೆಡ್ಜಿಂಗ್ ಶುರುಮಾಡಿದರು.

ಪಂತ್ ಹೇಗೆಲ್ಲ ಸ್ಲೆಡ್ಜಿಂಗ್ ಮಾಡಿದ್ರು ಅನ್ನೋದನ್ನು ನೀವೂ ಒಮ್ಮೆ ನೋಡಿ...

ಸ್ಲೆಡ್ಜಿಂಗ್ ಮಾಡುವುದರಲ್ಲಿ ಫೇಮಸ್ ಆಗಿರುವ ಆಸ್ಟ್ರೇಲಿಯನ್ನರಿಗೆ ಅವರ ನೆಲದಲ್ಲೇ ಅವರಿಗೆ ಸ್ಲೆಡ್ಜಿಂಗ್ ಮಾಡುವ ಮೂಲಕ ಪಂತ್ ಭಾರತೀಯ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 

ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 31 ರನ್’ಗಳಿಂದ ಮಣಿಸುವ ಮೂಲಕ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 14ರಂದು ಪರ್ತ್’ನಲ್ಲಿ ಆರಂಭವಾಗಲಿದೆ.