ಒಲಿಂಪಿಕ್ಸ್‌ಗೆ ತಯಾರಾಗಲು ಆಥ್ಲೀಟ್‌ಗೆ ಶೂ ಕೊಡಿಸಿದ ಸೋನು ಸೂದ್
ನಟ ಸೋನು ಸೂದ್ ಅಥ್ಲೀಟ್‌ವೊಬ್ಬರಿಗೆ ಅಗತ್ಯವಾಗಿ ಬೇಕಿದ್ದ ಶೂಗಳನ್ನು ಒದಗಿಸುವ ಮೂಲಕ ಒಲಿಂಪಿಕ್ಸ್‌ಗೆ ಸಜ್ಜಾಗಲು ನೆರವಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.31): ನಟ ಸೋನು ಸೂದ್ ಸಾಮಾಜಿಕ ಕಳಕಳಿಯ ಕೆಲಸವನ್ನು ಮುಂದುವರೆಸಿದ್ದು, ನೆರವು ಯಾಚಿಸುವವರ ಪಾಲಿಗೆ ಸೋನು ಮತ್ತೆ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ. ಹೌದು, ಬೇರೆ ಸ್ನೇಹಿತರ ಬಳಿ ಶೂ ಪಡೆದ ತರಬೇತಿಯಲ್ಲಿ ಪಾಲ್ಗೊಂಡಿದ್ದ ಭರವಸೆಯ ಅಥ್ಲೀಟ್‌ವೊಬ್ಬರಿಗೆ ಶೂ ಹಾಗೂ ಐಎಎಸ್ ಆಕಾಂಕ್ಷಿಯೊಬ್ಬರಿಗೆ ಅಗತ್ಯವಿದ್ದ ಪುಸ್ತಕಗಳನ್ನು ಕೊಡಿಸಿ ಸೈ ಎನಿಸಿಕೊಂಡಿದ್ದಾರೆ.
ಮನೋಜ್ ಎನ್ನುವ ಅಥ್ಲೀಟ್‌ವೊಬ್ಬರು, ತಮ್ಮ ಬಗ್ಗೆ ಪ್ರಕಟವಾಗಿರು ವರದಿಯೊಂದನ್ನು ಟ್ವಿಟರ್‌ನೊಂದಿಗೆ ಹಂಚಿಕೊಂಡು ಸೋನು ಸೂದ್ ಬಳಿ, ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ನಾನು ಒಳ್ಳೆಯ ಪ್ರದರ್ಶನ ನೀಡುತ್ತಲೇ ಬಂದಿದ್ದೇನೆ. ನನಗೆ ಹಾಗೂ ನನ್ನ ಆಟಕ್ಕೆ ನಿಮ್ಮ ಬೆಂಬಲ ಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಈ ಟ್ವೀಟ್ ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಪ್ರತಿಕ್ರಿಯಿಸಿದ ಸೋನು ಸೂದ್, ಆಯ್ತು, ಇಂದೇ ಶೂಗಳು ನಿಮ್ಮ ಕೈ ಸೇರಲಿವೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಬ್ಬ ವ್ಯಕ್ತಿ ನಮ್ಮ ಸಹೋದರಿಯೊಬ್ಬರು ನಾಗರೀಕ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಆಕೆಗೆ ಸಿದ್ಧತೆ ನಡೆಸಲು ಕೆಲವೊಂದು ಅಧ್ಯಯನ ಸಾಮಾಗ್ರಿಗಳ ಅಗತ್ಯವಿದೆ. ರೈತ ಕುಟುಂಬದ ಹಿನ್ನೆಲೆಯಿರುವ ಆಕೆಯ ತಂದೆಗೆ ಇಂತಹ ಕಷ್ಟದ ಸಂದರ್ಭದಲ್ಲಿ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ದಯಮಾಡಿ ಸಹಾಯ ಮಾಡಿ ಎಂದು ಸೋನು ಅವರ ಬಳಿ ಮನವಿ ಮಾಡಿಕೊಂಡಿದ್ದರು.
ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಲು ಯುವಕರಿಗೆ ಕರೆ ನೀಡಿದ ಸೋನು ಸೂದ್!
ಇದಕ್ಕೆ ಸೋನು ಸೂದ್ ನಾಳೆಯೊಳಗಾಗಿ ಪುಸ್ತಕಗಳು ಲಭ್ಯವಾಗಲಿದೆ ಎಂದು ಹೇಳುವ ಮೂಲಕ ಆಸರೆಯಾಗಿದ್ದಾರೆ.
ಸೋನು ಸೂದ್ ಅಗತ್ಯವಿದ್ದವರಿಗೆ ನೆರವಾಗುತ್ತಿರುವುದು ಇದೇ ಮೊದಲೇನಲ್ಲ. ಕೊರೋನಾ ಭೀತಿಯಿಂದಾಗಿ ಲಾಕ್‌ಡೌನ್ ಆದಾಗ ವಲಸೆ ಕಾರ್ಮಿಕರ ನೆರವಿಗೆ ಮೊದಲು ಧಾವಿಸಿದ್ದೇ ಈ ಸೋನು ಸೂದ್. ಆ ಬಳಿಕ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಸೇರಿದಂತೆ ಹಲವಾರು ಜನಪರ ಕೆಲಸಗಳನ್ನು ನಿಭಾಯಿಸುವ ಮೂಲಕ ಸೂದ್ ಇಂದು ದೇಶದ ಜನರ ಮನೆಮಗನಾಗಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.