ಭಾರತೀಯ ಒಲಿಂಪಿಕ್ ಸಂಸ್ಥೆ ಸಂವಿಧಾನ ತಿದ್ದುಪಡಿಗೆ ಅಭಿನವ್ ಬಿಂದ್ರಾ ಮೆಚ್ಚುಗೆ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗೇಶ್ವರ ರಾವ್ ಅವರ ನೇತೃತ್ವದಲ್ಲಿ ಮಾಡಲಾಗಿರುವ ಭಾರತೀಯ ಒಲಿಂಪಿಕ್ ಸಂಸ್ಥೆಯ ಸಂವಿಧಾನದ ಕಾಯ್ದೆಗಳ ತಿದ್ದುಪಡಿಗೆ ಭಾರತದ ಮೊಟ್ಟಮೊದಲ ಒಲಿಂಪಿಕ್ ಚಾಂಪಿಯನ್ ಶೂಟರ್ ಅಭಿನವ್ ಬಿಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ನ.4): ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿನಾಗೇಶ್ವರ್ ರಾವ್ ನೇತೃತ್ವದಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯ ಸಂವಿಧಾನದಲ್ಲಿ ಮಾಡಿರುವ ಕಾಯ್ದೆಗಳ ತಿದ್ದುಪಡಿಗೆ ಶೂಟರ್ ಅಭಿನವ್ ಬಿಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಬಳಿಕ, ಅನಿಲ್ ಖನ್ನಾ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಸುಪ್ರೀಂ ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ, ನ್ಯಾಯಮೂರ್ತಿ ನಾಗೇಶ್ವರ ರಾಮ್ ಅವರನ್ನು ಐಒಎ ಸಂವಿಧಾನ ತಿದ್ದುಪಡಿಗೆ ನೇಮಿಸಿತ್ತಲ್ಲದೆ, ಇವೆಲ್ಲವೂ ಆದ ಬಳಿಕ ಡಿಸೆಂಬರ್ 10 ರಂದು ಚುನಾವಣೆಯನ್ನು ನಡೆಸುವಂತೆ ತಿಳಿಸಿತ್ತು. ನಿವೃತ್ತ ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ಸಮಿತಿಯು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ನಿಯಮಗಳನ್ನು ಪರಿಷ್ಕರಿಸಿದೆ. 10ರಂದು ನಡೆಯಲಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಾಮಾನ್ಯ ಸಭೆಯಲ್ಲಿ ಪರಿಷ್ಕೃತ ಐಒಎ ತಿದ್ದುಪಡಿಗಳನ್ನು ಅಂಗೀಕರಿಸಬೇಕಿದೆ. ಪರಿಷ್ಕೃತ ನಿಯಮಗಳ ಪ್ರತಿಗಳನ್ನು ಎಲ್ಲ ಸದಸ್ಯರಿಗೂ ತಲುಪಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು. ಐಒಎ ತಿದ್ದುಪಡಿಗಳ ಕರಡು ಸಿದ್ಧಪಡಿಸಿದ ನಿವೃತ್ತ ನ್ಯಾಯಮೂರ್ತಿ ನಾಗೇಶ್ವರ ರಾವ್ ಅವರಿಗೆ 20 ಲಕ್ಷ ರೂಪಾಯಿ ಪಾವತಿ ಮಾಡುವಂತೆಯೂ ಕೋರ್ಟ್ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಕಾನೂನು ತಿದ್ದುಪಡಿಗಳನ್ನು ರಚಿಸಿದ ನಿವೃತ್ತ ನ್ಯಾಯಾಧೀಶ ನಾಗೇಶ್ವರ ರಾವ್ ಅವರನ್ನು ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಭಿನವ್ ಬಿಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಥ್ಲೀಟ್‌ಗಳ ಕ್ಷೇಮಾಭಿವೃದ್ಧಿಗೆ ಅಭಿನವ್ ಬಿಂದ್ರಾ ಪಂಚ ಸೂತ್ರ
ಈ ಕುರಿತು ಟ್ವಿಟರ್‌ನಲ್ಲಿ ಹೇಳಿಕೆಯನ್ನು ಹಂಚಿಕೊಂಡಿರುವ ಅಭಿನವ್ ಬಿಂದ್ರಾ, "ಉತ್ತಮ ಚರ್ಚೆಗಳನ್ನು ನಡೆಸಿ ಐಒಎ ಕಾನೂನು ತಿದ್ದುಪಡಿ ಮಾಡಿದ್ದಕ್ಕಾಗಿ ನ್ಯಾಯಮೂರ್ತಿ ನಾಗೇಶ್ವರ ರಾವ್ ಅವರಿಗೆ ನನ್ನ ಅಭಿನಂದನೆಗಳು. ಈ ನಿಟ್ಟಿನಲ್ಲಿ ಸೆಪ್ಟೆಂಬರ್‌ನಲ್ಲಿ ಲಾಸಾನೆಯಲ್ಲಿ ನಡೆದ ಸಮಾಲೋಚನೆ ಅತ್ಯುತ್ತಮವಾಗಿತ್ತು. ಅತ್ಯುತ್ತಮ ವೈಶಿಷ್ಟ್ಯಗಳು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೂಚನೆಗಳ ಪ್ರಕಾರ ಕ್ರೀಡಾಪಟುಗಳ ಆಯೋಗದ ರಚನೆಯಾಗಿದೆ, ಆಡಳಿತದಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿದೆ. ಸದಸ್ಯತ್ವ ರಚನೆಯನ್ನು ಸುಧಾರಿಸುತ್ತದೆ ಮತ್ತು ಆಡಳಿತಾತ್ಮಕ ಅಧಿಕಾರಿಗಳಿಗೆ ಸ್ಪಷ್ಟ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ರಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಡೋಪಿಂಗ್ ಪ್ರಕರಣದಲ್ಲಿ ಹೆಚ್ಚಳ, ಭಾರತ ತಲೆತಗ್ಗಿಸುವ ಸಂಗತಿ: ಅಭಿನವ್ ಬಿಂದ್ರಾ
ಅಭಿನವ್ ಬಿಂದ್ರಾ ತಮ್ಮ ಪತ್ರದಲ್ಲಿ, "ಒಲಿಂಪಿಯನ್ ಮತ್ತು ಪ್ರಸ್ತುತ ಅಥ್ಲೀಟ್ ಪ್ರತಿನಿಧಿಯಾಗಿ ನಾನು ತಿದ್ದುಪಡಿಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಐಒಎಇ ಹಾಗೂ ಒಸಿಎ ನೀತಿ ನಿರ್ಧಾರಗಳ ವೇಳೆ ಕ್ರೀಡಾಪಟುವಿನ ವಿಚಾರವನ್ನೇ ಪ್ರಮುಖವಾಗಿ ಇರಿಸಲಾಗುತ್ತದೆ. ಇದನ್ನು ನಾನು ಪ್ರಶಂಸಿಸುತ್ತೇನೆ. ಭಾರತದಲ್ಲಿ ಒಲಿಂಪಿಕ್ ಕುಟುಂಬವನ್ನು ಒಗ್ಗೂಡಿಸಿ ಮತ್ತು ಈ ಸುಧಾರಣೆಯನ್ನು ಅದರ ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯುವಂತೆ ನಾನು ಒತ್ತಾಯಿಸುತ್ತೇನೆ' ಎಂದು ಅವರು ಬರೆದಿದ್ದಾರೆ.