ಬೆಂಗ​ಳೂ​ರು[ಸೆ.07]​: ಬಂಗಾ​ಳದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿ​ಮನ್ಯು ಈಶ್ವ​ರನ್‌ನ ಅಮೋಘ 153 ರನ್‌ಗಳ ನೆರ​ವಿ​ನಿಂದ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ರೆಡ್‌ ತಂಡ, ಭಾರತ ಗ್ರೀನ್‌ ವಿರು​ದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿ​ಸಿದ್ದು, ಪ್ರಶ​ಸ್ತಿ​ಯತ್ತ ಹೆಜ್ಜೆ ಹಾಕಿದೆ. 

ದುಲೀಪ್‌ ಟ್ರೋಫಿ: ರೆಡ್‌-ಗ್ರೀನ್‌ ಫೈನ​ಲ್‌

ಪಂದ್ಯದ 3ನೇ ದಿನ​ವಾದ ಶುಕ್ರ​ವಾರ 2 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿ​ಸಿದ್ದ ಭಾರತ ರೆಡ್‌, ಮೂರನೇ  ದಿನ​ದಂತ್ಯಕ್ಕೆ 6 ವಿಕೆಟ್‌ಗೆ 345 ರನ್‌ ಕಲೆಹಾಕಿ, 114 ರನ್‌ಗಳ ಮುನ್ನಡೆ ಪಡೆ​ದಿತ್ತು. ಇದೀಗ ನಾಲ್ಕನೇ ದಿನದ ಮೊದಲ ಸೆಷನ್ ವೇಳೆಗೆ 388 ರನ್’ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಡಿಯಾ ರೆಡ್ ತಂಡ 157 ರನ್’ಗಳ ಮುನ್ನಡೆ ಪಡೆದಿದೆ. ಅಂಕಿತ್ ರಜಪೂತ್ ಹಾಗೂ ಧರ್ಮೇಂದರ್ ಸಿಂಗ್ ಜಡೇಜಾ ತಲಾ 3 ವಿಕೆಟ್ ಪಡೆದರೆ, ತನ್ವೀರ್ ಉಲ್ ಹಕ್ 2 ಹಾಗೂ ಧೃವ ಶೋರೆ ಮತ್ತು ಮಯಾಂಕ್ ಮಾರ್ಕಂಡೆ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಮಾರ್ಕಂಡೆ ಅಜೇಯ 76 ರನ್’ಗಳ ನೆರವಿನಿಂದ ಭಾರತ ಗ್ರೀನ್‌  231 ರನ್‌ಗಳಿಗೆ ಆಲೌಟ್‌ ಆಗಿತ್ತು. ಜಯದೇವ್ ಉನಾದ್ಕತ್ 4 ವಿಕೆಟ್ ಪಡೆದು ಮಿಂಚಿದ್ದರು.

ಸ್ಕೋರ್‌:

ಭಾರತ ಗ್ರೀನ್‌ 231/10

ಭಾರತ ರೆಡ್‌ 388/10