ಬೆಂಗ​ಳೂ​ರು[ಸೆ.02]: ಭಾರತ ರೆಡ್‌ ಹಾಗೂ ಗ್ರೀನ್‌ ತಂಡಗಳ ನಡುವಣ ದುಲೀಪ್‌ ಟ್ರೋಫಿ 3ನೇ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ನೆಟ್‌ರನ್‌ ರೇಟ್‌ ಆಧಾರದಲ್ಲಿ ಭಾರತ ಗ್ರೀನ್‌ ತಂಡ, ಬ್ಲೂ ತಂಡವನ್ನು ಹಿಂದಿಕ್ಕಿ ಫೈನಲ್‌ ಪ್ರವೇಶಿಸಿದೆ. 

ದುಲೀಪ್‌ ಟ್ರೋಫಿ: ಡ್ರಾದತ್ತ ಗ್ರೀನ್‌-ರೆಡ್‌ ಪಂದ್ಯ

ಆಡಿದ 2 ಪಂದ್ಯಗಳಲ್ಲಿ ಇನ್ನಿಂಗ್ಸ್‌ ಮುನ್ನಡೆ ದಾಖಲಿಸಿ 6 ಅಂಕಗಳಿಸಿದ ಭಾರತ ರೆಡ್‌ ನಿರೀಕ್ಷೆಯಂತೆ ಫೈನಲ್‌ಗೇರಿತು. ಬುಧವಾರ (ಸೆ.4) ಫೈನಲ್‌ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. 

4ನೇ ಹಾಗೂ ಕೊನೆಯ ದಿನವಾದ ಭಾನುವಾರ 9 ವಿಕೆಟ್‌ಗೆ 404 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದುವರೆಸಿದ ಭಾರತ ರೆಡ್‌ 441 ರನ್‌ಗಳಿಗೆ ಆಲೌಟ್‌ ಆಯಿತು. 1 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಗ್ರೀನ್‌ ದಿನದಂತ್ಯಕ್ಕೆ 3 ವಿಕೆಟ್‌ಗೆ 98 ರನ್‌ಗಳಿಸಿತು.

ಸ್ಕೋರ್‌: 
ಭಾರತ ಗ್ರೀನ್‌ 440 ಹಾಗೂ 98/3 
ಭಾರತ ರೆಡ್‌ 441/10