ಪ್ರತಿಬಾರಿಯೂ ಕ್ರೀಡಾಪಟುಗಳು ಪದಕ ಗೆದ್ದಾಗ ಬಹುಮಾನ ರೂಪದಲ್ಲಿ ಸರ್ಕಾರಗಳು ನಗದು ಹಣ, ಸರ್ಕಾರಿ ಉದ್ಯೋಗ, ಜಮೀನು, ಐಷಾರಾಮಿ ಕಾರುಗಳನ್ನು ನೀಡುವುದನ್ನು ನೋಡಿರುತ್ತೇವೆ. ಆದರೆ ಹರಿಯಾಣ ಸರ್ಕಾರ ಪದಕ ಗೆದ್ದ ಕ್ರೀಡಾಪಟುಗಳಿಗೆ ದೇಶಿ ತಳಿ ಹಸುಗಳನ್ನು ನೀಡಲು ಮುಂದಾಗಿದೆ.

ರೋಹ್ಟಕ್(ಡಿ.01): ಕ್ರೀಡೆಗೂ ಗೋವಿನ ರಾಜಕೀಯ ಕಾಲಿಟ್ಟಿತಾ..? ಹೌದು ಹೀಗೊಂದು ಅನುಮಾನ ಶುರುವಾಗಿದೆ. ಹೌದು, ಹರ್ಯಾಣದ ಬಿಜೆಪಿ ಸರ್ಕಾರ ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ ವಿಶ್ವ ಮಹಿಳಾ

ಯೂತ್ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌'ನಲ್ಲಿ ಪದಕ ಗೆದ್ದ ರಾಜ್ಯದ 6 ಬಾಕ್ಸರ್‌'ಗಳಿಗೆ ಸರ್ಕಾರ ಬಹುಮಾನವಾಗಿ ದೇಶಿ ತಳಿ ಹಸುವನ್ನು ನೀಡುವುದಾಗಿ ಘೋಷಿಸಿದೆ.

ಪ್ರತಿಬಾರಿಯೂ ಕ್ರೀಡಾಪಟುಗಳು ಪದಕ ಗೆದ್ದಾಗ ಬಹುಮಾನ ರೂಪದಲ್ಲಿ ಸರ್ಕಾರಗಳು ನಗದು ಹಣ, ಸರ್ಕಾರಿ ಉದ್ಯೋಗ, ಜಮೀನು, ಐಷಾರಾಮಿ ಕಾರುಗಳನ್ನು ನೀಡುವುದನ್ನು ನೋಡಿರುತ್ತೇವೆ. ಆದರೆ ಹರಿಯಾಣ ಸರ್ಕಾರ ಪದಕ ಗೆದ್ದ ಕ್ರೀಡಾಪಟುಗಳಿಗೆ ದೇಶಿ ತಳಿ ಹಸುಗಳನ್ನು ನೀಡಲು ಮುಂದಾಗಿದೆ.

ಪದಕ ವಿಜೇತ ಬಾಕ್ಸರ್'ಗಳನ್ನು ಸ್ವಾಗತಿಸಿದ ಹರ್ಯಾಣ ಕೃಷಿ ಸಚಿವ ಒಪಿ ಧನಕರ್ ಹಸು ಬಹುಮಾನವನ್ನು ಘೋಷಿಸಿದ್ದಾರೆ.

Scroll to load tweet…

ಗೋವಿನ ಹಾಲು ಯುವತಿಯರನ್ನು ಸುಂದರವಾಗಿಸುತ್ತದೆ, ಜತೆಗೆ ಅವರ ತೋಳುಗಳಲ್ಲಿ ಶಕ್ತಿ ತುಂಬುತ್ತದೆ ಎಂದರು.

ರಾಜ್ಯದ ನೀತು, ಸಾಕ್ಷಿ, ಜ್ಯೋತಿ, ಶಶಿ ಚಿನ್ನ ಗೆದ್ದರೆ, ಅನುಪಮಾ, ನೇಹ ಕಂಚು ಗೆದ್ದಿದ್ದರು.