Asianet Suvarna News Asianet Suvarna News

ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಕತಾರ್ ವಿರುದ್ಧ ಡ್ರಾ ಸಾಧಿಸಿದ ಭಾರತ

ಏಷ್ಯಾ ಫುಟ್ಬಾಲ್ ಚಾಂಪಿಯನ್ ಕತಾರ್ ವಿರುದ್ಧ ಭಾರತ ತಂಡ ರೋಚಕ ಡ್ರಾ ಸಾಧಿಸಿದೆ. ಗೋಲು ರಹಿತ ಪಂದ್ಯವಾದರೂ ಉಭಯ ತಂಡಗಳಿಂದ ರೋಚಕ ಕಾದಾಟ ಮೂಡಿಬಂತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

FIFA 2022 World Cup Qualifier Football Gurpreet Singh Sandhu ensures goalless draw with clutch saves
Author
Doha, First Published Sep 11, 2019, 11:24 AM IST

ದೋಹಾ(ಸೆ.11): ಏಷ್ಯನ್ ಚಾಂಪಿಯನ್ ಕತಾರ್‌ಗೆ ಜಿದ್ದಾಜಿದ್ದಿನ ಪೈಪೋಟಿ ನೀಡಿದ ಭಾರತ 0-0 ಯಲ್ಲಿ ಡ್ರಾ ಸಾಧಿಸಿದೆ. ಬಲಿಷ್ಠ ಕತಾರ್ ವಿರುದ್ಧ ಭಾರತ ಫುಟ್ಬಾಲ್ ತಂಡ ಡ್ರಾ ಸಾಧಿಸಿದ್ದು ನಿಜಕ್ಕೂ ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. 

ಇಂದು ಭಾರತ-ಕತಾರ್‌ ವಿಶ್ವ​ಕಪ್‌ ಅರ್ಹತಾ ಪಂದ್ಯ

ಯಾವುದೇ ಗೋಲು ಹೊಡೆಯದಿದ್ದರೂ ಯಾವುದೇ ಗೋಲನ್ನು ಬಿಟ್ಟುಕೊಡದೆ ಕತಾರ್‌ನ್ನು ಕಟ್ಟಿಹಾಕುವಲ್ಲಿ ಭಾರತದ ಫುಟ್ಬಾಲ್ ಆಟಗಾರರು ಯಶಸ್ವಿಯಾಗಿದ್ದಾರೆ. ಮಂಗಳವಾರ ಇಲ್ಲಿ ನಡೆದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ 2ನೇ ಸುತ್ತಿನ ಪಂದ್ಯದಲ್ಲಿ ಖಾಯಂ ನಾಯಕ ಚೆಟ್ರಿ ಅನುಪಸ್ಥಿತಿ ಯಲ್ಲಿ ಗುರ್‌ಪ್ರೀತ್ ನೇತೃತ್ವದ ಭಾರತ ಅದ್ಭುತ ಪ್ರದರ್ಶನ ನೀಡಿತು. 

4ನೇ ಸ್ಥಾನಕ್ಕೆ ಭಾರತ: ಡ್ರಾದಿಂದ ಕತಾರ್, ಭಾರತ ತಲಾ 1 ಅಂಕಗಳಿಸಿವೆ. ‘ಇ’ ಗುಂಪಿನಲ್ಲಿ 4 ಅಂಕಗಳೊಂದಿಗೆ ಕತಾರ್ ಅಗ್ರಸ್ಥಾನದಲ್ಲಿದೆ. ಅಂಕದ ಖಾತೆ ತೆರೆದ ಭಾರತ 4ನೇ ಸ್ಥಾನಕ್ಕೇರಿತು. ಒಮಾನ್ 2 ಹಾಗೂ ಬಾಂಗ್ಲಾ 5ನೇ ಸ್ಥಾನ ದಲ್ಲಿವೆ. 3ನೇ ಸುತ್ತಿಗೇರಲು ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಬೇಕಾದ ಅನಿವಾರ್ಯತೆ ಭಾರತಕ್ಕಿದೆ. ಅ.15ಕ್ಕೆ ಭಾರತ, ತವರಿನಲ್ಲಿ ಬಾಂಗ್ಲಾ ಸವಾಲನ್ನು ಎದುರಿಸಲಿದೆ.

Follow Us:
Download App:
  • android
  • ios