Asianet Suvarna News Asianet Suvarna News

ರಾಷ್ಟ್ರೀಯ ಗೇಮ್ಸ್‌: 101 ಪದಕ ಬಾಚಿದ ಕರ್ನಾಟಕ

ಕೂಟದ ಆರಂಭದಿಂದಲೂ 4ನೇ ಸ್ಥಾನ ಕಾಯ್ದುಕೊಂಡಿದ್ದ ಕರ್ನಾಟಕ, ಕೊನೆ 4 ದಿನಗಳಲ್ಲಿ ನಿರೀಕ್ಷಿತ ಪದಕ ಸಾಧನೆ ಮಾಡಲಿಲ್ಲ. ರಾಜ್ಯದ ಅಥ್ಲೀಟ್‌ಗಳು ಒಟ್ಟಾರೆ 32 ಚಿನ್ನ, 32 ಬೆಳ್ಳಿ, 37 ಕಂಚಿನ ಪದಕ ತಮ್ಮದಾಗಿಸಿಕೊಂಡರು.

3th National Games Karnataka finish 6th positions with 101 medals kvn
Author
First Published Nov 10, 2023, 9:38 AM IST

ಪಣಜಿ(ನ.10): 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಪದಕ ಗಳಿಕೆಯಲ್ಲಿ ಶತಕ ಸಾಧನೆ ಮಾಡಿದ್ದು, ಬರೋಬ್ಬರಿ 101 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಪದಕ ಪಟ್ಟಿಯಲ್ಲಿ ರಾಜ್ಯ 6ನೇ ಸ್ಥಾನಿಯಾಗಿದೆ.

ಕೂಟದ ಆರಂಭದಿಂದಲೂ 4ನೇ ಸ್ಥಾನ ಕಾಯ್ದುಕೊಂಡಿದ್ದ ಕರ್ನಾಟಕ, ಕೊನೆ 4 ದಿನಗಳಲ್ಲಿ ನಿರೀಕ್ಷಿತ ಪದಕ ಸಾಧನೆ ಮಾಡಲಿಲ್ಲ. ರಾಜ್ಯದ ಅಥ್ಲೀಟ್‌ಗಳು ಒಟ್ಟಾರೆ 32 ಚಿನ್ನ, 32 ಬೆಳ್ಳಿ, 37 ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಪೈಕಿ 19 ಚಿನ್ನ ಸೇರಿ 39 ಪದಕ ಈಜಿನಲ್ಲೇ ಒಲಿಯಿತು. ಮಹಾರಾಷ್ಟ್ರ 88 ಚಿನ್ನ ಸೇರಿ 228 ಪದಕ ಜಯಿಸಿ ಅಗ್ರಸ್ಥಾನ ಪಡೆದರೆ, ಸರ್ವಿಸಸ್‌ 66 ಚಿನ್ನದೊಂದಿಗೆ 126 ಪದಕ ಗೆದ್ದು 2ನೇ, 62 ಬಂಗಾರ ಸೇರಿ 192 ಪದಕ ಗೆದ್ದ ಹರ್ಯಾಣ 3ನೇ ಸ್ಥಾನಿಯಾಯಿತು.

ಗ್ಲೆನ್ ಮ್ಯಾಕ್ಸ್‌ವೆಲ್‌ ಧ್ವಿಶಕತ ನಂತರವೂ ಆಫ್ಗಾನ್‌ಗೆ ಚಿಯರ್ಸ್‌ ಎಂದ ಮಿಸ್ಟರಿ ಬ್ಯೂಟಿ ವಾಜ್ಮಾ ಅಯೂಬಿ!

ಕಳೆದ ಆವೃತ್ತಿಗೆ ಹೋಲಿಸಿದರೆ ರಾಜ್ಯ ಈ ಬಾರಿ 13 ಪದಕ ಹೆಚ್ಚಿಗೆ ಗೆದ್ದಿದೆ. 2022ರಲ್ಲಿ ಕರ್ನಾಟಕ 27 ಚಿನ್ನ ಸೇರಿ ಒಟ್ಟು 88 ಪದಕ ಗೆದ್ದು 4ನೇ ಸ್ಥಾನಿಯಾಗಿತ್ತು.

ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌: ರಾಜ್ಯದ ಉನ್ನತಿ, ಶ್ರೀರಕ್ಷಾಗೆ ಚಿನ್ನ

ಕೊಯಮತ್ತೂರು: 38ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಕೂಟದ 3ನೇ ದಿನವಾದ ಗುರುವಾರ ರಾಜ್ಯಕ್ಕೆ 2 ಚಿನ್ನದ ಪದಕ ದೊರೆಯಿತು. ಮಹಿಳೆಯರ ಅಂಡರ್‌-20 ವಿಭಾಗದ 100 ಮೀ. ಹರ್ಡಲ್ಸ್‌ ಸ್ಪರ್ಧೆಯಲ್ಲಿ ಉನ್ನತಿ ಅಯ್ಯಪ್ಪ ಚಿನ್ನದ ಪದಕ ಗೆದ್ದರು. 13.98 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿ ಉನ್ನತಿ ಮೊದಲ ಸ್ಥಾನ ಪಡೆದರು.

ರಾಷ್ಟ್ರೀಯ ಗೇಮ್ಸ್‌: ರಾಜ್ಯ ಹಾಕಿ ತಂಡ ಬೆಳ್ಳಿಗೆ ತೃಪ್ತಿ

ಮಹಿಳೆಯರ ಅಂಡರ್‌-18 ವಿಭಾಗದ 2000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಶ್ರೀರಕ್ಷಾ ಬಂಗಾರ ಹೆಕ್ಕಿದರು. ಅವರು 7 ನಿಮಿಷ 23.03 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಮೊದಲ ಸ್ಥಾನ ಗಳಿಸಿದರು. ಶುಕ್ರವಾರ ಕೂಟದ ಕೊನೆಯ ದಿನವಾಗಿದ್ದು, ಕರ್ನಾಟಕ ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.

ಭಾರತ ಫುಟ್ಬಾಲ್‌ಗೆ ರಾಜ್ಯದ ಸತ್ಯ ಹಂಗಾಮಿ ಕಾರ್‍ಯದರ್ಶಿ

ನವದೆಹಲಿ: ನಂಬಿಕೆ ದ್ರೋಹ ಹಿನ್ನೆಲೆಯಲ್ಲಿ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಕಾರ್ಯದರ್ಶಿ ಹುದ್ದೆಯಿಂದ ಶಾಜಿ ಪ್ರಭಾಕರನ್‌ ಅವರನ್ನು ವಜಾಗೊಳಿಸಿ ಎಐಎಫ್‌ಎಫ್‌ ಆದೇಶ ಹೊರಡಿಸಿದೆ. ಶಾಜಿ 14 ತಿಂಗಳ ಹಿಂದೆ ಕಾರ್ಯದರ್ಶಿ ಹುದ್ದೆಗೇರಿದ್ದರು. ಆದರೆ ಅವರ ವಜಾಕ್ಕೆ ಸ್ಪಷ್ಟ ಕಾರಣವನ್ನು ಎಐಎಫ್‌ಎಫ್‌ ಬಹಿರಂಗಪಡಿಸಿಲ್ಲ. ಸದ್ಯ ಶಾಜಿ ಅವರಿಂದ ತೆರವಾದ ಹುದ್ದೆಗೆ ಕರ್ನಾಟಕದ ಸತ್ಯನಾರಾಯಣ ಅವರನ್ನು ಹಂಗಾಮಿಯಾಗಿ ನೇಮಿಸಲಾಗಿದೆ. ಸತ್ಯ ಅವರು ಈ ವರೆಗೆ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Follow Us:
Download App:
  • android
  • ios