ರಾಷ್ಟ್ರೀಯ ಗೇಮ್ಸ್: ರಾಜ್ಯ ಹಾಕಿ ತಂಡ ಬೆಳ್ಳಿಗೆ ತೃಪ್ತಿ
4ನೇ ಕ್ವಾರ್ಟರ್‌ನಲ್ಲಿ 2 ಗೋಲು ಬಾರಿಸಿದರೂ ಸೋಲು ತಪ್ಪಿಸಲಾಗಲಿಲ್ಲ. ಇದೇ ವೇಳೆ ಸಮರಕಲೆ ಕ್ರೀಡೆಯಾದ ಕಳರಿಪಯಟ್ಟು ಸ್ಪರ್ಧೆಯಲ್ಲಿ ರಾಜ್ಯದ ಅಥ್ಲೀಟ್‌ಗಳು 4 ಬೆಳ್ಳಿ, 4 ಕಂಚಿನ ಪದಕ ಜಯಿಸಿದರು. ಬಾಕ್ಸಿಂಗ್‌ನ ಮಹಿಳೆಯರ 70 ಕೆ.ಜಿ. ಸ್ಪರ್ಧೆಯಲ್ಲಿ ರಾಧಿಕಾ ಕಂಚು ಪಡೆದರು. ಸದ್ಯ ಕರ್ನಾಟಕ 29 ಚಿನ್ನ, 29 ಬೆಳ್ಳಿ, 31 ಕಂಚು ಸೇರಿದಂತೆ 91 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ.
ಪಣಜಿ(ನ.09): 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಪುರುಷರ ಹಾಕಿ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದೆ. ಬುಧವಾರ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ ಹರ್ಯಾಣ ವಿರುದ್ಧ 3-5 ಗೋಲುಗಳಿಂದ ಸೋಲು ಎದುರಾಯಿತು. ಕಳೆದ ಆವೃತ್ತಿಯಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದ ರಾಜ್ಯ ತಂಡ ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿತ್ತು. ಆದರೆ ಫೈನಲ್‌ನಲ್ಲಿ ನಿರೀಕ್ಷಿತ ಆಟ ಕಂಡು ಬರಲಿಲ್ಲ.
4ನೇ ಕ್ವಾರ್ಟರ್‌ನಲ್ಲಿ 2 ಗೋಲು ಬಾರಿಸಿದರೂ ಸೋಲು ತಪ್ಪಿಸಲಾಗಲಿಲ್ಲ. ಇದೇ ವೇಳೆ ಸಮರಕಲೆ ಕ್ರೀಡೆಯಾದ ಕಳರಿಪಯಟ್ಟು ಸ್ಪರ್ಧೆಯಲ್ಲಿ ರಾಜ್ಯದ ಅಥ್ಲೀಟ್‌ಗಳು 4 ಬೆಳ್ಳಿ, 4 ಕಂಚಿನ ಪದಕ ಜಯಿಸಿದರು. ಬಾಕ್ಸಿಂಗ್‌ನ ಮಹಿಳೆಯರ 70 ಕೆ.ಜಿ. ಸ್ಪರ್ಧೆಯಲ್ಲಿ ರಾಧಿಕಾ ಕಂಚು ಪಡೆದರು. ಸದ್ಯ ಕರ್ನಾಟಕ 29 ಚಿನ್ನ, 29 ಬೆಳ್ಳಿ, 31 ಕಂಚು ಸೇರಿದಂತೆ 91 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ.
ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮದ್ವೆ ಪ್ರಸ್ತಾವ ಇಟ್ಟ ನಟಿ ಪಾಯಲ್ ಘೋಷ್: ಒಂದೇ ಒಂದು ಷರತ್ತು...
ಗೇಮ್ಸ್‌ಗೆ ಇಂದು ತೆರೆ
ಅ.25ರಂದು ಆರಂಭಕೊಂಡಿದ್ದ 37ನೇ ಆವೃತ್ತಿ ಕ್ರೀಡಾಕೂಟಕ್ಕೆ ಗುರುವಾರ ತೆರೆ ಬೀಳಲಿದೆ. ಬ್ಯಾಂಬೋಲಿಮ್‌ನ ಎಸ್‌ಪಿಎಂ ಒಳಾಂಗಣ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ಆರಂಭಗೊಳ್ಳಲಿದ್ದು, ಉಪರಾಷ್ಟ್ರಪತಿ ಜಗ್‌ದೀಪ್ ಧನ್‌ಕರ್ ಪಾಲ್ಗೊಳ್ಳಲಿದ್ದಾರೆ.
ಕಿರಿಯರ ಅಥ್ಲೆಟಿಕ್ಸ್: ರಾಜ್ಯದ ರಿಹಾನ್ ಬಂಗಾರದ ಸಾಧನೆ
ಕೊಯಮತ್ತೂರು: 38ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪದಕ ಬೇಟೆ ಮುಂದು ವರಿಸಿದ್ದು, ಬುಧವಾರ 1 ಚಿನ್ನ ಸೇರಿ 4 ಪದಕ ಗೆದ್ದಿದೆ. ಇದರೊಂದಿಗೆ ಪದಕ ಗಳಿಕೆ 5ಕ್ಕೆ ಏರಿಕೆಯಾಗಿದೆ. ಅಂಡರ್-20 ಪುರುಷರ 400 ಮೀ. ಓಟ ಸ್ಪರ್ಧೆಯಲ್ಲಿ ರಿಹಾನ್ ಸಿ.ಎಚ್. ಚಿನ್ನ ಗೆದ್ದರು. ಅಂಡರ್-16 ಬಾಲಕರ 100 ಮೀ. ಓಟದಲ್ಲಿ ಸವಿನ್, ಅಂಡರ್-18 ಬಾಲಕರ 400 ಮೀ.ನಲ್ಲಿ ಪ್ರತೀಕ್, ಅಂಡರ್-18 ಬಾಲಕರ ಹ್ಯಾಮರ್ ಎಸೆತದಲ್ಲಿ ಯಶಸ್ ಕಂಚು ಪಡೆದರು.
ಡೇಟಿಂಗ್ ಸುದ್ದಿ ಬೆನ್ನಲ್ಲೇ ಶುಬಮನ್ ಗಿಲ್ ತಬ್ಬಿಕೊಂಡ ಸಾರಾ ತೆಂಡೂಲ್ಕರ್ ಫೋಟೋ ವೈರಲ್; ಅಸಲಿನಾ, ಡೀಪ್ ಫೇಕಾ?
ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದ ವಿದಿತ್
ನವದೆಹಲಿ: ಭಾರತದ ತಾರಾ ಚೆಸ್ ಪಟು ವಿದಿತ್ ಗುಜರಾತಿ 2024ರ ಕ್ಯಾಂಡಿಡೇಟ್ಸ್ ಟೂರ್ನಿಗೆ ಪ್ರವೇಶ ಪಡೆದಿದ್ದಾರೆ. ಸೋಮವಾರ 2023ರ ಗ್ರ್ಯಾಂಡ್ ಸ್ವಿಸ್ ಟೂರ್ನಿಯಲ್ಲಿ ವಿದಿತ್ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದರು. ಭಾನುವಾರ ಇದೇ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಆರ್.ವೈಶಾಲಿ ಪ್ರಶಸ್ತಿ ಗೆದ್ದು, ಮಹಿಳೆಯರ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಸದ್ಯ ಭಾರತದ ಮೂವರು ಕ್ಯಾಂಡಿಡೇಟ್ಸ್ ಟೂರ್ನಿಗೆ ಪ್ರವೇಶ ಪಡೆದಿದ್ದಾರೆ. 2024ರ ಏ.2ರಿಂದ ಏ.25ರ ವರೆಗೂ ಕೆನಡಾದ ಟೊರೊಂಟೋದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿ ನಡೆಯಲಿದೆ.