37ನೇ ರಾಷ್ಟ್ರೀಯ ಗೇಮ್ಸ್: ರಾಜ್ಯಕ್ಕೆ ಒಂದೇ ದಿನ ಮತ್ತೆ 10 ಪದಕ!
ಈಜಿನ ಪುರುಷರ 100 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್ 49.97 ಸೆಕೆಂಡ್‌ಗಳಲ್ಲಿ ಕ್ರಮಿಸಿ, ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಧಿನಿಧಿ ದೇಸಿಂಘು(57.87 ಸೆ.) ಕೂಡಾ ಕೂಟ ದಾಖಲೆ ಜೊತೆ ಬಂಗಾರ ಜಯಿಸಿದರು.
ಪಣಜಿ(ನ.05): 37ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕದ ಪದಕ ಬೇಟೆ ನಾಗಾಲೋಟ ಮುಂದುವರಿದಿದೆ. ಶನಿವಾರ ಈಜಿನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ ಕರ್ನಾಟಕ 4 ಪದಕಗಳನ್ನು ಖಾತೆಗೆ ಸೇರ್ಪಡೆಗೊಳಿಸಿತು. ಟ್ರಯಥ್ಲಾನ್, ಟೆನಿಸ್‌ನಲ್ಲೂ ರಾಜ್ಯಕ್ಕೆ ಪದಕ ಲಭಿಸಿತು.
ಈಜಿನ ಪುರುಷರ 100 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್ 49.97 ಸೆಕೆಂಡ್‌ಗಳಲ್ಲಿ ಕ್ರಮಿಸಿ, ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಧಿನಿಧಿ ದೇಸಿಂಘು(57.87 ಸೆ.) ಕೂಡಾ ಕೂಟ ದಾಖಲೆ ಜೊತೆ ಬಂಗಾರ ಜಯಿಸಿದರು. 4*100 ಮೆಡ್ಲೆ ಮಿಶ್ರ ತಂಡ ವಿಭಾಗದಲ್ಲಿ ಶ್ರೀಹರಿ, ವಿಧಿತ್, ನೀನಾ, ಧಿನಿಧಿ ಅವರಿದ್ದ ತಂಡ ಕೂಟ ದಾಖಲೆಯೊಂದಿಗೆ ಚಿನ್ನ ಪಡೆದರೆ, ಮಹಿಳೆಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಲಿನೇಶಾ ಬೆಳ್ಳಿ ಜಯಿಸಿದರು.
ಪಾಕ್ ಹಿಂದೂಗಳ ಬಗ್ಗೆಯೂ ಮಾತನಾಡಿ, ಇರ್ಫಾನ್ ಪಠಾಣ್ ಗಾಜಾ ಟ್ವೀಟ್‌ಗೆ ಕನೇರಿಯಾ ರಿಪ್ಲೈ!
ಇದೇ ವೇಳೆ ಟ್ರಯಾಥ್ಲಾನ್‌ನಲ್ಲಿ ರಾಜ್ಯದ ಯಜತ್ ಅಯ್ಯಪ್ಪ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಕೂಟದಲ್ಲಿ ಈಜುಪಟುಗಳು ಒಟ್ಟು 19 ಚಿನ್ನ ಸೇರಿ 39 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದರು. ಒಟ್ಟಾರೆ ಕೂಟದಲ್ಲಿ ರಾಜ್ಯ 28 ಚಿನ್ನ ಸೇರಿ 73 ಪದಕ ಬಾಚಿದ್ದು, 4ನೇ ಸ್ಥಾನ ಕಾಯ್ದುಕೊಂಡಿದೆ.
ಟೆನಿಸ್‌ನಲ್ಲಿ ಬೆಳ್ಳಿ
ಟೆನಿಸ್‌ನ ಪುರುಷರ ಡಬಲ್ಸ್‌ನಲ್ಲಿ ಕರ್ನಾಟಕ ಬೆಳ್ಳಿ ಪದಕ ಜಯಿಸಿತು. ಫೈನಲ್‌ನಲ್ಲಿ ರಾಜ್ಯದ ತಾರಾ ಟೆನಿಸಿಗರಾದ ಪ್ರಜ್ವಲ್ ದೇವ್-ಆದಿಲ್ ಕಲ್ಯಾಣ್‌ಪುರ ಅವರು ಮಹಾರಾಷ್ಟ್ರದ ಪುರವ್ ರಾಜಾ-ಅರ್ಜುನ್ ಖಾಡೆ ಜೋಡಿ ವಿರುದ್ಧ 6-7(5), 3-6 ಅಂತರದಲ್ಲಿ ಸೋಲನುಭವಿಸಿ ಸ್ವರ್ಣ ಪದಕದಿಂದ ವಂಚಿತವಾದರು.
ಬೆಂಗಳೂರಿನಲ್ಲಿ ಡಿ.6ರಿಂದ ವಾಲಿಬಾಲ್ ಕ್ಲಬ್ ವಿಶ್ವಕಪ್
ಬೆಂಗಳೂರು: ಇದೇ ಮೊದಲ ಬಾರಿ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದ್ದು, ಡಿ.6ರಿಂದ 10ರ ವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ಟೂರ್ನಿ ನಡೆಯಲಿದೆ. ಒಟ್ಟು 6 ತಂಡಗಳ ನಡುವಿನ 10 ಪಂದ್ಯಗಳಿಗೆ ಕೋರಮಂಗಳದ ಒಳಾಂಗಣ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಅಹಮದಾಬಾದ್ ಡಿಫೆಂಡರ್ಸ್ ಕೂಟದಲ್ಲಿ ಪಾಲ್ಗೊಳ್ಳುವ ಭಾರತದ ಏಕೈಕ ತಂಡ ಎನಿಸಿಕೊಂಡಿದೆ.
ಐಎಸ್‌ಎಲ್: ಬಿಎಫ್‌ಸಿ, ಹೈದ್ರಾಬಾದ್ 1-1 ಡ್ರಾ
ರ್‍ಯಾಂಕಿಂಗ್: 5ನೇ ಸ್ಥಾನಕ್ಕೆ ಕುಸಿದ ಸಾತ್ವಿಕ್-ಚಿರಾಗ್
ನವದೆಹಲಿ: 2 ವಾರಗಳ ಹಿಂದೆ ಬಿಡಬ್ಲ್ಯುಎಫ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದ ಭಾರತದ ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತೀಚೆಗಷ್ಟೇ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದ್ದು, ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ 8ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.