ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗುವ ಮೂಲಕ ಸುದ್ದಿಯಲ್ಲಿದ್ದಾರೆ.
ಹೀಗಿರುವಾಗಲೇ ಅವರ ಸಹೋದರಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.
ಶಹನೀಲ್ ಗಿಲ್ ಆಗಾಗಾ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಆಗಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಬನ್ನಿ ನಾವಿಂದು ಗಿಲ್ ಅಕ್ಕ ಶಹನೀಲ್ ಗಿಲ್ ಅವರ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.
ಶುಭ್‌ಮನ್ ಗಿಲ್ ಅವರ ಅಕ್ಕ ಶಹನೀಲ್ ಗಿಲ್ ಡಿಸೆಂಬರ್ 16, 1997ರಲ್ಲಿ ಪಂಜಾಬ್‌ನ ಫಜಿಲ್ಕಾ ಎಂಬಲ್ಲಿ ಜನಿಸಿದರು.
ಶಹನೀಲ್ ಗಿಲ್ 2019ರಲ್ಲಿ ವಿನ್ನಿಪೆಗ್‌ನ ರೆಡ್ ರಿವರ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮೊ ಇನ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿಯನ್ನು ಪಡೆದುಕೊಂಡರು.
ಶಹನೀಲ್ ಗಿಲ್ ಆಗಾಗ ತಮ್ಮ ಸಹೋದರ ಶುಭ್‌ಮನ್ ಗಿಲ್ ಅವರನ್ನು ಹುರಿದುಂಬಿಸಲು ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ.
ಶುಭ್‌ಮನ್ ಹಾಗೂ ಶಹನೀಲ್ ನಡುವೆ ಒಳ್ಳೆಯ ಬಾಂಧವ್ಯವಿದೆ.
ಶಹನೀಲ್ ಗಿಲ್ ಮೊದಲಿಗೆ ಕೆನಡಾದಲ್ಲಿ ಸ್ಕಿಪ್ ದಿ ಡಿಷಸ್ ಎನ್ನುವ ಫುಡ್ ಆರ್ಡರಿಂಗ್ ಕಂಪನಿಯಲ್ಲಿ ಕಸ್ಟಮರ್ ಸರ್ವೀಸ್ ರೆಪ್ರೆಸೆಂಟಿಟೀವ್ ಆಗಿ ಕೆಲಸ ಆರಂಭಿಸಿದ್ದರು.
ಶಹನೀಲ್ ಗಿಲ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಆಗಾಗ ತಮ್ಮ ಬೋಲ್ಡ್ ಹಾಗೂ ಮುದ್ದಾದ ಫೋಟೋಗಳನ್ನು ಶೇರ್ ಮಾಡುತ್ತಲೇ ಬಂದಿದ್ದಾರೆ.
IPL 2026: ಮತ್ತೆ ಘರ್ಜಿಸಲು ರೆಡಿಯಾದ RCB ಐದು ಹುಲಿಗಳಿವು!
ಟಿ20 ರ್‍ಯಾಂಕಿಂಗ್‌ನಲ್ಲಿ ಬುಮ್ರಾ ದಾಖಲೆ ಧೂಳೀಪಟ; ವರುಣ್ ಚಕ್ರವರ್ತಿ ಹೊಸ ದಾಖಲೆ
ಹೃತಿಕ್ ರೋಶನ್ 'ಕ್ರಿಶ್' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
ಫೋಟೋ ಹಂಚಿಕೊಂಡು 'ಡಾರ್ಲಿಂಗ್..' ಎಂದು ಬರೆದ ಸಾರಾ ತೆಂಡುಲ್ಕರ್