ಕೊಲಂಬೊ(ಆ.27): ಸಂಘಟಿತ ಪ್ರದರ್ಶನ ತೋರಿದ ನ್ಯೂಜಿಲೆಂಡ್‌, ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು 65 ರನ್‌ಗಳ ಗೆಲುವು ಪಡೆದಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. 

ಅನುಮಾನಾಸ್ಪದ ಬೌಲಿಂಗ್ ಮಾಡಿದ ಇಬ್ಬರು ಕ್ರಿಕೆಟಿಗರು..!

5ನೇ ಹಾಗೂ ಕೊನೆಯ ದಿನವಾದ ಸೋಮವಾರ 5 ವಿಕೆಟ್‌ಗೆ 382 ರನ್‌ ಗಳಿಂದ ಮೊದಲ ಇನ್ನಿಂಗ್ಸ್‌ ಮುಂದುವರೆಸಿದ ನ್ಯೂಜಿಲೆಂಡ್‌ 6 ವಿಕೆಟ್‌ಗೆ 431 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. 2ನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 122 ರನ್‌ಗಳಿಗೆ ಆಲೌಟ್‌ ಆಯಿತು.

ಗಾಲೆ ಟೆಸ್ಟ್: ಕಿವೀಸ್ ಮಣಿಸಿ ಇತಿಹಾಸ ಬರೆದ ಶ್ರೀಲಂಕಾ

ದ್ವಿತೀಯ ಇನಿಂಗ್ಸ್’ನಲ್ಲಿ ಲಂಕಾದ ಆರಂಭಿಕರಿಬ್ಬರು ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರೆ, ಧನಂಜಯ ಡಿಸಿಲ್ವಾ ಸೇರಿದಂತೆ ಕೆಲ ಕ್ರಿಕೆಟಿಗರು ಎರಡಂಕಿ ಮೊತ್ತ ಮುಟ್ಟಲು ವಿಫಲರಾದರು. ಕಿವೀಸ್ ಪರ ಬೌಲ್ಟ್, ಸೌಥಿ, ಅಜೀಜ್ ಹಾಗೂ ಸೋಮರ್’ವಿಲ್ಲೇ ತಲಾ 2 ವಿಕೆಟ್ ಪಡೆದರೆ, ಕಾಲಿನ್ ಡಿ ಗ್ರಾಂಡ್’ಹೋಂ ಒಂದು ವಿಕೆಟ್ ಪಡೆದರು. 

ಸ್ಕೋರ್‌: ಶ್ರೀಲಂಕಾ 244 ಹಾಗೂ 122,

ನ್ಯೂಜಿಲೆಂಡ್‌ 431/6 ಡಿ.