ಲೇವರ್ ಕಪ್ ಬಳಿಕ ರಾಫೆಲ್ ನಡಾಲ್ ಟೆನಿಸಿಗೆ ನಿವೃತ್ತಿ?
ಪಕ್ಕೆಲುಬು ಗಾಯದಿಂದ ಬಳಲುತ್ತಿರುವ ನಡಾಲ್ 2023ರಲ್ಲಿ ಬಹುತೇಕ ಟೂರ್ನಿಗಳಿಂದ ಹೊರಗುಳಿದಿದ್ದರು. ಅವರು ಸೆಪ್ಟೆಂಬರ್‌ನಲ್ಲಿ ಬರ್ಲಿನ್‌ನಲ್ಲಿ ನಡೆಯಲಿರುವ ಲೇವರ್ ಕಪ್‌ನಲ್ಲಿ ಕೊನೆ ಬಾರಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ಯಾರಿಸ್: 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ರಾಫೆಲ್ ನಡಾಲ್ 2024ರ ಲೇವರ್ ಕಪ್ ಟೆನಿಸ್ ಟೂರ್ನಿಯಲ್ಲಿ ಆಡಲಿದ್ದಾರೆ. ಅದೇ ಅವರ ಕೊನೆ ಟೂರ್ನಿಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಕ್ಕೆಲುಬು ಗಾಯದಿಂದ ಬಳಲುತ್ತಿರುವ ನಡಾಲ್ 2023ರಲ್ಲಿ ಬಹುತೇಕ ಟೂರ್ನಿಗಳಿಂದ ಹೊರಗುಳಿದಿದ್ದರು. ಅವರು ಸೆಪ್ಟೆಂಬರ್‌ನಲ್ಲಿ ಬರ್ಲಿನ್‌ನಲ್ಲಿ ನಡೆಯಲಿರುವ ಲೇವರ್ ಕಪ್‌ನಲ್ಲಿ ಕೊನೆ ಬಾರಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವಿಜರ್‌ಲೆಂಡ್‌ನ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಕೂಡಾ 2022ರ ಲೇವರ್ ಕಪ್ ಟೂರ್ನಿಯಲ್ಲಿ ಕೊನೆ ಬಾರಿ ಆಡಿ, ಕಣ್ಣೀರಿನೊಂದಿಗೆ ಟೆನಿಸ್‌ಗೆ ವಿದಾಯ ಘೋಷಿಸಿದ್ದರು.
ಐತಿಹಾಸಿಕ ಕ್ಯಾಂಡಿಡೇಟ್ಸ್ ಕಿರೀಟ ಗೆದ್ದ ಗುಕೇಶ್: ಮಗನ ಖರ್ಚಿಗಾಗಿ ಕ್ರೌಡ್ ಫಂಡಿಂಗ್ ನಡೆಸಿದ್ದ ಪೋಷಕರು..!
ಕೊಡವ ಹಾಕಿ: ಕೂತಂಡಕ್ಕೆ ಭರ್ಜರಿ ಜಯ
ನಾಪೋಕ್ಲು: ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಸೋಮವಾರದ ಪಂದ್ಯಗಳಲ್ಲಿ ಮುಕ್ಕಾಟಿರ(ಬೋಂದ), ನೆಲ್ಲಮಕ್ಕಡ, ನೆರವಂಡ, ಅಂಜಪರವಂಡ, ಕೂತಂಡ, ಕಲಿಯಂಡ, ಕುಪ್ಪಂಡ ತಂಡಗಳು ಮುನ್ನಡೆ ಸಾಧಿಸಿದವು. ಮುಕ್ಕಾಟಿರ (ಬೋಂದ) ತಂಡವು ಅಮ್ಮಣಿಚಂಡ ವಿರುದ್ಧ 2-1ರಲ್ಲಿ ಜಯ ಗಳಿಸಿತು. ನೆಲ್ಲಮಕ್ಕಡ ವಿರುದ್ಧ ಅರೆಯಡ 4-1ರಲ್ಲಿ ಗೆಲುವು ಸಾಧಿಸಿತು. ಮೇಚಿಯಂಡ ವಿರುದ್ಧ ನೆರವಂಡ 1-0 ಅಂತರದಿಂದ ಗೆದ್ದರೆ, ಪೆಮ್ಮಂಡ ವಿರುದ್ಧ ಅಂಜಪರವಂಡ 4-1 ರಲ್ಲಿ ಗೆಲವು ಸಾಧಿಸಿತು. ಕೂತಂಡ ತಂಡಕ್ಕೆ ಬೊಳ್ಳಂಡ ವಿರುದ್ಧ 3-0 ಅಂತರದ ಜಯ ಲಭಿಸಿತು.
ರೋಹನ್ ಬೋಪಣ್ಣ ಪದ್ಮಶ್ರೀ ಗರಿ
ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹಣ್ ಬೋಪಣ್ಣ ಅವರಿಗೆ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಹಸ್ತಾಂತರಿಸಿದರು. ಬೋಪಣ್ಣ 2019ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ICC T20 World Cup 2024: ಭಾರತ ಸಂಭಾವ್ಯ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಬಾಸ್ಕೆಟ್‌ಬಾಲ್ ಸಾಧಕಿಯರಿಗೆ ಸನ್ಮಾನ
ಇತ್ತೀಚೆಗೆ ಪುದುಚೇರಿಯಲ್ಲಿ ನಡೆದ 38ನೇ ರಾಷ್ಟ್ರೀಯ ಯೂತ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕರ್ನಾಟಕ ಬಾಲಕಿಯರ ತಂಡವನ್ನು ಸೋಮವಾರ ಕರ್ನಾಟಕ ಬಾಸ್ಕೆಟ್‌ಬಾಲ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ತಂಡಕ್ಕೆ ₹3 ಲಕ್ಷ ನಗದು ಬಹುಮಾನವನ್ನೂ ಹಸ್ತಾಂತರಿಸಲಾಯಿತು. ಫಿಬಾ ಏಷ್ಯಾ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ರಾಜ್ಯ ಕಿರಿಯರ ಬಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯಗಳು ನಡೆದವು.