ಗಾಲೆ[ಆ.18]: ನಾಯಕ ದೀಮುತ್ ಕರುಣರತ್ನೆ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್ ಎದುರು ಶ್ರೀಲಂಕಾ ತಂಡವು 6 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಗಾಲೆ ಮೈದಾನದಲ್ಲಿ 100+ ಗುರಿ ಬೆನ್ನತ್ತಿ ಗೆಲುವು ಸಾಧಿಸಿದ ಮೊದಲ ತಂಡ ಎನ್ನುವ ಗೌರವಕ್ಕೆ ಶ್ರೀಲಂಕಾ ಪಾತ್ರಾವಾಗಿದೆ.

ಲಂಕಾ-ಕಿವೀಸ್ ಟೆಸ್ಟ್: ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ

ಗೆಲ್ಲಲು 268 ರನ್’ಗಳ ಗುರಿ ಪಡೆದ ಆತಿಥೇಯ ಶ್ರೀಲಂಕಾ ಉತ್ತಮ ಆರಂಭವನ್ನೇ ಪಡೆಯಿತು. ನಾಲ್ಕನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 133ರನ್ ಬಾರಿಸಿದ್ದ ಶ್ರೀಲಂಕಾ, ಕೊನೆಯ ದಿನವೂ ಉತ್ತಮ ಪ್ರದರ್ಶನ ತೋರಿತು. ಲಹಿರು ತಿರುಮನ್ನೆ 64 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕುಸಾಲ್ ಮೆಂಡೀಸ್ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ವಿಕೆಟ್’ಗೆ ಜತೆಯಾದ ಆ್ಯಂಜಲೋ ಮ್ಯಾಥ್ಯೂಸ್-ದಿಮುತ್ ಕರುಣರತ್ನೆ ತಂಡವನ್ನು ಗೆಲುವಿನತ್ತ ಕೊಂಡ್ಯೊಯ್ದರು. ಸಾಕಷ್ಟು ಎಚ್ಚರಿಕೆಯ ಆಟವಾಡಿದ ಕರುಣರತ್ನೆ 243 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 122 ರನ್ ಬಾರಿಸಿದರು. ಇದು ಕರುಣರತ್ನೆ ಟೆಸ್ಟ್ ಕ್ರಿಕೆಟ್’ನಲ್ಲಿ ಬಾರಿಸಿದ 9ನೇ ಶತಕವಾಗಿದೆ. ಆ್ಯಂಜಲೋ ಮ್ಯಾಥ್ಯೂಸ್ ಅಜೇಯ 28 ಹಾಗೂ ಧನಂಜಯ್ ಡಿಸಿಲ್ವಾ 14 ರನ್ ಬಾರಿಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಪೂರೈಸಿದ ಕೊಹ್ಲಿ!

ನಾಲ್ಕನೇ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ದಿಮುತ್ ಕರುಣರತ್ನೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದೀಗ ಲಂಕಾ-ಕಿವೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 22ರಿಂದ ಆರಂಭವಾಗಲಿದ್ದು, ಕೊಲಂಬೊದಲ್ಲಿ ಪಂದ್ಯ ಜರುಗಲಿದೆ.

ಅಂಕಿ-ಅಂಶ:

* 2016ರಿಂದೀಚೆಗೆ 4ನೇ ಇನಿಂಗ್ಸ್’ನಲ್ಲಿ 260+ ಗುರಿ ಮುಟ್ಟಿದ ನಾಲ್ಕನೇ ತಂಡ ಎನ್ನುವ ದಾಖಲೆಗೆ ಲಂಕಾ ಪಾತ್ರವಾಗಿದೆ.

* ಶ್ರೀಲಂಕಾ ಕಳೆದ 3 ಟೆಸ್ಟ್ ಪಂದ್ಯಗಳ ಗೆಲುವು ನಾಲ್ಕನೇ ಇನಿಂಗ್ಸ್’ನಿಂದಲೇ ಬಂದಿದೆ.

* ದಿಮುತ್ ಕರುಣರತ್ನೆ ನಾಯಕತ್ವದಲ್ಲಿ ಶ್ರೀಲಂಕಾ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿದೆ.