ಚೆನ್ನೈ ತಂಡ ಈ ಬಾರಿ ತವರಿನಲ್ಲಿ 3 ಪಂದ್ಯಗಳನ್ನಾಡಿದ್ದು, ಮೂರರಲ್ಲೂ ಗೆದ್ದಿದೆ. ಋತುರಾಜ್‌ ಹಾಗೂ ಶಿವಂ ದುಬೆ ಮಾತ್ರ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಇತರರಿಂದ ಇನ್ನಷ್ಟೇ ದೊಡ್ಡ ಮೊತ್ತ ಹರಿದುಬರಬೇಕಿದೆ.

ಚೆನ್ನೈ: 4 ದಿನಗಳ ಹಿಂದಷ್ಟೇ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಪರಾಭವಗೊಂಡಿದ್ದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ಈ ಬಾರಿ ತವರಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ಜೊತೆಗೆ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ.ಕನ್ನಡಿಗ ಕೆ.ಎಲ್‌.ರಾಹುಲ್‌ ನಾಯಕತ್ವದ ಲಖನೌ ಹಾಗೂ ಋತುರಾಜ್‌ ಗಾಯಕ್ವಾಡ್‌ ಮುನ್ನಡೆಸುತ್ತಿರುವ ಚೆನ್ನೈ ತಂಡಗಳು ಈ ಬಾರಿ ಟೂರ್ನಿಯಲ್ಲಿ ತಲಾ 7 ಪಂದ್ಯಗಳನ್ನಾಡಿದ್ದು, ತಲಾ 4 ಗೆಲುವು ದಾಖಲಿಸಿವೆ. ಆದರೆ ನೆಟ್ ರನ್‌ ರೇಟ್‌ ಆಧಾರದಲ್ಲಿ ಚೆನ್ನೈ ತಂಡ ಲಖನೌಗಿಂದ ಮೇಲಿದೆ.

ಚೆನ್ನೈ ತಂಡ ಈ ಬಾರಿ ತವರಿನಲ್ಲಿ 3 ಪಂದ್ಯಗಳನ್ನಾಡಿದ್ದು, ಮೂರರಲ್ಲೂ ಗೆದ್ದಿದೆ. ಋತುರಾಜ್‌ ಹಾಗೂ ಶಿವಂ ದುಬೆ ಮಾತ್ರ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಇತರರಿಂದ ಇನ್ನಷ್ಟೇ ದೊಡ್ಡ ಮೊತ್ತ ಹರಿದುಬರಬೇಕಿದೆ. ರಚಿನ್‌ ರವೀಂದ್ರ ಲಯ ಕಳೆದುಕೊಂಡಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ. ಜಡೇಜಾ ಆಲ್ರೌಂಡ್‌ ಪ್ರದರ್ಶನ, ಧೋನಿಯ ಸ್ಫೋಟಕ ಬ್ಯಾಟಿಂಗ್‌ ತಂಡದ ಪ್ಲಸ್ ಪಾಯಿಂಟ್‌. ಇನ್ನು, ಬೌಲಿಂಗ್‌ ವಿಭಾಗ ಮೊನಚು ದಾಳಿ ಸಂಘಟಿಸಬೇಕಿದ್ದು, ಮುಸ್ತಾಫಿಜುರ್‌, ಪತಿರನ ಜೊತೆ ದೀಪಕ್‌, ತುಷಾರ್‌ ಲಖನೌ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ.

ವಿರಾಟ್ ಕೊಹ್ಲಿಗೆ 40 ಬಾಲಲ್ಲಿ 100 ಹೊಡೆಯೋ ಸಾಮರ್ಥ್ಯವಿದೆ, ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ಆಡಿಸಿ: ದಾದಾ

ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಚೆನ್ನೈ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಲಖನೌ ಈಗ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಚೆನ್ನೈ ಕ್ರೀಡಾಂಗಣದಲ್ಲಿ ಗೆಲ್ಲುವುದು ಎಷ್ಟು ಕಷ್ಟ ಎಂಬುದು ಲಖನೌಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ.

ಒಟ್ಟು ಮುಖಾಮುಖಿ: 04

ಚೆನ್ನೈ: 01

ಲಖನೌ: 02

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋತುರಾಜ್‌ ಗಾಯಕ್ವಾಡ್(ನಾಯಕ), ರಚಿನ್‌ ರವೀಂದ್ರ, ಅಜಿಂಕ್ಯ ರಹಾನೆ, ಮೊಯೀನ್‌ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ, ದೀಪಕ್‌ ಚಹರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ಮುಸ್ತಾಫಿಜುರ್‌, ಮತೀಶ್ ಪತಿರನ.

ಲಖನೌ: ಕ್ವಿಂಟನ್ ಡಿ ಕಾಕ್‌, ಕೆ ಎಲ್ ರಾಹುಲ್‌(ನಾಯಕ), ದೀಪಕ್ ಹೂಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಕೃನಾಲ್‌ ಪಾಂಡ್ಯ, ರವಿ ಬಿಷ್ಣೋಯ್‌, ಮೊಹ್ಸಿನ್‌ ಖಾನ್, ಮ್ಯಾಟ್‌ ಹೆನ್ರಿ, ಯಶ್‌ ಠಾಕೂರ್.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ