ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರು ಮೂರು ವರ್ಷಗಳ ಕಾಲ ಮ್ಯಾಗಿ ತಿಂದು ಜೀವನ ಸಾಗಿಸಿದ್ದರು ಎಂದು ನೀತಾ ಅಂಬಾನಿ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಮೇಲಿನ ಅವರ ಉತ್ಸಾಹ ಗುರುತಿಸಿ, 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಆಯ್ಕೆಯಾದರು. ಇಂದು ತಂಡದ ನಾಯಕರಾಗಿ ಮಿಂಚುತ್ತಿದ್ದಾರೆ.

ಇಂದು ಯಾವುದೇ ಕ್ಷೇತ್ರದಲ್ಲಿ ಮಿಂಚುತ್ತಿರುವ, ವಿಶ್ವ ಮಾನ್ಯ ಪಡೆದಿರುವ ವ್ಯಕ್ತಿಗಳ ಹಿನ್ನೆಲೆ ಕೆದಕಿದಾಗ ಬಹುತೇಕರ ಆರಂಭಿಕ ಜೀವನವು ಮುಳ್ಳಿನ ಹಾದಿಯದ್ದೇ ಆಗಿರುತ್ತದೆ. ಕೆಲವೇ ಕೆಲವು ಮಂದಿ ಶ್ರೀಮಂತರ ಮನೆಯಲ್ಲಿ ಹುಟ್ಟಿ, ಈ ಉನ್ನತ ಮಟ್ಟಕ್ಕೆ ಬೆಳೆದುನಿಂತಿದ್ದರೆ, ಬಹುತೇಕರು ಜೀರೋದಿಂದಲೇ ತಮ್ಮ ಜೀವನವನ್ನು ಆರಂಭಿಸಿದವರೇ ಆಗಿದ್ದಾರೆ. ಸಹಸ್ರಾರು ಕೋಟಿ ರೂಪಾಯಿಗಳ ಉದ್ಯಮ ಸ್ಥಾಪಿಸಿರುವ ಅಥವಾ ಉನ್ನತ ಸ್ಥಾನಕ್ಕೆ ಏರಿರುವ ಯಾವುದೇ ಕ್ಷೇತ್ರಗಳ ಸೆಲೆಬ್ರಿಟಿಗಳು ಎನ್ನಿಸಿಕೊಂಡಿರುವವರ ಹಿಂದೆ ಇರುವುದು ಬಹುದೊಡ್ಡ ನೋವಿನ ಹಾದಿಯೇ. ಅವರ ಪೈಕಿ ಇದೀಗ ಕ್ರಿಕೆಟ್‌ನ ಅತ್ಯುನ್ನತ ಮಟ್ಟದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರ ಕುತೂಹಲದ ಜೀವನದ ಬಗ್ಗೆ ಮುಂಬೈ ಇಂಡಿಯನ್ಸ್ (ಎಂಐ) ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ಮಾತನಾಡಿದ್ದಾರೆ. ದುಡ್ಡಿಲ್ಲದೇ ಮೂರು ವರ್ಷಗಳ ಕಾಲ ಮ್ಯಾಗಿ ತಿಂದು ಜೀವನ ಮಾಡಿದ್ದ ರೋಚಕ ಕಥೆಯನ್ನು ಅವರು ಹೇಳಿದ್ದಾರೆ. 


 ದಶಕದ ಹಿಂದೆ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರೊಂದಿಗಿನ ತಮ್ಮ ಮೊದಲ ಭೇಟಿಯ ಬಗ್ಗೆ ನೀತಾ ಅಂಬಾನಿ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಈ ಪ್ರತಿಭೆಗಳನ್ನು ಹೇಗೆ ಗುರುತಿಸಿ ಅವರನ್ನು ಪ್ರೇರೇಪಿಸಿತು ಎನ್ನುವ ಬಗ್ಗೆ ಹೇಳುತ್ತಲೇ ಹಾರ್ದಿಕ್​ ಮತ್ತು ಕೃನಾಲ್​ ಅವರ ಮುಳ್ಳಿನ ಹಾದಿಯ ಕುರಿತು ವಿವರಿಸಿದ್ದಾರೆ. 'ನಾನು ಅವರನ್ನು ಭೇಟಿಯಾದ ದಿನ ಅವರ ಬಗ್ಗೆ ಕೇಳುತ್ತಲಿದ್ದೆ. ಆರಂಭದಲ್ಲಿ ಅವರು ಕೈಯಲ್ಲಿ ಕಾಸಿಲ್ಲದೇ ಮೂರು ವರ್ಷಗಳಿಂದ ಮ್ಯಾಗಿ ನೂಡಲ್ಸ್ ಹೊರತುಪಡಿಸಿ ಏನನ್ನೂ ತಿನ್ನಲಿಲ್ಲ ಎನ್ನುವುದನ್ನು ವಿವರಿಸಿದರು. ಆದರೆ ಅವರಲ್ಲಿ, ಕ್ರಿಕೆಟ್​ ಬಗ್ಗೆ ಇದ್ದ ಪ್ರೀತಿ, ಉತ್ಸಾಹ ಮತ್ತು ಹಸಿವನ್ನು ನಾನು ನೋಡಿದೆ. 2015 ರಲ್ಲಿ, ನಾನು ಹಾರ್ದಿಕ್ ಪಾಂಡ್ಯ ಅವರನ್ನು ಹರಾಜಿನಲ್ಲಿ 10 ಸಾವಿರ ಡಾಲರ್​ಗೆ ಡಾಲರ್‌ಗಳಿಗೆ ಖರೀದಿಸಿದೆ, ಮತ್ತು ಇಂದು, ಅವರು ಮುಂಬೈ ಇಂಡಿಯನ್ಸ್‌ನ ಹೆಮ್ಮೆಯ ನಾಯಕ' ಎಂದಿದ್ದಾರೆ ನೀತಾ ಅಂಬಾನಿ. 

ಮೋದಿ ಬೆಸ್ಟೋ, ಅಂಬಾನಿನೊ? ಏಕಾಏಕಿ ಎದುರಾದ ಪ್ರಶ್ನೆಗೆ ನೀತಾ ಅಂಬಾನಿ ಹೇಳಿದ್ದು ಕೇಳಿ ಎಲ್ಲರೂ ಶಾಕ್​!

 ಈ ಹಿಂದೆ ಈ ಬಗ್ಗೆ ಖುದ್ದು ಹಾರ್ದಿಕ್​ ಪಾಂಡ್ಯ ಅವರೇ ಬಹಿರಂಗಪಡಿಸಿದ್ದರು. ತಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟು ಇತ್ತು ಮತ್ತು ಆ ಸಮಯದಲ್ಲಿ ಅವರು ಎಷ್ಟು ಕಷ್ಟಪಡಬೇಕಾಯಿತು ಎಂಬುದನ್ನು ಹೇಳುತ್ತಲೇ ತಮ್ಮ ಹದಿಹರೆಯದ ದಿನಗಳಲ್ಲಿ ಒಂದು ಹಂತದಲ್ಲಿ ಬದುಕುಳಿಯಲು ಮ್ಯಾಗಿಯನ್ನು ಮಾತ್ರ ತಿನ್ನುವ ಸ್ಥಿತಿ ಬಂದಿತ್ತು ಎಂದಿದ್ದರು. "ನನ್ನ ಆಹಾರ ಪದ್ಧತಿ ಮ್ಯಾಗಿಯಾಗಿತ್ತು. ನಾನು ಅದರ ಅಭಿಮಾನಿಯಾಗಿದ್ದೆ ಮತ್ತು ಪರಿಸ್ಥಿತಿಯೂ ಸಹ ಅದನ್ನು ಬೇಡಿಕೊಂಡಿತು. ನಾನು ವಾಸ್ತವವಾಗಿ ಹಗಲು ರಾತ್ರಿ ಮ್ಯಾಗಿ ತಿನ್ನುತ್ತಿದ್ದೆ" ಎಂದು ಹಾರ್ದಿಕ್ ಹೇಳಿದ್ದರು. ಜನರು ನನ್ನ ಬಳಿ ಕಾರು ಇದೆ ಎಂದು ತಮ್ಮ ಆರ್ಥಿಕ ಸಂಕಷ್ಟವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದರು. ಆದರೆ ಕಾರು ಖರೀದಿಸಿದ ಕೂಡಲೇ ನಮ್ಮ ತಂದೆಗೆ ತೀವ್ರ ಹೃದಯಾಘಾತವಾಯಿತು. ಅವರು ಮನೆಯಲ್ಲಿ ಒಬ್ಬರೇ ಸಂಪಾದಿಸುತ್ತಿದ್ದರು. ಅವರಿಗೆ ಒಂದಲ್ಲ ಎರಡು ಬಾರಿ ಹೃದಯಾಘಾಗಿತ್ತು. ಆಸ್ಪತ್ರೆಗೆ ಸೇರಿಸಿದ್ದೆವು. ಆ ಸಮಯದಲ್ಲಿ ಆರ್ಥಿಕ ಸಮಸ್ಯೆಗಳು ಪ್ರಾರಂಭವಾದವು. ನಮ್ಮಲ್ಲಿ ಯಾವುದೇ ಉಳಿತಾಯವಿರಲಿಲ್ಲ. ಆಗ ಅರಿವಿಗೆ ಬಂದದ್ದು, ನಾವು ಗಳಿಸಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ ಎನ್ನುವುದು ಎಂದು ಹೇಳಿದ್ದರು ಹಾರ್ದಿಕ್​.

ಅದೇ ವೇಳೆ, ಹಾರ್ದಿಕ್ ಅವರ ಅಣ್ಣ ಕೃನಾಲ್ ಪಾಂಡ್ಯ ಕೂಡ ತಮ್ಮ ಸಹೋದರನ ಮ್ಯಾಗಿ ಮೇಲಿನ ಪ್ರೀತಿಯನ್ನು ಬಹಿರಂಗಪಡಿಸಿದ್ದರು. ಫಾಸ್ಟ್ ಫುಡ್ ಬ್ರ್ಯಾಂಡ್ ಹಾರ್ದಿಕ್ ಅವರನ್ನು ತಮ್ಮ ಬ್ರಾಂಡ್ ರಾಯಭಾರಿಯನ್ನಾಗಿ ಮಾಡುವಂತೆ ತಮಾಷೆ ಮಾಡಿದ್ದದರು. ಮ್ಯಾಗಿ ಕಂಪೆನಿ ಹಾರ್ದಿಕ್ ಅವರನ್ನು ತಮ್ಮ ಬ್ರಾಂಡ್ ರಾಯಭಾರಿಯಾಗಿ ಮಾಡಿಕೊಳ್ಳುವ ಬಗ್ಗೆ ಪರಿಗಣಿಸಬೇಕು. ಅವರು ತಿಂದಿರುವಷ್ಟು ಮ್ಯಾಗಿಯನ್ನು ಭಾರತದಲ್ಲಿ ಬೇರೆ ಯಾರೂ ತಿಂದಿರಲಿಲ್ಲ" ಎಂದು ಕೃನಾಲ್​ ಹಾಸ್ಯ ಚಟಾಕಿ ಹಾರಿಸಿದ್ದರು. ಆದರೆ, ಫಿಟ್ನೆಸ್ ಕಾರಣಗಳಿಗಾಗಿ ಹಾರ್ದಿಕ್ ಮ್ಯಾಗಿಯಿಂದ ದೂರವಿರಬೇಕಾಯಿತು ಎಂದು ಹೇಳಿದ್ದುಂಟು.

ಇಂಗ್ಲೆಂಡ್‌, ಕೆನಡಾ, ಬ್ರೆಜಿಲ್ ದಾಖಲೆಗಳಿಗೆ ಬ್ರೇಕ್‌ ಹಾಕಿದ ಜಿಯೋ: ಕುತೂಹಲದ ಮಾಹಿತಿ ಇಲ್ಲಿದೆ...