ತಾನು ಸೈನಾ ನೆಹ್ವಾಲ್ ಪತಿ ಎಂದು ಪರಿಚಯಿಸಿಕೊಂಡ ಕಶ್ಯಪ್‌ಗೆ ಶಾಕ್ ಕೊಟ್ಟ ಕ್ಯಾಪ್ಟನ್ ಕೂಲ್
ಪರುಪಲ್ಲಿ ಕಶ್ಯಪ್ ಅವರು ಒಮ್ಮೆ ಕ್ರಿಕೆಟಿಗ, ಕ್ಯಾಪ್ಟನ್ ಕೂಲ್ ಅವರನ್ನು ಭೇಟಿ ಮಾಡಿದಾಗ ತಮ್ಮನ್ನು ತಾವು, ತಾನು ಸೈನಾ ನೆಹ್ವಾಲ್ ಪತಿ ಎಂದು ಪರಿಚಯಿಸಿಕೊಂಡಿದ್ದರು. ಇದಕ್ಕೆ ಕ್ರಿಕೆಟಿಗ ಧೋನಿ ರಿಯಾಕ್ಷನ್ ಹೇಗಿತ್ತು? ಇದ್ದನ್ನು ಸ್ವತಃ ಪರುಪಲ್ಲಿ ಕಶ್ಯಪ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹೈದರಾಬಾದ್ : ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟಿಗರಿಗೆ ಇರುವಷ್ಟು ಅಭಿಮಾನಿಗಳು ಬೇರೆ ಯಾವ ಕ್ರೀಡಾಪಟುಗಳಿಗೂ ಇಲ್ಲ, ಕ್ರಿಕೆಟಿಗರನ್ನು ಗುರುತಿಸಿದಷ್ಟು ಇತರ ಕ್ರೀಡಾ ತಾರೆಯರನ್ನು ಗುರುತಿಸುವುದಿಲ್ಲ, ಬ್ಯಾಡ್ಮಿಂಟನ್ ಎಂದರೆ ನಮಗೆ ಮೊದಲಿಗೆ ನೆನಪಿಗೆ ಬರುವುದು ಸಿಂಧು, ಬಿಟ್ಟರೆ ಸೈನಾ ನೇಹ್ವಾಲ್, ಹೀಗಾಗಿಯೋ ಏನೋ ವಾಸ್ತವ ಅರಿತಿದ್ದ ಸೈನಾ ನೆಹ್ವಾಲ್ ಪತಿ ಹಾಗೂ ಖ್ಯಾತ ಬ್ಯಾಡ್ಮಿಂಟನ್ ತಾರೆಯೂ ಆಗಿರುವ ಪರುಪಲ್ಲಿ ಕಶ್ಯಪ್ ಅವರು ಒಮ್ಮೆ ಕ್ರಿಕೆಟಿಗ, ಕ್ಯಾಪ್ಟನ್ ಕೂಲ್ ಅವರನ್ನು ಭೇಟಿ ಮಾಡಿದಾಗ ತಮ್ಮನ್ನು ತಾವು, ತಾನು ಸೈನಾ ನೆಹ್ವಾಲ್ ಪತಿ ಎಂದು ಪರಿಚಯಿಸಿಕೊಂಡಿದ್ದರು. ಇದಕ್ಕೆ ಕ್ರಿಕೆಟಿಗ ಧೋನಿ ರಿಯಾಕ್ಷನ್ ಹೇಗಿತ್ತು? ಇದ್ದನ್ನು ಸ್ವತಃ ಪರುಪಲ್ಲಿ ಕಶ್ಯಪ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದು ಧೋನಿ ವ್ಯಕ್ತಿತ್ವ ಎಂಥಹದ್ದು ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ತೆಲುಗಿನ ಯೂಟ್ಯೂಬರ್ ಒಬ್ಬರು ನಡೆಸಿಕೊಡುವ ನಿಕಿಲ್ ತೋ ನಾಟಕಲು ಎಂಬ ಟಾಕ್ ಶೋದಲ್ಲಿ ಸೈನಾ ಪತಿಯೂ ಆಗಿರುವ ಬ್ಯಾಡ್ಮಿಂಟನ್ ತಾರೆ ಪರುಪಲ್ಲಿ ಕಶ್ಯಪ್ ಅವರು ಹೇಳಿಕೊಂಡಿದ್ದಾರೆ. ಅಂದಹಾಗೆ ಪರುಪಲ್ಲಿ ಕಶ್ಯಪ್ ಅವರದ್ದು ಕಡಿಮೆ ಸಾಧನೆ ಏನಲ್ಲ, ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ವಿಶ್ವದ ನಂಬರ್ ವನ್ ಶಟ್ಲರ್ ಆಗಿರುವ ಸೈನಾ ನೆಹ್ವಾಲ್ ಅವರನ್ನು 2018ರಲ್ಲಿ ವಿವಾಹವಾಗಿರುವ ಇವರೂ ಕೂಡ ಸೈನಾರಂತೆ ಬ್ಯಾಡ್ಮಿಂಟನ್ ಕೋಚ್ ಹಾಗೂ ಭಾರತದ ಮತ್ತೊಬ್ಬ ಬ್ಯಾಡ್ಮಿಂಟನ್ ತಾರೆ ಪುಲೇಲಾ ಗೋಪಿಚಂದ್ ಗರಡಿಯಲ್ಲಿ ಬೆಳೆದವರು.
ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ಮುರ್ಮು!
ಇತ್ತೀಚೆಗೆ ಪರುಪಲ್ಲಿ ಕಶ್ಯಪ್ ಅವರಿಗೆ ಮದುವೆಯೊಂದರಲ್ಲಿ ಲೆಜೆಂಡರಿ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು, ಈ ಸಂದರ್ಭವನ್ನು ಅವರು ನೆನಪು ಮಾಡಿಕೊಂಡಿದ್ದಾರೆ.
ಅವರೇನಂದರೂ ಅವರ ಮಾತುಗಳಲ್ಲೇ ಕೇಳಿ,
ನಾನು ಮದುವೆಯೊಂದರಲ್ಲಿ ಧೋನಿಯವರನ್ನು ಇತ್ತೀಚೆಗೆ ಭೇಟಿಯಾದೆ. ನಾನು ಕ್ರಿಕೆಟ್ ಹಾಗೂ ಧೋನಿ ಅಭಿಮಾನಿಯೂ ಹೌದು, ನಾನು ಸೈನಾಳ ಅರ್ಧಾಂಗಿ, ಕೇವಲ ಸ್ಪೋರ್ಟ್ಸ್ ಫಾಲೋ ಮಾಡುವವರಿಗೆ ಮಾತ್ರ ನನ್ನನ್ನು ಗುರುತಿಸುತ್ತಾರೆ ಎಂಬುದು ನನ್ನ ಯೋಚನೆಯಾಗಿತ್ತು. ಹೀಗಾಗಿ ಧೋನಿ ಅವರಿಗೆ ನಾನು ನನ್ನನ್ನು ಸೈನಾ ಪತಿ ಎಂದು ಪರಿಚಯಿಸಿಕೊಂಡೆ. ಈ ವೇಳೆ ಧೋನಿ, ನನಗೆ ನಿಮ್ಮನ್ನು ಗೊತ್ತಿದೆ ಸೋದರ, ನಾನು ಬ್ಯಾಡ್ಮಿಂಟನ್ ಆಡುತ್ತೇನೆ, ನನಗೆ ನೀವು ಯಾರು ಎಂಬುದು ಚೆನ್ನಾಗಿ ಗೊತ್ತು. ನೀವು, ನನಗೆ ನೀವು ಸೈನಾ ನೆಹ್ವಾಲ್ ಅವರ ಪತಿ ಎಂದು ಪರಿಚಯಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದರು, ಅಲ್ಲದೇ ಓರ್ವ ಸ್ನೇಹಿತನಂತೆ, ಅವರ ತಂಡದ ಓರ್ವ ಸದಸ್ಯನಂತೆ ನನ್ನೊಂದಿಗೆ ಮಾತನಾಡಿದರು ಎಂದು ಕಶ್ಯಪ್ ಅವರು ಧೋನಿ ಜೊತೆಗಿನ ತಮ್ಮ ಭೇಟಿಯ ಕ್ಷಣಗಳನ್ನು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಥಾಯ್ಲೆಂಡ್‌ನಲ್ಲಿ ಸೈನಾ ನೆಹ್ವಾಲ್, ಬೀಚ್‌ಸೈಡ್‌ನಲ್ಲಿ 'ಹಾಟ್' ಆದ ಬ್ಯಾಡ್ಮಿಂಟನ್ ಸುಂದರಿ!
ಥಾಲಾ, ಎಂಎಸ್‌ಡಿ, ಕ್ಯಾಪ್ಟನ್ ಕೂಲ್ ಎಂದೆಲ್ಲಾ ಅಭಿಮಾನಿಗಳಿಂದ ಕರೆಯಲ್ಪಡುವ ಧೋನಿ ಭಾರತ ಮೂರು ಐಸಿಸಿ ಟ್ರೋಫಿ ಗೆಲ್ಲಲು ಹಾಗೂ ಚೆನ್ನೈ ಸೂಪರ್ ಕಿಂಗ್ ಐದು ಬಾರಿ ಐಪಿಎಲ್ ಕಿರೀಟ ಗಳಿಸಲು ಕಾರಣೀಕರ್ತರಾಗಿದ್ದಾರೆ. ಧೋನಿ ಒಂದೂವರೆ ದಶಕಕ್ಕೂ ಅಧಿಕ ಕಾಲದ ತಮ್ಮ ಕ್ರಿಕೆಟ್ ಕೆರಿಯರ್‌ನಲ್ಲಿ 350 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 50.58 ಸರಾಸರಿಯಲ್ಲಿ 10,773 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಅವರು 90 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ 38.09 ಸರಾಸರಿಯಲ್ಲಿ 5000 ರನ್ ಗಳಿಸಿದ್ದರು, ಇದರ ಜೊತೆಗೆ ಐಪಿಎಲ್‌ನಲ್ಲಿ 5000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇತ್ತೀಚೆಗಷ್ಟೆ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿರು ಕ್ಯಾಪ್ಟನ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಪ್ರಸ್ತುತ ಕೇವಲ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಖ್ಯಾತ ಬ್ಯಾಡ್ಮಿಂಟನ್ ತಾರೆಯೊಬ್ಬರು ತಮ್ಮ ಪತ್ನಿಯ ಹೆಸರು ಹೇಳಿ ಪರಿಚಯಿಸಿಕೊಳ್ಳಬೇಕಾಗಿ ಬಂದಿರುವುದು ವಿಪರ್ಯಾಸ ಎನಿಸಿದರೂ, ಇಲ್ಲಿ ಕ್ರಿಕೆಟರ್ ಧೋನಿ ಸೈನಾ ಹೊರತಾಗಿ ನೀವೊಬ್ಬರು ಬ್ಯಾಡ್ಮಿಂಟನ್ ತಾರೆ ಎನ್ನುವ ಪರಿಚಯ ತನಗಿದೆ ಎಂದು ಹೇಳುವ ಮೂಲಕ ತಾನು ಬರೀ ಕ್ರಿಕೆಟರ್ ಅಲ್ಲ, ಓರ್ವ ಜವಾಬ್ದಾರಿಯುತ ನಾಗರಿಕನೂ ಎಂಬುದನ್ನು ಸಾಬೀತುಪಡಿಸಿದ್ದಾರೆ.