ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ ಅಂತಾರಲ್ಲ, ಏನಿದರರ್ಥ?
ಬದುಕು ನಾವಂದು ಕೊಂಡಂತೆ ಇರುವುದಿಲ್ಲ. ಅಪ್ಸ್, ಡೌನ್ ಜೊತೆಗೆ ಹತ್ತು ಹಲವು ಘಟನೆಗಳು ನಮ್ಮನ್ನು ಪುಟಿದೇಳುವಂತೆ ಮಾಡುತ್ತವೆ, ಇಲ್ಲವೆ ಕುಸಿದು ಬೀಳುವಂತಿರುತ್ತವೆ. ಅಂಥದ್ರಲ್ಲಿ ಈ ಮಾಯೆ ಅಂತಾರಲ್ಲ, ಹಾಗಂದ್ರೇನು?
- ಹರೀಶ್ ಕಶ್ಯಪ್
ಕಾಣುವುದನ್ನೇ ಬಯಸುವುದಕ್ಕಾಗುವುದು.
ಕಾಣದ್ದನ್ನು ಇಲ್ಲ ಎಂದೇ ಸಾಮಾನ್ಯ ನಿಲವು.
ಹಾಗಂತ ಕಾಣುವುದು ಮಾತ್ರವಿದೆ,
ಕಾಣದ್ದು ಇಲ್ಲ ಅಂತಿಲ್ಲ!
ಕಾಣುವುದು ಸಪ್ಪೆಯಾದಂತೆಲ್ಲ ಅನುಭೂತಿಗಳು ಪಕ್ಕಾಗುವುದು. ಆ ನಂತರವೇ ಕಾಣದ್ದೂ ಇರಬಹುದು ಎಂಬ ಕಡೆ ಧ್ಯಾನಿಸಲು ಸಾಧ್ಯ. ಶರೀರ ಜಗತ್ತು ಸಂಸಾರ - ಕಾಣುವುದು. ಕಾಲಕಾಲದಲ್ಲಿ ಈ ಕಾಣುವುದರ ಹಿಂದೆ ತೊಡಗಿಸಲಾಗುವುದು ! ಮನುಷ್ಯ ಅಂದುಕೊತಾನೆ , ನಾ ಕಂಡೆ ನನಗಿದು ಬೇಕು , ಇದು ಬೇಡ ಅಂತ. ಬೇಕು ಬೇಡಗಳೆಂಬ ಜಿದ್ದು ದ್ವಂದ್ವಗಳಲ್ಲೇ ಆಯು ಕಳೆವುದು. ಆದರೆ ಅವನು ತಾನೇ ತೊಡಗಿಲ್ಲ! ಯಾರದ್ದೋ ಇಂಥದ್ದೇ ಜಿದ್ದಿನ ಕಾರಣ ಪರತಂತ್ರವಾಗಿ ಇಲ್ಲಿಗೆ ಬಂದು, ಹೊರ ಇಣುಕಿ ಹೋದ! ಇದ ನಾನು ಕಂಡೆ, ನನಗಿದು ಬೇಕು ಎಂಬ ಅಜ್ಞಾನವ ಹೊದ್ದಿರುತ್ತಾನೆ. ಯಾಕೆಂದರೆ ಆ ಯಾರದ್ದೋ ಜಿದ್ದು ಕೂಡಾ ಅವರದ್ದು ಆಗಿರುವುದಿಲ್ಲ. ಅವರನ್ನೂ ಅದರಲ್ಲಿ 'ತೊಡಗಿಸಲಾಗಿರುತ್ತದೆ' - ಇವನಷ್ಟೇ ಅವರೂ ಪರತಂತ್ರರೇ!
ಕಾಲ ಕಾಲದಲ್ಲಿ ಇಂತದ್ದು ಬೇಕೆಂಬ ಪುಟ್ಟ ಕಣ್ಣಿಂದ ತಲೆಗೂ ತಲೆಯಿಂದ ಎದೆಗೂ 'ಏನೋ ಸ್ರವಿಸುತ್ತದೆ'! ಅದರಿಂದಲೇ ವಸ್ತು ವಿಷಯ ವ್ಯಕ್ತಿಗಳ ಹಿಂದೆ ತೊಡಗಲಾಗುವುದು! ಅದು ಅಲ್ಲಿ ಸ್ರವಿಸವು,' ಅಂದರೆ ಶೈಶವ ಎಂದಿಗೂ ಕೌಮಾರಕ್ಕೆ ಸಾಗಲು ಅಸಾಧ್ಯ! ಮುಂದೆ ಏನೂ ಆಗಲು ಅಸಾಧ್ಯ. ಹೀಗೇ 'ಅದೇನೋ ಸ್ರಾವ ಆಗುತ್ತಲೇ' ಸಾಗುವುದು. ಸ್ರಾವ ನಿಂತ ಕಡೆ 'ಸಾವ'ನು ! ಆದರೆ ಅದೊಂದನ್ನೇ ಆತ (ಯಾರೂ) 'ಕಾಣಲಾಗಲ್ಲ'. ಜೀವನವೆಲ್ಲಾ ನಾ ಕಂಡೆ ನಾ ಅದು ನಾ ಹೀಗೆ ಅಂತ ವಸ್ತು ನೈಪುಣ್ಯದಲ್ಲೇ ಇದ್ದವನು, ಸ್ರಾವ ನಿಂತ ಕೂಡಲೇ, ಆ ಸಾವನ್ನು ಕಾಣಲಾರ! ಕಂಡ ಎಲ್ಲವೂ ನನ್ನದು ಎಂದೇ ಇದ್ದು , ಈ ಸಾವೂ ನಿನ್ನದೇ ಅಲ್ಲವೇನು? ಅದನ್ನೇಕೆ ಕಾಣಲಾಗಿಲ್ಲ?! ಯೋಚಿಸು.
ನಾವು ಬಂದೇವ, ಸಮ್ಮೇಳನ ನೋಡಲಿಕ್ಕ: ನಾಡಿನ ಬರಹಗಾರರ ಸಂತಸದ ನುಡಿಗಳು!
ಅನ್ಯರು ಕೂಡಾ ನಿಂತಿತು , ಸತ್ತಿತು ಅಂತ ಕಾಣಲಾರರು! ಹೋಗಿಬಿಟ್ಟ...ಎನ್ನುವರು ಅಷ್ಟೇ. ಇಷ್ಟು ಮಹತ್ವ ತನ್ನದು ಎನ್ನುವ ಮನುಷ್ಯ ಎಂದಿಗೂ ತನ್ನ ಹುಟ್ಟನ್ನು ಅರಿಯ. ಸಾವನ್ನು ಅರಿಯ. ಯಾಕೆಂದರೆ 'ಇವ ಕಂಡದ್ದು ಮಾತ್ರ ನಂಬುವನು , ಹಿಂದೋಗುವನು'. ಹುಟ್ಟು ಹೇಗಾಯಿತು? ಕಾಣ. ಸಾವು ಹೇಗಾಯಿತು ? ಅದೂ ಗೊತ್ತಿಲ್ಲ. ಹುಟ್ಟಿದಾಗ ಆತ ಇರುತ್ತಾನೆ ! ಆದರೂ ಹುಟ್ಟು ಕಾಣಲಾಗದು! ಸಾವು ಬಂದ ಮೇಲೆ, ಅವನೇ ಇರಲ್ಲ, ಇನ್ನು ಕಾಣುವುದು ಹೇಗೆ? ಏನನ್ನು ಕಾಣಬಹುದು?! ಈ ವಿಚಿತ್ರ ವೈಭವಗಳ ಡೀಪರ್, ಭಾಳ ಆಳವಾಗಿ ಕಾಣುವರಾಗಿ. ಯಾರದೂ ಗ್ರಂಥವಲ್ಲ ಇದು. ಯಾರದೂ ಕಥೆಯಲ್ಲವಿದು. ಇದೆಲ್ಲವೂ, ನಿಜಕ್ಕೂ ಇದು 'ಮಾತ್ರ' ನಿಮ್ಮದೇ ನಮ್ಮದೇ ಅಣುಸತ್ಯ ಇರುವಿಕೆಯದ್ದು! ಇದನ್ನೇ ಕಾಣದೆ, ಓದದೇ ಇನ್ನೇನು ಕೋಟಿ ಹಾಳೆಗಳ ಓದೇನು. ಓದದ್ದರೇನು?
ಇದೊಂದಕ್ಕೆ ಮಾತ್ರವೇ ಯಾವ ಪೇಪರ್, ಪೆನ್, ಡೆಸ್ಕ್, ಅಚ್ಚು ಪುಸ್ತಕ ಬಿಡುಗಡೆ ಜನ ಜಮಾವಣೆ ಯಾವುದೂ ಬೇಕಿಲ್ಲ! ಪ್ರೀ ಸ್ಟಡೀಸ್ ಒಕ್ಕಣೆ ಅನುಗ್ರಹ ಸಂದೇಶ ಬೇಕಿಲ್ಲ. ಅಲ್ಲಿನದ್ದು ಏನೂ ಬೇಕಿಲ್ಲ. ಬೇಕಿರುವುದು ಆಂತರ್ಯ ಒಂದೇ. ಅದು ನಮ್ಮದೇ ಇರುವಿನ ಮೂಲಭೂತ ಆಂತರ್ಯದ ಓದು. ಇದನ್ನು ಹೀಗೆಲ್ಲ ಬರೆದು ಟೈಪ್ ಮಾಡಿ ಹೇಳುವುದೂ ಕೂಡಾ, ಹೊರಗ್ರಂಥಕವಲ್ಲ! ಇದೂ ಆಂತರ್ಯ ಓದಿನ ಪ್ರಸಾರವೇ.... ತಿಳಿಯಬಲ್ಲವರು ಶುರುಹಚ್ಚುವರು. ಇದನ್ನು ಓದಬೇಕು. ಇದನ್ನು ತಿಳಿಯಬೇಕು. ಇಲ್ಲಿ ಇಳಿಯಬೇಕು. ಇದಾಗದಿದ್ದರೆ , 'ಕಾಣದ್ದು' ಎಂದಿಗೂ ಕಾಣಿಸದೆ ನಿತ್ಯ ಕುರುಡಿನಲ್ಲೇ ಕೊನೆಯಾಗುವುದು. ಅಧ್ಯಾತ್ಮ ತೆರೆಯದು. ಪ್ರತಿಯೊಬ್ಬನೂ ಬಯಕೆಗಳ ಬಳ್ಳಿಯೇ. ಅದಾವ ಬಯಕೆಯ ಸಾರಗಳಿಂದ ದೇಹ ಸಮಷ್ಟಿಯಾಗಿ ಹುಟ್ಟಿದೆಯೋ ಅದೆಲ್ಲವೂ ದೇಹದ ನಷ್ಟದೊಂದಿಗೆ ನಷ್ಟವಾಗುವುದು.
ಮಂಡ್ಯದಲ್ಲಿ ನಡೆದ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪು!
ಐದರಲ್ಲೇ ಇದ್ದು ಐದಾಗಿ ಹರಡಿ ಕೊನೆಗೆ ಐದರಲ್ಲೇ ಲೀನವಾಗುತ್ತಾ ಮರೆಯಾಗುವುದು. ನಡುವೆಯೂ ಐದರಿಂದಲೇ ಜೀವಿಸಿ ಏಗಿ ಆಶಿಸಿ ಪಡೆದು ಐದನ್ನೇ ಐದುವುದು! ಐದು ಅಂದರೆ ಸಂಖ್ಯೆಯೂ ಹೌದು , ದಾಟುವುದೂ ಹೌದು. (ಪಂಚ ಭೂತಾತ್ಮ) ಯಾವ ಐದು ಕಾಣುವುದೋ ಯಾವ ಐದರದ್ದೇ ಮಾಯೆಯೋ ಅದನ್ನೇ ಕಂಡದ್ದನ್ನೇ ಆಶಿಸುವುದು, ಅದನ್ನೇ ಜೀವಿಸುವುದು ಈ ಐದರದ್ದೇ ಸ್ವಾಭಾವಿಕ. ಅದನ್ನೇ ಸಂಸಾರ ಎನ್ನುವುದು. ಐದರ ಲೆಕ್ಕ ಇಂತು ತಿಳಿದ ಮೇಲೆಯೇ, ಅದರಾಚೆಗೆ ಐದಲಾಗುವುದು. ಕಾಣುವುದರ ಆಚೆ, ಕಾಣದ್ದು ಸದಾ ಇರುವುದರಿಂದಲೇ, ಏನು ಮಾತ್ರ ಕಾಣುವುದೋ ಅಷ್ಟಾದರೂ ಕಾಣಲಾಗುವುದು ! ಆ ಕಾಣದ್ದ ಪಡೆಯಬೇಕೆಂಬ ಬಯಕೆ ಇಲ್ಲಿಂದ ಪುಟಿವುದು.