ಭಗವದ್ಗೀತೆ ಹೇಳುವ ಈ ವಾಕ್ಯಗಳು ಪ್ರತಿಯೊಬ್ಬರ ಜೀವನದಲ್ಲೂ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇವುಗಳನ್ನು ಅನುಸರಿಸಿದರೆ ಜೀವನದಲ್ಲಿ ಯಶಸ್ಸು ಹಾಗೂ ನೆಮ್ಮದಿ ಖಂಡಿತ ಎನ್ನಬಹುದು. ಇದೀಗ ಈ ಸಾಲುಗಳನ್ನು ಬರೆದಿರುವ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಶ್ರೀಕೃಷ್ಣ-ಭಗವದ್ಗೀತೆ
ಸನಾತನ ಧರ್ಮದಲ್ಲಿ ಶ್ರೀಕೃಷ್ಣ (Sri Krishan) ಹಾಗೂ ಭಗವದ್ಗೀತೆಗೆ (Bhagavd Geta) ಅತ್ಯಂತ ಮುಖ್ಯ ಸ್ಥಾನವಿದೆ. ಮಹಾಭಾರತ ಯುದ್ಧವು ಕೌರವರು ಹಾಗೂ ಪಾಂಡವರ ಮಧ್ಯೆ ನಡೆದಿದ್ದರೂ ಅದರ ಸೂತ್ರಧಾರ ಶ್ರೀಕೃಷ್ಣ ಎಂಬುದು ಜಗಜ್ಜಾಹೀರು. ಪಾಂಡವರ ಸಾರಥಿಯಾಗಿ ಶ್ರೀಕೃಷ್ಣ ಯುದ್ಧಭೂಮಿಗೆ ಬಂದಿದ್ದರೂ ಅದಕ್ಕೂ ಮೊದಲು ಅವನು ದಾಯಾದಿಗಳ ನಡುವಿನ ಈ ಯುದ್ಧವನ್ನು ತಪ್ಪಿಸಲು ಬಹಳಷ್ಟು ಪ್ರಯತ್ನ ಮಾಡಿದ್ದನು. ಆದರೆ ಯುದ್ಧ ನಿಲ್ಲಿಸುವ ಪ್ರಯತ್ನ ಅಸಫಲವಾದಾಗ, ಶ್ರೀಕೃಷ್ಣ ಧರ್ಮದ ಪರ ನಿಂತು ಪಾಂಡವರ ಪಕ್ಷಕ್ಕೆ ಸಪೋರ್ಟ್ ಮಾಡಿದನು. ಆ ಬಳಿಕ ಪಾಂಡವರು ಯುದ್ಧ ಗೆದ್ದು ಮರಳಿ ತಮ್ಮ ಪಾಲಿನ ರಾಜ್ಯವನ್ನು ಪಡೆದಿದ್ದು ಈಗ ಇತಿಹಾಸ.
18 ದಿನಗಳು ಅರ್ಜುನನಿಗೆ ಬೋಧಿಸಿದ ಪಾಠ
ಇಂಥ ಶ್ರೀಕೃಷ್ಣ 'ಮಹಾಭಾರತ'ದ ಯುದ್ಧದಲ್ಲಿ 18 ದಿನಗಳು ಅರ್ಜುನನಿಗೆ ಬೋಧಿಸಿದ ಪಾಠವೇ ಭಗವದ್ಗೀತೆ. ಈ ಭಗವದ್ಗೀತೆಯಲ್ಲಿ ಬರುವ ಶ್ಲೋಕದ ನುಡಿಗಳು ಮಾನವರ ಅತ್ಯುತ್ತಮ ಜೀವನಕ್ಕೆ ಕೈಗನ್ನಡಿ ಇದ್ದಂತೆ ಎನ್ನಬಹುದು. ಭಗವದ್ಗೀತೆಯಲ್ಲಿಏನಿಲ್ಲ ಅಂತ ಹುಡುಕುವುದು ಕಷ್ಟ. ಅದರಲ್ಲಿ ಧರ್ಮ-ಅಧರ್ಮದ ಬಗ್ಗೆ ಇದೆ, ರಾಜಕೀಯವಿದೆ, ರಾಜಕಾರಣವಿದೆ, ನ್ಯಾಯ-ಅನ್ಯಾಯದ ಪಾಠವಿದೆ. ಯುದ್ಧ ಕೌಶಲ್ಯವಿದೆ, ಆತ್ಮ-ಪರಮಾತ್ಮದ ಬಗ್ಗೆ, ಕರ್ಮ-ಕರ್ಮಫಲದ ಬಗ್ಗೆ, ಜನ್ಮ-ಮೋಕ್ಷದ ಬಗ್ಗೆ ಮಾಹಿತಿಗಳಿವೆ. ಭಗವದ್ಗೀತೆಯಲ್ಲಿ ಏನಿದೆ ಎಂದು ಹೇಳುತ್ತಾ ಹೊರಟರೆ ಅದೊಮದು ಮುಗಿಯದ ಪ್ರಯಾಣ. ಆದರೆ, ಏನಿಲ್ಲ ಅಂತ ಹೇಳಹೊರಟರೆ ಅದು ಒಂದೇ ವಾಕ್ಯದಲ್ಲಿ ಮುಗಿಯುತ್ತದೆ.
ವೈರಲ್ ಆಗಿರುವ ಸಾಲುಗಳು
ಅಂಥ ಭಗವದ್ಗೀತೆಯಲ್ಲಿ ವೈರಲ್ ಆಗಿರುವ ಸಾಲುಗಳು ಸಾಕಷ್ಟಿವೆ. ಅದರಲ್ಲಿ ಈ ಕೆಳಗಿನ ಸಾಲುಗಳು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಹಾಗಿದ್ದರೆ ಅದೇನು ನೋಡಿ..
1. ಫಲದ ನಿರೀಕ್ಷೆ ಇಲ್ಲದೇ ನಿನ್ನ ಕೆಲಸ ಮಾಡು; ಯಶಸ್ಸು ತನ್ನಷ್ಟಕ್ಕೆ ತಾನೇ ಬರುತ್ತದೆ.
2. ಬದಲಾವಣೆಯೇ ಜಗತ್ತಿನ ನಿಯಮ, ಯಾವುದನ್ನೂ ಶಾಶ್ವತ ಎಂದು ಭಾವಿಸಬೇಡಿ.
3. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ, ಇಲ್ಲದಿದ್ದರೆ ಅದೇ ನಿಮ್ಮ ಶತ್ರುವಾಗುತ್ತದೆ.
4. ಭೂತಕಾಲದ ಬಗ್ಗೆ ಚಿಂತಿಸಬೇಡಿ, ಸದ್ಯದ ಕಾಲದಲ್ಲಿ ಬದುಕುವುದನ್ನು ಕಲಿಯಿರಿ.
5. ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆ, ಕಷ್ಟದ ಸಮಯದಲ್ಲಿ ತಾಳ್ಮೆಯಿಂದಿರಿ
ಹೌದು, ಭಗವದ್ಗೀತೆ ಹೇಳುವ ಈ ವಾಕ್ಯಗಳು ಪ್ರತಿಯೊಬ್ಬರ ಜೀವನದಲ್ಲೂ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇವುಗಳನ್ನು ಅನುಸರಿಸಿದರೆ ಜೀವನದಲ್ಲಿ ಯಶಸ್ಸು ಹಾಗೂ ನೆಮ್ಮದಿ ಖಂಡಿತ ಎನ್ನಬಹುದು. ಇದೀಗ ಈ ಸಾಲುಗಳನ್ನು ಬರೆದಿರುವ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ.


