ಸೆಕ್ಷನ್ 4ರಲ್ಲಿ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಅಥವಾ ಡಿವೈಎಸ್ಪಿ ರ್ಯಾಂಕ್ ಮೇಲ್ಪಟ್ಟ ಅಧಿಕಾರಿಗೆ ನಂಬಲು ಕಾರಣವಿದ್ದರೆ ಎಂದು ಬರೆಯುತ್ತಾರೆ. ಆದರೆ, ಇದು ಸಾಬೀತು ಆಗಬೇಕಿಲ್ಲ. ಕೇವಲ ಆ ಅಧಿಕಾರಿಗೆ ನಂಬಲು ಕಾರಣವಿದ್ದರೆ ಸಾಕು.
ಲೇಖಕರು: ಪಿ. ರಾಜೀವ್, ಮಾಜಿ ಶಾಸಕರು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಸೆಕ್ಷನ್ 4ರಲ್ಲಿ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಅಥವಾ ಡಿವೈಎಸ್ಪಿ ರ್ಯಾಂಕ್ ಮೇಲ್ಪಟ್ಟ ಅಧಿಕಾರಿಗೆ ನಂಬಲು ಕಾರಣವಿದ್ದರೆ ಎಂದು ಬರೆಯುತ್ತಾರೆ. ಆದರೆ, ಇದು ಸಾಬೀತು ಆಗಬೇಕಿಲ್ಲ. ಕೇವಲ ಆ ಅಧಿಕಾರಿಗೆ ನಂಬಲು ಕಾರಣವಿದ್ದರೆ ಸಾಕು. ಒಬ್ಬ ಎಂಎಲ್ಎಯಿಂದ ಆತನಿಗೆ ಫೋನ್ ಹೋದರೆ ಅವನಿಗೆ ನಂಬಲು ಸಾಧ್ಯವಾಗುತ್ತದೆ. ಯಾರೋ ಒಬ್ಬರು ಲಂಚ ನೀಡಿದರೆ ಅವನು ನಂಬಲು ಸಾಧ್ಯವಾಗುತ್ತದೆ. ಈ ತರಹದ ಸಂವಿಧಾನದ ಆಶಯ ವಿರುದ್ಧ ಆರ್ಟಿಕಲ್ 19ರ ಅಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕು, ಪ್ರತಿಯೊಬ್ಬನಿಗೂ ಸಭೆ ಸೇರುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ ಕೊಟ್ಟಿದ್ದರು. ಅದಕ್ಕೆ ಎಳ್ಳು ನೀರು ಬಿಡುವಂತಹ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ.
ಭಾರತ ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ದೇಶ. ಭಾರತದಲ್ಲಿ ಪ್ರತಿ 50 ಕಿ.ಮೀ.ಗೆ ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಆಚರಣೆಗಳಲ್ಲಿ ಬದಲಾವಣೆ ಕಾಣುತ್ತೇವೆ. ಹಾಗಾಗಿ ಈ ದೇಶವನ್ನು ಸಾಂಸ್ಕೃತಿಕ ಪ್ರಯೋಗ ಶಾಲೆ ಎಂದು ಕರೆಯುತ್ತಾರೆ. ಈ ವಿಭಿನ್ನತೆಯನ್ನು ವಿರೋಧಾಭಾಸವಾಗಿ ನೋಡುವ ಮನಸ್ಥಿತಿ ಇರುವ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆಸಿಕೊಳ್ಳುವಂಥ ಪತ್ರಿಕಾರಂಗವನ್ನು ಒಳಗೊಂಡಂತೆ ಎಲ್ಲರ ಮೇಲೆ ಅಂಕುಶ ಹಾಕಲು ಹೊರಟಿದೆ.
ಒಬ್ಬ ತತ್ವಜ್ಞಾನಿ ಹೇಳುತ್ತಾನೆ- ನೀನು ನಂಬಿರುವ ಸಿದ್ಧಾಂತವನ್ನು ನಾನು ಬದುಕಿರುವವರೆಗೂ ಒಪ್ಪಲಾರೆ, ಆದರೆ ಅವುಗಳನ್ನು ಪ್ರತಿಪಾದಿಸಲು ಇರುವ ನಿನ್ನ ಹಕ್ಕುಗಳ ರಕ್ಷಣೆಗಾಗಿ ನನ್ನ ದೇಹದಲ್ಲಿ ಕೊನೆಯ ರಕ್ತದ ಹನಿ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು. ಇದು ಪ್ರಜಾಪ್ರಭುತ್ವದ ಸೌಂದರ್ಯ. ಒಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸ್ವೀಕರಿಸಿ, ಆತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿ, ಆತನ ವಿಚಾರಗಳನ್ನು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಆದರೆ ಅವಕಾಶ ಕೊಡುವಂಥದ್ದು ಪ್ರಜಾಪ್ರಭುತ್ವದ ಜವಾಬ್ದಾರಿಯ ಮೂಲಭೂತ ನೆಲೆಗಟ್ಟು ಎಂದು ನಾನು ಭಾವಿಸುತ್ತೇನೆ.
ಈ ಕಾನೂನು ತರುವ ಉದ್ದೇಶವೇನು?: ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಭಗತ್ ಸಿಂಗ್, ರಾಜಗುರು ಮತ್ತು ಅಂಬೇಡ್ಕರ್ ಅವರು ಬ್ರಿಟಿಷ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ತಾತ್ವಿಕವಾದ ನೆಲೆಗಟ್ಟಿನಲ್ಲಿ ವ್ಯಕ್ತಪಡಿಸಿದ್ದರು. ಬ್ರಿಟಿಷರು ಕೂಡ ಅಂತಹ ಒಂದು ಅವಕಾಶವನ್ನು ಮಾಡಿಕೊಟ್ಟಿದ್ದರು. ಆದರೆ ಈ ಕಾಂಗ್ರೆಸ್ ಸರ್ಕಾರ ಬ್ರಿಟಿಷರಿಗಿಂತಲೂ ಕರಾಳವಾದ ಕಾನೂನು ಜಾರಿಗೆ ತರುತ್ತಿರುವುದು ದುರಂತವೇ ಸರಿ. ಈ ಕಾನೂನು ತರುವ ಮೂಲ ಉದ್ದೇಶವೇನು? ನನ್ನ ಪ್ರಕಾರ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಹಳಿ ತಪ್ಪಿದೆ. ಸುಸ್ಥಿರವಾದಂಥ ಆರ್ಥಿಕತೆ ಶಿಸ್ತು ಏನಿತ್ತೋ ಆ ಶಿಸ್ತಿನ ಹಳಿ ತಪ್ಪಿದ್ದರಿಂದಲೇ ಇಷ್ಟೆಲ್ಲ ತೆರಿಗೆಗಳನ್ನು ಹಾಕಿದ್ದರೂ, ಬೆಲೆ ಏರಿಕೆ ಮಾಡಿದರೂ ರಾಜಸ್ವ ಕೊರತೆಯ ಬಜೆಟ್ ಅನ್ನು ನಾವು ಕಳೆದ ಮೂರು ಬಜೆಟ್ಗಳಲ್ಲಿ ಎದುರಿಸುತ್ತಿದ್ದೇವೆ.
ಹಿಂದೆ ಎರಡೂವರೆ ಲಕ್ಷ ಕೋಟಿ ರು. ಬಜೆಟ್ ಗಾತ್ರ ಇದ್ದಾಗಲೂ ನಾವು ರೆವಿನ್ಯೂ ಮಿಗತೆಯಲ್ಲಿ ಇದ್ದೆವು. ಅಂದರೆ, ರಾಜಸ್ವ ಹೆಚ್ಚುವರಿಯಲ್ಲಿ ಇದ್ದೆವು. ಈಗ 4.15 ಲಕ್ಷ ಕೋಟಿ ರು. ಬಜೆಟ್ ಗಾತ್ರ ಇದ್ದರೂ ರಾಜಸ್ವ ಕೊರತೆಯ ಬಜೆಟ್ನಲ್ಲಿಯೇ ಹೋಗುತ್ತಿದ್ದೇವೆ. ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಉಲ್ಲಂಘನೆ. ಸರ್ಕಾರದ ಈ ವೈಫಲ್ಯವನ್ನು ಜನ ಮುಕ್ತವಾಗಿ ಮಾತನಾಡಲು ಯಾವಾಗ ಶುರು ಮಾಡಿದರೋ, ಸರ್ಕಾರದ ವೈಫಲ್ಯಗಳ ಬಗ್ಗೆ ಜನ ಮಾತನಾಡಲು ಯಾವಾಗ ಆರಂಭಿಸಿದರೋ ಆಗ ಸರ್ಕಾರದ ಶಕ್ತಿ ಕುಂದಿ ಹೋದಂತಾಗಿದೆ. ಹೀಗಾಗಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಬಾರದು ಎಂಬ ಒಂದೇ ಒಂದು ದುರುದ್ದೇಶದಿಂದ ಈ ಕಾಯ್ದೆ ತರಲು ಹೊರಟಿದ್ದಾರೆ. ಇದರ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
ಕಾಯ್ದೆ ದುರುಪಯೋಗ ಹೇಗೆ?: ದ್ವೇಷ ಭಾಷಣ ಕಾಯ್ದೆಯನ್ನು ಯಾವ ರೀತಿ ದುರುಪಯೋಗಪಡಿಸಿಕೊಳ್ಳುತ್ತಾರೆಂದರೆ ಇವರು ತಂದಿರುವ ಕಾಯ್ದೆ ಸೆಕ್ಷನ್ 2ರಲ್ಲಿ ದ್ವೇಷ ಭಾಷಣ ಎಂಬುದಕ್ಕೆ ವ್ಯಾಖ್ಯಾನ ಕೊಡುತ್ತಾರೆ. ಕೇವಲ ಮೌಖಿಕವಾಗಿ, ಸಾರ್ವಜನಿಕ ನೋಟದಲ್ಲಿ ಅಥವಾ ಲಿಖಿತ ಪದಗಳಲ್ಲಿ ಅಥವಾ ಸಂಕೇತಗಳ ಮೂಲಕ, ದೃಶ್ಯ ರೂಪಕಗಳ ಮೂಲಕ ಎಂದು ಹೇಳಿ ಸೇರಿಸುತ್ತಾರೆ. ಇದು ಯಾವ ಮಟ್ಟಕ್ಕೆ ಬೇಕಾದರೂ ದುರುಪಯೋಗ ಮಾಡಿಕೊಳ್ಳಬಹುದಾಗಿದೆ.
ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಲು ಇಟ್ಟುಕೊಂಡಿರುವಂಥ ವ್ಯಾಖ್ಯಾನ ಇದಾಗಿದೆ. ಈ ರೀತಿಯ ವ್ಯಾಖ್ಯಾನದಿಂದ ಯಾರನ್ನು ಬೇಕಾದರೂ ದಂಡನೆಗೆ ಒಳಪಡಿಸಬಹುದು. ಎರಡನೆಯದಾಗಿ ಸೆಕ್ಷನ್ 5ರಲ್ಲಿ ಸಂಘ ಅಥವಾ ಸಂಸ್ಥೆಗಳಿಂದ ಯಾವ ಯಾವ ಅಪರಾಧಗಳು ಆಗುತ್ತವೆ ಎಂದು ಹೇಳಿ ಯಾವುದೇ ಒಬ್ಬ ವ್ಯಕ್ತಿಯನ್ನು ಅಥವಾ ಗುಂಪು ಸಮೂಹವನ್ನು ಕೇಂದ್ರಿಕರಿಸಿ, ಅವರಿಗೆ ತೊಂದರೆ ಕೊಡುವ ಮೂಲಕ ದುರುಪಯೋಗಪಡಿಸಿಕೊಳ್ಳಬಹುದು.
ಸೆಕ್ಷನ್ 4ರಲ್ಲಿ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಅಥವಾ ಡಿವೈಎಸ್ಪಿ ರ್ಯಾಂಕ್ ಮೇಲ್ಪಟ್ಟ ಅಧಿಕಾರಿಗೆ ನಂಬಲು ಕಾರಣವಿದ್ದರೆ ಎಂದು ಬರೆಯುತ್ತಾರೆ. ಆದರೆ, ಇದು ಸಾಬೀತು ಆಗಬೇಕಿಲ್ಲ. ಕೇವಲ ಆ ಅಧಿಕಾರಿಗೆ ನಂಬಲು ಕಾರಣವಿದ್ದರೆ ಸಾಕು. ಒಬ್ಬ ಎಂಎಲ್ಎಯಿಂದ ಆತನಿಗೆ ಫೋನ್ ಹೋದರೆ ಅವನಿಗೆ ನಂಬಲು ಸಾಧ್ಯವಾಗುತ್ತದೆ. ಯಾರೋ ಒಬ್ಬರು ಲಂಚ ನೀಡಿದರೆ ಅವನು ನಂಬಲು ಸಾಧ್ಯವಾಗುತ್ತದೆ. ಈ ತರಹದ ಸಂವಿಧಾನದ ಆಶಯ ವಿರುದ್ಧ ಆರ್ಟಿಕಲ್ 19ರ ಅಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕು, ಪ್ರತಿಯೊಬ್ಬನಿಗೂ ಸಭೆ ಸೇರುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ ಕೊಟ್ಟಿದ್ದರು. ಅದಕ್ಕೆ ಎಳ್ಳು ನೀರು ಬಿಡುವಂತಹ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ.
ಮೂವರೇ ಇವರ ಟಾರ್ಗೆಟ್
ಈ ಕಾಯ್ದೆ ಮೂಲಕ ರಾಜಕೀಯ ವಿರೋಧಿಗಳನ್ನು, ಮಾಧ್ಯಮದವರನ್ನು, ಬರಹಗಾರರನ್ನು ಟಾರ್ಗೆಟ್ ಮಾಡುತ್ತಾರೆ. ಇನ್ನು ಕಾಂಗ್ರೆಸ್ ಹೊಗಳುಭಟರು ಮಾತ್ರ ಪೆನ್ನು, ಹಾಳೆ ತೆಗೆದುಕೊಂಡು ಬರೆಯಲು ಸಾಧ್ಯ. ಕಾಂಗ್ರೆಸ್ ಹೊಗಳುಭಟರು ಮಾತ್ರ ಟಿ.ವಿ ನಡೆಸಲು ಸಾಧ್ಯ. ಕಾಂಗ್ರೆಸ್ ಹೊಗಳುಭಟರು ಮಾತ್ರ ವೇದಿಕೆ ಹತ್ತಲು ಸಾಧ್ಯ. ಒಟ್ಟಾರೆ ಕಾಂಗ್ರೆಸ್ ಹೊಗಳುಭಟರು ಮಾತ್ರ ಪತ್ರಿಕೆ, ಮಾಧ್ಯಮಗಳು ಮತ್ತು ವೇದಿಕೆಗಳಲ್ಲಿ ಮಾತನಾಡುವ, ಭಾಷಣ ಮಾಡಲು ಸಾಧ್ಯವಾಗುವಂಥ ವಾತಾವರಣವನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಅವರು ಇಷ್ಟೆಲ್ಲ ವಿವರಿಸುವ ಅಗತ್ಯವೇ ಇರಲಿಲ್ಲ. ಕೇವಲ ಕಾಂಗ್ರೆಸ್ ಹೊಗಳು ಭಟರಿಗೆ ಮಾತ್ರ ಎಂದು ಒಂದು ಸಾಲನ್ನು ವಿಧೇಯಕದಲ್ಲಿ ಪ್ರಸ್ತಾಪ ಮಾಡಿದ್ದರೆ ಸಾಕಿತ್ತು.


