Asianet Suvarna News

ಮಲೆನಾಡಿಗರಿಗೆ ಮತ್ತೊಂದು ಗುಡ್ ನ್ಯೂಸ್ : ಚೆನ್ನೈ, ತಿರುಪತಿಗೆ ನೇರ ರೈಲು

ಮಲೆನಾಡಿಗರಿಗೆ ಕೆಲ ದಿನಗಳ ಹಿಂದಷ್ಟೇ ಶನಶತಾಬ್ದಿ ಕೊಡುಗೆ ನೀಡಲಾಗಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಇಲ್ಲಿದೆ. ಮತ್ತೆ ಮೂರು ನಗರಗಳಿಗೆ ರೈಲು ಸೇವೆ ವಿಸ್ತರಿಸಲಾಗುತ್ತಿದೆ. 

Trains service from shivamogga to chennai tirupati
Author
Bengaluru, First Published Nov 8, 2019, 2:06 PM IST
  • Facebook
  • Twitter
  • Whatsapp

ಶಿವಮೊಗ್ಗ (ನ.08): ಮಲೆನಾಡಿನ ಜನತೆಗೆ ಇಲ್ಲಿ ಗುಡ್ ನ್ಯೂಸ್ ಒಂದಿದೆ. ಇದೇ ನವೆಂಬರ್ 10 ರಂದು  ಶಿವಮೊಗ್ಗದಿಂದ ಮತ್ತೆ ಮೂರು ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ. 

ತಮಿಳುನಾಡು ರಾಜಧಾನಿ ಚೆನ್ನೈ ಹಾಗೂ ವಿಶ್ವವಿಖ್ಯಾತ ಧಾರ್ಮಿಕ ಕ್ಷೇತ್ರ ಆಂಧ್ರಪ್ರದೇಶದ ತಿರುಪತಿ ಹಾಗೂ ಮೈಸೂರಿಗೆ ಸಂಚರಿಸುವ ನೂತನ ರೈಲು ಸೇವೆಗ ಚಾಲನೆ ದೊರೆಯಲಿದೆ. 

ನೇರ ರೈಲಿನ ಕನಸು ನನಸಾಗುತ್ತಿದ್ದು, ನವೆಂಬರ್ 10ರ ಭಾನುವಾರ  ಶಿವಮೊಗ್ಗದಿಂದ ಚೆನ್ನೈ, ಶಿವಮೊಗ್ಗದಿಂದ ತಿರುಪತಿ ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ವೀಕ್ಲಿ ಸ್ಪೆಶಲ್ ಎಕ್ಸ್‌ ಪ್ರೆಸ್ ರೈಲುಗಳಿಗೆ ಭಾನುವಾರ ಸಂಸದ ರಾಘವೇಂದ್ರ ಚಾಲನೆ ನೀಡಲಿದ್ದಾರೆ.

ಈಗಾಗಲೇ ಜನಶತಾಬ್ದಿ ರೈಲು ಸೇರಿದಂತೆ ಬೆಂಗಳೂರು, ಮೈಸೂರಿಗೆ ರೈಲು ಸೇವೆ ಇದ್ದು ಇದೀಗ ಹೊರ ರಾಜ್ಯಗಳಿಗೂ ಶಿವಮೊಗ್ಗದಿಂದ ರೈಲು ಸಂಚಾರ ವಿಸ್ತರಿಸಲಾಗುತ್ತಿದೆ.  

ನೂತನ ಮೂರು ರೈಲುಗಳ ವಿವರ ಹೀಗಿದೆ:

ಶಿವಮೊಗ್ಗ ಟೌನ್-ಚೆನ್ನೈ-ಶಿವಮೊಗ್ಗ ಟೌನ್ ವೀಕ್ಲಿ ಸ್ಪೆಷಲ್ ಎಕ್ಸ್‌’ಪ್ರೆಸ್

ರೈಲು ಸಂಖ್ಯೆ: 06221/06222
ಶಿವಮೊಗ್ಗದಿಂದ ಹೊರಡುವ ವೇಳೆ: ಪ್ರತಿ ಸೋಮವಾರ ರಾತ್ರಿ 11.55 ಗಂಟೆ
ಚೆನ್ನೈ ತಲುಪುವ ವೇಳೆ: ಮಂಗಳವಾರ ಬೆಳಗ್ಗೆ 11.15 ಗಂಟೆ
ಚೆನ್ನೈನಿಂದ ಹೊರಡುವ ವೇಳೆ: ಪ್ರತಿ ಮಂಗಳವಾರ ಮಧ್ಯಾಹ್ನ 3 ಗಂಟೆ
ಶಿವಮೊಗ್ಗ ತಲುಪುವ ವೇಳೆ: ಬುಧವಾರ ಬೆಳಗಿನ ಜಾವ 3.55 ಗಂಟೆ

ಮಾರ್ಗ: ಶಿವಮೊಗ್ಗ-ಭದ್ರಾವತಿ-ತರೀಕೆರೆ-ಬೀರೂರು-ಕಡೂರು-ಅರಸೀಕೆರೆ-ತುಮಕೂರು-ಚಿಕ್ಕಬಾಣಾವರ-ಬಾಣಸವಾಡಿ-ಕೃಷ್ಣರಾಜಪುರಂ- ಬಂಗಾರಪೇಟೆ-ಜೋಲಾರ್’ಪೇಟೆ- ಕಾಟ್ಪಾಡಿ-ಪೆರಂಬೂರು-ಚೆನ್ನೈ ಸೆಂಟ್ರಲ್

ಮಲೆನಾಡಿಗರಿಗೆ ಮತ್ತೊಂದು ಸಿಹಿ ಸುದ್ದಿ: ಜನಶತಾಬ್ಧಿ ಸಂಚಾರ ವಿಸ್ತರಣೆ...
ಶಿವಮೊಗ್ಗ ಟೌನ್-ತಿರುಪತಿ(ರೇಣಿಗುಂಟ)-ಶಿವಮೊಗ್ಗ ಟೌನ್ ವೀಕ್ಲಿ ಸ್ಪೆಷಲ್ ಎಕ್ಸ್‌’ಪ್ರೆಸ್

ರೈಲು ಸಂಖ್ಯೆ: 06223/06224
ಶಿವಮೊಗ್ಗದಿಂದ ಹೊರಡುವ ವೇಳೆ: ಪ್ರತಿ ಬುಧವಾರ ಬೆಳಗ್ಗೆ 6.15 ಗಂಟೆ
ತಿರುಪತಿ(ರೇಣಿಗುಂಟ) ತಲುಪುವ ವೇಳೆ: ಬುಧವಾರ ರಾತ್ರಿ 8.05 ಗಂಟೆ
ತಿರುಪತಿ(ರೇಣಿಗುಂಟ)ದಿಂದ ಹೊರಡುವ ವೇಳೆ: ಪ್ರತಿ ಬುಧವಾರ ರಾತ್ರಿ 9.45 ಗಂಟೆ
ಶಿವಮೊಗ್ಗ ತಲುಪುವ ವೇಳೆ: ಗುರುವಾರ ಬೆಳಗ್ಗೆ 11.45 ಗಂಟೆ

ಮಾರ್ಗ: ಶಿವಮೊಗ್ಗ-ಭದ್ರಾವತಿ-ತರೀಕೆರೆ-ಬೀರೂರು-ಅಜ್ಜಂಪುರ-ಹೊಸದುರ್ಗ -ಚಿಕ್ಕಜಾಜೂರು-ಚಿತ್ರದುರ್ಗ-ಮೊಳಕಾಲ್ಮೂರು-ರಾಯದುರ್ಗ- ಬಳ್ಳಾರಿ-ಗುಂತಕಲ್-ಗೂಟಿ-ತಾಡಪತ್ರಿ-ಕೊಂಡಾಪುರಂ-ಯೆರಗುಂಟ್ಲಾ- ಕಡಪಾ-ರಾಜಂಪೇಟ-ರೇಣಿಗುಂಟ 


ಮೈಸೂರು-ಶಿವಮೊಗ್ಗ ಟೌನ್-ಮೈಸೂರು ಜನಸಾಧಾರಣ್ ವೀಕ್ಲಿ ಎಕ್ಸ್‌’ಪ್ರೆಸ್

ರೈಲು ಸಂಖ್ಯೆ: 06225/06226
ಮೈಸೂರಿನಿಂದ ಹೊರಡುವ ವೇಳೆ: ಪ್ರತಿ ಸೋಮವಾರ ಸಂಜೆ 4.40 ಗಂಟೆ
ಶಿವಮೊಗ್ಗ ತಲುಪುವ ವೇಳೆ: ರಾತ್ರಿ 10.30 ಗಂಟೆ
ಶಿವಮೊಗ್ಗದಿಂದ ಹೊರಡುವ ವೇಳೆ: ಪ್ರತಿ ಗುರುವಾರ ಮಧ್ಯಾಹ್ನ 1 ಗಂಟೆ
ಮೈಸೂರು ತಲುಪುವ ವೇಳೆ: ಸಂಜೆ 7.05 ಗಂಟೆ


ಮಾರ್ಗ: ಮೈಸೂರು-ಕೆ.ಆರ್. ನಗರ-ಹೊಳೆನರಸೀಪುರ-ಹಾಸನ- ಅರಸೀಕೆರೆ-ಕಡೂರು-ಬೀರೂರು-ತರೀಕೆರೆ-ಭದ್ರಾವತಿ-ಶಿವಮೊಗ್ಗ

ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು...

Follow Us:
Download App:
  • android
  • ios