ಶಿವಮೊಗ್ಗ : ಟಿಕ್‌ಟಾಕ್‌ನಲ್ಲಿ ಅಶ್ಲೀಲ ವೀಡಿಯೋ ; ಬಂಧನ

ಮಹಿಳೆಯ ವಿಡಿಯೋ ಎಡಿಟ್ ಮಾಡಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. 

Man Arrested For Posting Women Video In Tik Tok

ಶಿವಮೊಗ್ಗ [ಅ.13]: ಟಿಕ್‌ಟಾಕ್‌ ನಲ್ಲಿ ನಕಲಿ ಖಾತೆ ತೆರೆದು ಮಹಿಳೆ ವೀಡಿಯೋ ಅಶ್ಲೀಲವಾಗಿ ಎಡಿಟಿಂಗ್‌ ಮಾಡಿ ಹಾಕಿದ್ದ ಆರೋಪಿಯನ್ನು ಸೈಬರ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ವ್ಯಕ್ತಿಯನ್ನು ಭದ್ರಾವತಿ ಮಲ್ಲಿಗೇನಹಳ್ಳಿ ಓಲಾ ಕ್ಯಾಬ್‌ ಡ್ರೈವರ್‌ ಜೆ. ಸಂಜಯ್‌ಕುಮಾರ್‌ ಎಂದು ಗುರುತಿಸಲಾಗಿದೆ. 

ಈತ ಅ. 2ರಂದು ಹಾಕಿದ್ದ ಮಹಿಳೆಯ ಅಶ್ಲೀಲ ವೀಡಿಯೋ ವೈರಲ್‌ ಆಗಿತ್ತು. ಈ ಸಂಬಂಧ ಇಲ್ಲಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿ ಪತ್ತೆಗಾಗಿ ಸಿಇಎನ್‌ ಪೊಲೀಸ್‌ ಠಾಣೆಯ ಕೆ.ಟಿ ಗುರುರಾಜ್‌ ನೇತೃತ್ವದಲ್ಲಿ ಪೊಲೀಸ್‌ ತಂಡ ರಚಿಸಲಾಗಿತ್ತು. ತಂಡವು ಟಿಕ್‌ಟಾಕ್‌ ಸಂಸ್ಥೆಯೊಡನೆ ಸಂಪರ್ಕ ಮಾಡಿ, ಈ ನಕಲಿ ಖಾತೆ ವಿವರ ಪಡೆದಿತ್ತು. ಬಳಿಕ ತನಿಖೆ ಇನ್ನಷ್ಟುಚುರುಕುಗೊಳಿಸಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

Latest Videos
Follow Us:
Download App:
  • android
  • ios