Asianet Suvarna News Asianet Suvarna News

ಮಲೆನಾಡ ಅಡಕೆ ಬೆಳೆಗಾರರಲ್ಲಿ ಹೆಚ್ಚಾಗುತ್ತಲೇ ಇದೆ ಆತಂಕ

ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಮತ್ತೆ ವರುಣ ಅಬ್ಬರಿಸುತ್ತಿದ್ದು, ಇದೂ ಅಡಕೆ ಬೆಳೆಗಾರರ ಆತಂಕವನ್ನು ಇಮ್ಮಡಿಗೊಳಿಸಿದೆ. 

Heavy Rain Effects On Areca in Malnad Areas
Author
Bengaluru, First Published Oct 24, 2019, 12:10 PM IST

ಶಿವಮೊಗ್ಗ (ಅ.24):  ಮಲೆನಾಡಿನಾದ್ಯಂತ ಮಳೆಯ ರಭಸ ಕಡಿಮೆಯಾಗಿದೆ. ಆದರೆ ಅಡಕೆ ಬೆಳೆಗಾರರಲ್ಲಿ ಮಾತ್ರ ಆತಂಕ ಹೆಚ್ಚಾಗುತ್ತಲೇ ಇದೆ.

ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಮಧ್ಯಾಹ್ನದ ಬಳಿಕ ಒಂದೆರಡು ಗಂಟೆ ಸ್ವಲ್ಪ ಹೆಚ್ಚೇ ಎನ್ನುವಷ್ಟುಮಳೆ ಸುರಿದಿದೆ. ಹೊಸನಗರದಲ್ಲಿ ಮಂಗಳವಾರ ರಾತ್ರಿಯಿಡೀ ಜಡಿ ಮಳೆ ಬಿದ್ದಿದೆ. ಆದರೆ ಇದರಿಂದ ಯಾವುದೇ ಅನಾಹುತ ಉಂಟಾಗಿಲ್ಲ.

ನದಿಗಳಲ್ಲಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಾಣಿಸದಿದ್ದರೂ, ಸ್ವಲ್ಪ ಮಟ್ಟಿಗೆ ತುಂಬಿ ಹರಿಯುವಂತೆ ಕಾಣುತ್ತಿದೆ. ಜಲಮೂಲಗಳಲ್ಲಿ ನೀರು ಉಕ್ಕುತ್ತಿದ್ದು, ಇದರಿಂದ ನದಿ ನೀರಿನ ಏರಿಕೆಗೂ ಕಾರಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಅಡಕೆ ಬೆಳೆಗಾರರು ಮಾತ್ರ ತೀರಾ ಆತಂಕದಲ್ಲಿದ್ದಾರೆ. ಒಂದೆಡೆ ಮಲೆನಾಡಿನ ಅನೇಕ ಭಾಗಗಳಲ್ಲಿ ದಸರಾ ಬಳಿಕ ಅಡಕೆ ಕೊಯ್ಲು ಆರಂಭವಾಗಿದ್ದು, ಮಳೆ ಅಡ್ಡಿ ತರುತ್ತಿದೆ. ಇನ್ನೊಂದೆಡೆ ಕೊಳೆ ಆತಂಕ ರೈತರನ್ನು ಇನ್ನೂ ಬಿಟ್ಟಿಲ್ಲ. ಒಂದು ಹಂತದಲ್ಲಿ ಮಳೆಗಾಗಿ ನಿತ್ಯ ಮುಗಿಲು ನೋಡುತ್ತಿದ್ದ ರೈತರು ಈಗ ಇಂದಾದರೂ ಮಳೆ ಬಿಟ್ಟೀತೇ ಎಂದು ಮುಗಿಲು ನೋಡುವಂತಾಗಿದೆ.

ರಾಜ್ಯದಲ್ಲಿ ಹಂತ ಹಂತವಾಗಿ ತಂಬಾಕು, ಗುಟ್ಕಾ ನಿಷೇಧ

ಜಲಾಶಯಗಳ ಒಳಹರಿವಿನಲ್ಲಿ ಸ್ವಲ್ಪ ಇಳಿಕೆ ಕಾಣಿಸಿದೆ. ಲಿಂಗನಮಕ್ಕಿ ಜಲಾಶಯಕ್ಕೆ 8669 ಕ್ಯು. ನೀರು ಹರಿದು ಬರುತ್ತಿದ್ದು, 13398 ಕ್ಯು. ನೀರನ್ನು ಹೊರ ಬಿಡಲಾಗುತ್ತಿದೆ. ಭದ್ರಾ ಜಲಾಶಯಕ್ಕೆ 15955 ಕ್ಯು. ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 16557 ಕ್ಯು. ನೀರು ಹೊರಬಿಡಲಾಗುತ್ತಿದೆ.

Follow Us:
Download App:
  • android
  • ios