ಶಿವಮೊಗ್ಗ, [ಏ.30]: ಟೆಂಪೋ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದಾರುಣ ಘಟನೆ ಇಂದು [ಮಂಗಳವಾರ]  ಶಿವಮೊಗ್ಗ ಜಿಲ್ಲೆಯ ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ನಡೆದಿದೆ. 

ಅಣ್ಣನ ಬರ್ತ್‌ಡೇಗೆ ಗಿಫ್ಟ್ ತರಲು ಹೋದ ತಂಗಿಯ ದುರಂತ ಸಾವು!

ತಾಯಿ ಮಂಗಳಾ(45), ಮಗ ಮಂಜುನಾಥ್(30), ಮಂಗಳಾ ಅಳಿಯ ನೀಲಕಂಠಪ್ಪ(36), ಪತ್ನಿ ಉಷಾ(32), ಮಗ ನಂದೀಶ್(7) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.ಇನ್ನು ಒಬ್ಬ ಮಗುವಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿಲಾಗಿದೆ.

 ಅಪಘಾತದಲ್ಲಿ ಸ್ವಿಫ್ಟ್​ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹಗಳು ಕಾರ್​ನೊಳಗೆ ಸಿಲುಕಿಕೊಂಡಿವೆ. ಮೃತರೆಲ್ಲರೂ ಶಿವಮೊಗ್ಗ ಮೂಲದವರು ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಕುಂಸಿ ಪೊಲೀಸರು ಬಂದಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.