ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಕಬಳಿಸಿರುವ ಶಾಸಕರ ಕುಟುಂಬದವರು ಹಾಗೂ ಅವರ ಹಿಂಬಾಲಕರ ಅಕ್ರಮ ಆಸ್ತಿಗಳನ್ನು ತಿದ್ದಿ ಸಕ್ರಮ ಮಾಡಿಕೊಳ್ಳಲು ನಿವೃತ್ತಿ ಅಂಚಿನಲ್ಲಿರುವ ಬಡ್ತಿ ಹೊಂದಿರುವ ತಹಸೀಲ್ದಾರ್ ರವರನ್ನು ಹಾಕಿಸಿಕೊಂಡು ಶಾಸಕ ಶರತ್ ಬಚ್ಚೇಗೌಡ ಅಕ್ರಮವೆಸಗುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಆರೋಪಿಸಿದರು.
Politics Aug 10, 2023, 4:24 PM IST
ಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ ಗುರಿ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಹೋಬಳಿ ನಗರೇನಹಳ್ಳಿ ಹಾಗೂ ಇ-ಮುತ್ಸಂದ್ರ ಗ್ರಾಮಗಳ ಬಳಿ 6.50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
Politics Aug 6, 2023, 6:02 PM IST
ರಾಜಧಾನಿ ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ನಗರದಕ್ಕೆ ನೀರೊದಗಿಸಲು ಯಾವುದೇ ರೀತಿಯ ನೀರಿನ ಸೆಲೆಗಳಿಲ್ಲ. ಇರುವ ಕೆರೆ ಕುಂಟೆಗಳ ಮೇಲೆ ಅವಲಂಬಿತರಾಗಿರುವ ಪರಿಣಾಮ ಕಾವೇರಿ ನೀರನ್ನು ನಗರಕ್ಕೆ ಒದಗಿಸುವ ದೃಷ್ಠಿಯಿಂದ ಸರ್ಕಾರದ ಗಮನಕ್ಕೆ ತರಲಾಗಿದ್ದು ಸಭೆ ನಡೆಸಿ, ಟಾಸ್ಕ್ ಫೋರ್ಸ್ ರಚನೆ ಮಾಡಿ ಡಿಪಿಆರ್ ಸಿದ್ದತೆ ಮಾಡಲಾಗಿದೆ. ತ್ವರಿತವಾಗಿ ನಗರಕ್ಕೆ 1 ಟಿಎಂಸಿ ನೀರು ಲಭ್ಯವಾಗಲಿದೆ ಎಂದ ಶರತ್ ಬಚ್ಚೇಗೌಡ
Karnataka Districts Jul 10, 2023, 3:30 AM IST
ರಾಜ್ಯದಲ್ಲಿದ್ದ ಭ್ರಷ್ಟಬಿಜೆಪಿ ಸರ್ಕಾರವನ್ನು ರಾಜ್ಯದ ಜನ ಕಿತ್ತೊಗೆದ್ದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಬಡವರಿಗೆ ಅಕ್ಕಿ ನೀಡದೆ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು.
Politics Jun 25, 2023, 12:10 PM IST
ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಎರಡನೆ ಬಾರಿಗೆ ನನಗೆ ಆಶೀರ್ವಾದ ಮಾಡಿ ಚುನಾವಣೆಯಲ್ಲಿ ಗೆಲ್ಲಿಸಿದ್ದು, ಮತದಾರರ ಋುಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
Politics Jun 19, 2023, 8:43 PM IST
ಪಂಚಾಯತಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುತಿದ್ದು ಪಂಚಾಯತಿಗಳಲ್ಲಿ ಖಾಲಿ ಇರುವ ಎಲ್ಲಾ ಪಿಡಿಒ ಹುದ್ದೆಗಳನ್ನು ಇನ್ನು 15 ದಿನದಲ್ಲಿ ಭರ್ತಿ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗೆ ಆದೇಶ ನೀಡಿದರು.
Politics Jun 5, 2023, 9:43 PM IST
ಕಚೇರಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಪಾರದರ್ಶಕ ಆಡಳಿತ ಮಾಡುವ ಮೂಲಕ ಕೆಲಸ ಕಾರ್ಯಗಳಿಗೆ ಬರುವ ಬಡವರಿಗೆ ತ್ವರಿತವಾಗಿ ಕೆಲಸ ಮಾಡಿಕೊಡಬೇಕು. ವಿನಾಕಾರಣ ಜನರನ್ನು ಕೆಲಸ ಮಾಡಿಕೊಡದೆ ಕಚೇರಿಗಳಿಗೆ ಅಲೆದಾಡಿಸಿದ್ರೆ ನಾನು ಸಹಿಸುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Politics May 31, 2023, 9:23 PM IST
ಸಾಮಾಜಿಕ ಕಾಳಜಿ ಹಾಗೂ ಅಭಿವೃದ್ಧಿ ಜೊತೆಯಲ್ಲಿ ಮಾಡಬೇಕಾದ ರಾಜಕಾರಣ, ಇಂದು ಸಾವಿನ ಮನೆಯಲ್ಲಿ ಮಾಡುವ ಸ್ಥಿತಿ ತಲುಪಿರುವುದು ವಿಷಾದನೀಯ ಸಂಗತಿ ಎಂದು ಶಾಸಕ ಶರತ್ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು.
Politics May 17, 2023, 11:59 PM IST
ಹೊಸಕೋಟೆ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಡಿ.ಶೆಟ್ಟಿಹಳ್ಳಿಯ ಬಿಜೆಪಿ ಕಾರ್ಯಕರ್ತನೊಬ್ಬನ ಮನೆ ಮುಂದೆ ಪಟಾಕಿ ಸಿಡಿಸಿ ಗಲಾಟೆ ಎಬ್ಬಿಸಿದ ಕಾಂಗ್ರೆಸ್ ಕಾರ್ಯಕರ್ತರು, ನಂತರ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
Politics May 15, 2023, 1:46 AM IST
ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ ಜಯಭೇರಿ ಬಾರಿಸುವುದರ ಮೂಲಕ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Politics May 14, 2023, 10:32 AM IST
ನಾನು ಟಿಕೆಟ್ ಆಕಾಂಕ್ಷಿಯಲ್ಲ ನನಗೆ ಟಿಕೆಟ್ ಬೇಡ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದವರಿಗೆ ಬಿಜೆಪಿ ಬಲವಂತವಾಗಿ ಟಿಕೆಟ್ ನೀಡಿದೆ ಎಂದು ಶಾಸಕ ಶರತ್ ಬಚ್ಚೇಗೌಡ ವ್ಯಂಗ್ಯವಾಡಿದ್ದಾರೆ.
Politics Apr 24, 2023, 12:55 PM IST
ತಾವರೆಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 5 ಕೋಟಿಗೂ ಅಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೆ ಸಂಸದ ಬಚ್ಚೇಗೌಡರು ಈ ಗ್ರಾಮಕ್ಕೆ ಎಷ್ಟುಅಭಿವೃದ್ಧಿ ಮಾಡಿದ್ದಾರೆ ಎಂದು ಜನಸಾಮಾನ್ಯರಿಗೆ ಮಾಹಿತಿ ನೀಡಲಿ ಎಂದು ಸಚಿವ ಎಂಟಿಬಿ ನಾಗರಾಜ್ ಸವಾಲ್ ಹಾಕಿದರು.
Politics Apr 17, 2023, 8:22 PM IST
ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಸಾಕಷ್ಟುಬಾರಿ ಯೋಚನೆ ಮಾಡಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿದೆ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
Politics Apr 13, 2023, 11:01 PM IST
ಬಚ್ಚೇಗೌಡ ಹಾಗೂ ಅವರ ಮಗ ಶಾಸಕ ಶರತ್ ಬಚ್ಚೇಗೌಡರ ಬದ್ಧತೆ ಇಲ್ಲದ ರಾಜಕಾರಣ. ಅವರೆಂದೂ ಚುನಾವಣೆಯಲ್ಲಿ ಸತ್ಯ ಹೇಳಿ ಗೆದ್ದಿಲ್ಲ. ಸುಳ್ಳುಗಳು ಹೆಣೆದುಕೊಂಡೆ ಬದುಕಿದವರು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದರು.
Politics Mar 12, 2023, 12:57 PM IST
ಚುನಾವಣೆ ಸಂಧರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡರು ಕ್ಷೇತ್ರದಲ್ಲಿ ಮತದಾರರ ಅನುಕಂಪ ಗಿಟ್ಟಿಸಲು ಅನುದಾನದ ನೆಪದಲ್ಲಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಾಟಕ ಮಾಡುತ್ತಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
Politics Mar 4, 2023, 9:01 PM IST