ಕಾಂಗ್ರೆಸ್‌ನ ನಿಜಾಮಾಬಾದ್‌ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸಂಜೀವ್‌ ರೆಡ್ಡಿ ತಮ್ಮ ಪ್ರಚಾರದ ವೇಳೆ ವೃದ್ಧೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ಹೈದರಾಬಾದ್‌ (ಮೇ.4): ತೆಲಂಗಾಣದ ಹಿರಿಯ ಕಾಂಗ್ರೆಸ್‌ ನಾಯಕ ಟಿ. ಜೀವನ್‌ ರೆಡ್ಡಿ ಅವರ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಜೀವನ್‌ ರೆಡ್ಡಿ ಅಜ್ಜಿಯೊಬ್ಬರಿಗೆ ಕಪಾಳ ಮೋಕ್ಷ ಮಾಡುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶಕ್ಕೆ ತುತ್ತಾಗಿದ್ದಾರೆ. ತಮ್ಮ ಚುನಾವಣಾ ಪ್ರಚಾರದ ವೇಳೆ ಮಾಜಿ ಸಚಿವ ಟಿ.ಜೀವನ್‌ ರೆಡ್ಡಿ ವೃದ್ದೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಮೇ 13 ರಂದು ನಡದ ಘಟನೆಯ ವಿಡಿಯೋ ಇದಾಗಿದೆ. ಅರ್ಮೂರ್‌ ವಿಧಾಸಭಾ ಕ್ಷೇತ್ರದ ಗ್ರಾಮವೊಂದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇತರ ಮುಖಂಡರ ಜೊತೆ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮುಂದಿನ ಚುನಾವಣೆಯಲ್ಲಿ ಯಾವುದಕ್ಕೆ ಮತ ಹಾಕ್ತೀಯ ಎಂದು ವೃದ್ಧೆಗೆ ಪ್ರಶ್ನೆ ಮಾಡಿದಾಗ ಆಕೆ, ಹೂವಿಗೆ ಮತ ಹಾಕುತ್ತೇನೆ ಎಂದು ಉತ್ತರ ನೀಡಿದ್ದಾರೆ. ಇದೇ ವೇಳೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕ ಮಹಿಳೆಗೆ ಕಾಂಗ್ರೆಸ್‌ ನಾಯಕ ಕಪಾಳಮೋಕ್ಷ ಮಾಡಿದ್ದಾನೆ.

ಇತ್ತೀಚೆಗಡೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದೆ. ಹಾಗಿದ್ದರೂ ನನಗೆ ಪಿಂಚಣಿ ಸರಿಯಾಗಿ ಸಿಗುತ್ತಿಲ್ಲ ಎಂದು ಮಹಿಳೆ ಆಕ್ರೋಸ ವ್ಯಕ್ತಪಡಿಸಿದ್ದಾಳೆ. ಕಾಂಗ್ರೆಸ್ ಅಭ್ಯರ್ಥಿ ಪಿ.ವಿನಯ್ ಕುಮಾರ್ ರೆಡ್ಡಿ ವಿಧಾನಸಭೆ ಚುನಾವಣೆಯಲ್ಲಿ ಆರ್ಮೂರ್ ನಿಂದ ಸೋತಿದ್ದರು. ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ಮೂರ್ ಕೂಡ ಒಂದು. ಕಾಂಗ್ರೆಸ್ ಪಕ್ಷ ಜೀವನ್ ರೆಡ್ಡಿ ಅವರನ್ನು ಹಾಲಿ ಸಂಸದ ಬಿಜೆಪಿಯ ಡಿ. ಅರವಿಂದ್ ವಿರುದ್ಧ ಕಣಕ್ಕಿಳಿಸಿದೆ.

ನಿಜಾಮಾಬಾದ್ ಲೋಕಸಭಾ ಕ್ಷೇತ್ರ ಸೇರಿದಂತೆ ತೆಲಂಗಾಣದ ಎಲ್ಲಾ 17 ಲೋಕಸಭಾ ಸ್ಥಾನಗಳಿಗೆ ಮೇ 13 ರಂದು ಲೋಕಸಭೆಯ ನಾಲ್ಕನೇ ಹಂತದ ಮತದಾನದಲ್ಲಿ ಮತದಾನ ನಡೆಯಲಿದೆ; ಫಲಿತಾಂಶವನ್ನು ಜೂನ್ 4 ರಂದು ಪ್ರಕಟಿಸಲಾಗುವುದು. 2014ರ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಈ ಸ್ಥಾನವನ್ನು ಗೆದ್ದಿತ್ತು.

ಸಂಯುಕ್ತಾ ಪಿಎಂ ಆದ್ರೆ ರಾಹುಲ್, ಪ್ರಿಯಾಂಕಾ, ಸೋನಿಯಾ ಗಾಂಧಿ ಇವರ ಮನೆಯ ಕೆಲಸಕ್ಕೆ ಬರಬೇಕಾ?: ಯತ್ನಾಳ್‌

ಟಿಆರ್‌ಎಸ್ ಅಭ್ಯರ್ಥಿ ಕಲ್ವಕುಂಟ್ಲ ಕವಿತಾ ಶೇ.42.5ರಷ್ಟು ಮತ ಗಳಿಸಿ ಗೆಲುವು ಸಾಧಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಧರ್ಮಪುರಿ ಅರವಿಂದ್‌ ಗೆದ್ದಿದ್ದರು. ಅವರು ಶೇಕಡಾ 45.22 ರಷ್ಟು ಮತಗಳನ್ನು ಗಳಿಸಿದರು, ಟಿಆರ್‌ಎಸ್ ಅಭ್ಯರ್ಥಿ ಕಲ್ವಕುಂಟ್ಲ ಕವಿತಾ ಅವರನ್ನು ಸೋಲಿಸಿದರು, ಅವರು ಶೇಕಡಾ 38.6 ರಷ್ಟು ಮತಗಳನ್ನು ಪಡೆದರು.

ಸೂರತ್, ಇಂದೋರ್ ಬಳಿಕ ಪುರಿಯಲ್ಲೂ ಕಾಂಗ್ರೆಸ್‌ಗೆ ಕೈ ಕೊಟ್ಟ ಅಭ್ಯರ್ಥಿ

Scroll to load tweet…