ಮತದಾರರ ಋುಣ ತೀರಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಶರತ್‌ ಬಚ್ಚೇಗೌಡ

ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಎರಡನೆ ಬಾರಿಗೆ ನನಗೆ ಆಶೀರ್ವಾದ ಮಾಡಿ ಚುನಾವಣೆಯಲ್ಲಿ ಗೆಲ್ಲಿಸಿದ್ದು, ಮತದಾರರ ಋುಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

Sincere effort to pay voter debt Says MLA Sharath Bachegowda gvd

ಹೊಸಕೋಟೆ (ಜೂ.19): ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಎರಡನೆ ಬಾರಿಗೆ ನನಗೆ ಆಶೀರ್ವಾದ ಮಾಡಿ ಚುನಾವಣೆಯಲ್ಲಿ ಗೆಲ್ಲಿಸಿದ್ದು, ಮತದಾರರ ಋುಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ನಗರದಲ್ಲಿ ಮಾದಿಗ ಸಮುದಾಯದ ಯುವ ಪಡೆಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಚಿಂತನೆ ನಡೆಸಿದ್ದು, ಪ್ರತಿಯೊಬ್ಬ ಅಧಿ​ಕಾರಿಗಳ, ನಾಗರಿಕರ ಸಹಕಾರ ಅಗತ್ಯ. ಮತದಾರರು ವಿಶ್ವಾಸವಿಟ್ಟು ನನ್ನನ್ನು ಅ​ಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಪ್ರಮುಖವಾಗಿ ನಮ್ಮ ಕಾರ್ಯಕರ್ತರು ಧರ್ಮಾತೀತವಾಗಿ ದುಡಿದು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಅವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪಾರದರ್ಶಕ ಆಡಳಿತ ನನ್ನ ಕನಸಾಗಿದ್ದು ಮುಂದಿನ 5 ವರ್ಷಗಳಲ್ಲಿ ಅದನ್ನು ನನಸಾಗಿಸುತ್ತೇನೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಯೇ ಪ್ರತಿಷ್ಠಾನದ ಗುರಿ: ಮಕ್ಕಳ ಕಲಿಕೆಗೆ ಅಗತ್ಯ ಸಲಕರಣೆಗಳ ವಿತ​ರ​ಣೆ

ಮಾತಂಗ ಫೌಂಡೇಷನ್‌ ಉಪಾಧ್ಯಕ್ಷ ಡಾ.ಎಚ್‌.ಎಂ.ಸುಬ್ಬರಾಜ್‌ ಮಾತನಾಡಿ, ಮಾದಿಗ ಯುವ ಪಡೆ ಶರತ್‌ ಬಚ್ಚೇಗೌಡರ ಗೆಲುವಿಗಾಗಿ ತಾಲೂಕಿನ ಪ್ರತಿ ಹಳ್ಳಿಗೂ ತೆರಳಿ ಕಾಂಗ್ರೆಸ್‌ ಪಕ್ಷ ಹಾಗೂ ಶರತ್‌ ಬಚ್ಚೇಗೌಡರ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದೆವು. ದಲಿತ ಕಾಲೋನಿಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವ ಮಾತನ್ನು ನೀಡಿ ಪಕ್ಷ ಸಂಘಟನೆ ಮಾಡಿ ಗೆಲುವಿಗೆ ಸಹಕಾರ ನೀಡಿದ್ದೆವು. ಸಂಘಟನೆ ಪರಿಣಾಮ ಶರತ್‌ರು ಎರಡನೇ ಭಾರಿಗೆ ಗೆಲುವು ಸಾಧಿಸಿದರು ಎಂದು ಹೇಳಿದರು.

ಬೇಡಿಕೆ ಕಳೆ​ದು​ಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದ​ಲಾದ ನಿಯ​ಮ​ದಿಂದಾಗಿ ಸೀಟು ಕೇಳು​ವ​ವರೇ ಇಲ್ಲ!

ಕಂಬಳೀಪುರ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್‌, ಮಾದಿಗ ಯುವ ಪಡೆಯ ಕಾರ್ಯಕರ್ತರಾದ ಡಿ.ಎಂ.ಮುನಿರಾಜು, ಶೆಟ್ಟಿಹಳ್ಳಿ ಯಲ್ಲಪ್ಪ, ಮುನಿಯಪ್ಪ, ಸೂಪರ್‌ ನಾರಾಯಣಸ್ವಾಮಿ, ಗುರಪ್ಪ, ಗುಟ್ಟಹಳ್ಳಿ ನಾಗರಾಜ್‌, ಗಿಡ್ಡಪ್ಪನಹಳ್ಳಿ ದೇವರಾಜ್‌, ಇಂಜನಹಳ್ಳಿ ಲಕ್ಷ್ಮೇ ನಾರಾಯಣ, ಹರೀಶ್‌ ಚಕ್ರವರ್ತಿ, ತವಟಹಳ್ಳಿ ಮುನಿಯಪ್ಪ, ಹಲಸಿನಕಾಯಿಪುರ ಗುರುರಾಜ್‌, ವಳಗೆರೆಪುರ ಸುರೇಶ್‌, ಮಲ್ಲಿಮಾಕನಪುರ ರಮೇಶ್‌, ಸೊಣ್ಣದೇನಹಳ್ಳಿ ಶ್ರೀನಿವಾಸ್‌, ಸಿದ್ದಾರ್ಥನಗರ ನರಸಿಂಹಯ್ಯ ಹಾಗೂ ಮುನಿರಾಜು, ಗುಟ್ಟಹಳ್ಳಿ ವಿ.ಸಿ.ಸ್ವಾಮಿ, ಮುನಿರಾಜು, ಗುಳ್ಳಹಳ್ಳಿ ಮೂರ್ತಿ, ದಂಡುಪಾಳ್ಯ ಅರುಣ್‌, ಮುಗಬಾಳ ಕಾರ್ತಿಕ್‌, ಗಡಿಗೇನಹಳ್ಳಿ ಸಹದೇವ, ನಾಗರಾಜು, ಪೂಜೇನ ಅಗ್ರಹಾರ ಸುರೇಶ್‌, ರಮೇಶ್‌, ನಲ್ಲಾಳ ಅಶ್ವಥ್‌, ಹುಲ್ಲೂರು ಅರವಿಂದ್‌, ಸುನೀಲ್‌ ಗಂಗಾಧರ್‌, ಸಾಗರ್‌, ಅಟ್ಟೂರು ನಾಗರಾಜ್‌ ಹಾಜರಿದ್ದರು.

Latest Videos
Follow Us:
Download App:
  • android
  • ios