ಎಂಟಿಬಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ: ಶಾಸಕ ಶರತ್ ಬಚ್ಚೇಗೌಡ
ಸಾಮಾಜಿಕ ಕಾಳಜಿ ಹಾಗೂ ಅಭಿವೃದ್ಧಿ ಜೊತೆಯಲ್ಲಿ ಮಾಡಬೇಕಾದ ರಾಜಕಾರಣ, ಇಂದು ಸಾವಿನ ಮನೆಯಲ್ಲಿ ಮಾಡುವ ಸ್ಥಿತಿ ತಲುಪಿರುವುದು ವಿಷಾದನೀಯ ಸಂಗತಿ ಎಂದು ಶಾಸಕ ಶರತ್ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು.
ಸೂಲಿಬೆಲೆ (ಮೇ.17): ಸಾಮಾಜಿಕ ಕಾಳಜಿ ಹಾಗೂ ಅಭಿವೃದ್ಧಿ ಜೊತೆಯಲ್ಲಿ ಮಾಡಬೇಕಾದ ರಾಜಕಾರಣ, ಇಂದು ಸಾವಿನ ಮನೆಯಲ್ಲಿ ಮಾಡುವ ಸ್ಥಿತಿ ತಲುಪಿರುವುದು ವಿಷಾದನೀಯ ಸಂಗತಿ ಎಂದು ಶಾಸಕ ಶರತ್ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು. ಬೆಂಡಿಗಾನಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ಮತ್ತು ಮತ ಎಣಿಕೆ ಎರಡು ಶಾಂತಿಯುತವಾಗಿ ನಡೆದಿದ್ದು, ಸೋಲಿನಿಂದ ಹತಾಶರಾಗಿರುವ ಮಾಜಿ ಸಚಿವರು ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದು ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಮೇ 13 ಮತ ಎಣಿಕೆಯಂದು ನಂದುಗುಡಿ ಹೋಬಳಿಯ ಡಿ.ಶೆಟ್ಟಿಹಳ್ಳಿಯಲ್ಲಿ ನಡೆದ ಕುಟುಂಬ ಕಲಹವನ್ನು ರಾಜಕೀಯ ಪ್ರೇರಿತವಾಗಿ ಬಿಂಬಿಸಲು ಹೊರಟಿರುವುದು ಖಂಡನೀಯ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮುಗಿದಾಗ ಸಂಜೆ 4 ಗಂಟೆಯಾಗಿತ್ತು. ಮತ ಎಣಿಕೆ ಪ್ರಕ್ರಿಯೆ ಮುಗಿಸಿ ನಾನು ಹೊರಬಂದಾಗ 5 ಗಂಟೆಯಾಗಿತ್ತು. ಈ ಗಲಾಟೆ ನಡೆದಿರುವುದು ಮಧ್ಯಾಹ್ನ 1.30ರಲ್ಲಿ. ಡಿ.ಶೆಟ್ಟಿಹಳ್ಳಿ ಗಲಾಟೆಗೂ ನನಗೂ ಯಾವುದೇ ಸಂಬಂಧವಿಲ್ಲದಿದ್ದರು ನನ್ನ ಹೆಸರು ಬಳಿಸಿಕೊಂಡು ನನ್ನ ತೇಜೋವಧೆ ಮಾಡಲು ಹೊರಟಿದ್ದು ಇದಕ್ಕೆ ಕಾನೂನು ಹೋರಾಟದ ಮೂಲಕ ಉತ್ತರ ನೀಡುತ್ತೇನೆ. ಮಾನನಷ್ಟಮೊಕದ್ದಮೆ ದಾಖಲಿಸುತ್ತೇನೆ ಎಂದು ಪ್ರಕರಣದ ಎಫ್‌ಐಆರ್ ಕಾಪಿ ಹಾಗೂ ಮಾಧ್ಯಮದ ಸುದ್ದಿ ತುಣಕುಗಳನ್ನು ಪ್ರದರ್ಶಿಸಿದರು.
ಕಾಂಗ್ರೆಸ್‌ನ ಸತ್ಯಕ್ಕೆ ದೊರೆತ ಜಯ: ಯು.ಟಿ.ಖಾದರ್
ರಾಷ್ಟ್ರೀಯ ಪಕ್ಷವೊಂದು ತತ್ವ ಸಿದ್ಧಾಂತಗಳ ಮಹತ್ವ ತಿಳಿಯದ ವ್ಯಕ್ತಿಯನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಅವರು ಹೇಳಿದಂತೆ ಕೇಳಿ 2ನೇ ಬಾರಿ ಸೋತರೂ ಪಕ್ಷಕ್ಕೆ ಈ ವ್ಯಕ್ತಿಯ ವ್ಯಕ್ತಿತ್ವದ ಅರಿವಾಗದಿರುವುದು ಬೇಸರದ ಸಂಗತಿ. ಹೊಸಕೋಟೆಯ ಘಟನೆಯನ್ನು ಬಿಜೆಪಿ ಪಕ್ಷ ತನ್ನ ಸೋಷಿಯಲ್ ಮಿಡಿಯಾದಲ್ಲಿ ಕಾಂಗ್ರೆಸ್ ಹಾಗೂ ನನ್ನ ಹೆಸರಿಗೆ ಕಪ್ಪು ಮಸಿ ಬಳಿಯುವ ದುರುದ್ದೇಶದಿಂದ ಕೆಲಸ ಮಾಡುತ್ತಿದೆ. ಬಿಜೆಪಿ ಪಕ್ಷ ಹೊಸಕೋಟೆ ಕ್ಷೇತ್ರವನ್ನು ಕೆಟ್ಟದಾಗಿ ಬಿಂಬಿಸಲು ಹೋರಟಿದೆ ಎಂದು ವಿಷಾದಿಸಿದರು.
ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಫ್‌ಐಆರ್ ಪ್ರತಿಯಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ರಾಜಕೀಯ ಗಲಾಟೆ ಎಂದು ನಮೂದಿಸಿಲ್ಲ. ಕುಟುಂಬದ ಕಲಹಗಳಿಂದ ನಡೆದ ಮಾತಿನ ಚಕಮುಕಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿ ಮೃತ ವ್ಯಕ್ತಿಗೆ ಸಂತಾಪ ಸೂಚಿಸಿದರು. ಕೆಪಿಸಿಸಿ ವಕ್ತಾರ ಇಟ್ಟಸಂದ್ರ ಗೋಪಾಲ್, ತಾ.ಪಂ.ವಿರೋಧಪಕ್ಷದ ಮಾಜಿ ನಾಯಕ ಡಾ.ಡಿ.ಟಿ.ವೆಂಕಟೇಶ್, ಗ್ರಾ.ಪಂ.ಉಪಾಧ್ಯಕ್ಷ ಶಶಿಮಾಕನಹಳ್ಳಿ ಮುನಿರಾಜು,ರಿಷಿಕುಲ್ ದೇವರಾಜ್ ಇತರರು ಇದ್ದರು.
ಹುಲಿಗೆಮ್ಮ ಜಾತ್ರೆಗೆ ಬರುತ್ತಿದೆ ಭಕ್ತಸಾಗರ: ಸಹಸ್ರಾರು ಪ್ರಾಣಿಬಲಿ ಅವ್ಯಾಹತ
ಶೀಘ್ರದಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸಿದ್ದನಿದ್ದೇನೆ. ಎಲ್ಲದಕ್ಕೂ ಮಿಗಿಲಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.
-ಶರತ್ ಬಚ್ಚೇಗೌಡರು, ಶಾಸಕರು