ಸಂಯುಕ್ತಾ ಪಿಎಂ ಆದ್ರೆ ರಾಹುಲ್, ಪ್ರಿಯಾಂಕಾ, ಸೋನಿಯಾ ಗಾಂಧಿ ಇವರ ಮನೆಯ ಕೆಲಸಕ್ಕೆ ಬರಬೇಕಾ?: ಯತ್ನಾಳ್
ವಿಜಯಪುರ ನಗರ ಕ್ಷೇತ್ರದಲ್ಲಿ ಮುಸ್ಲಿಮರ ಮತಗಳೇ ಬೇಡ ಎಂದು ಹೇಳಿದ್ದೇನೆ. ಸಮುದಾಯದವರು ಈಗ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುತ್ತಿದ್ದಾರೆ. ವಿಜಯಪುರ ನಗರದಲ್ಲಿ ಜಾತಿಯ ಮೇಲೆ ಚುನಾವಣೆ ಆಗಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುರುಗೇಶ್ ನಿರಾಣಿ, ಸತೀಶ್ ಜಾರಕಿಹೊಳಿ ಹಾಗೂ ಬೆಂಗಳೂರಿನ ಜನರು ಹಣ ಹಂಚಿ ನನ್ನ ಸೋಲಿಸಲು ಪ್ರಯತ್ನ ಮಾಡಿದರು. ಆದರೂ 2018 ಕ್ಕಿಂತ ಹೆಚ್ಚು ಮತಗಳನ್ನು ಪಡೆದೆ: ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ(ಮೇ.04): ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ ಹಾಕಬೇಕು. ನಿನ್ನೆ ಬಾಗಲಕೋಟೆಯ ಹತ್ತಾರು ಕಡೆಗಳಲ್ಲಿ ಪ್ರಚಾರ ಮಾಡಿದ್ದೇನೆ. ಇಂದಿನ ಚುನಾವಣೆ ದೇಶದ ಚುನಾವಣೆಯಾಗಿದೆ. ಮುಂದಿನ ಐದು ವರ್ಷ ಭಾರತದ ಭವಿಷ್ಯವನ್ನು ಯಾರ ಕೈಲಿ ಕೊಡಬೇಕೆಂಬ ಚುನಾವಣೆಯಾಗೊದೆ ಹೀಗಾಗಿನ ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿ ಮಾಡಬೇಕಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಾಗಠಾಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭರ್ಜರಿ ಪ್ರಚಾರ ಮಾಡಿದ್ದಾರೆ. ನಾಗಠಾಣ ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಜನರನ್ನ ಉದ್ದೇಶಿಸಿ ಮಾತನಾಡಿದ ಯತ್ನಾಳ್, ಕಳೆದ ಹತ್ತು ವರ್ಷದ ಭಾರತ ಹೇಗೆ ಅಭಿವೃದ್ಧಿಯಾಗಿದೆ. ಇದು ನಯಾ ಭಾರತ್ ನರೇಂದ್ರ ಮೋದಿ ಭಾರತ, ವಿದೇಶಗಳಲ್ಲಿ ಮೋದಿಗೆ ಬಹಳ ಗೌರವಿದೆ. ಆ ಗೌರವ ಹೆಚ್ಚಿಸಿದವರು ಮೋದಿ. ಗುಜರಾತ್‌ನಲ್ಲಿ 14 ವರ್ಷ ಸಿಎಂ ಆಗಿದ್ದರು, 10 ವರ್ಷ ಪಿಎಂ ಆಗಿದ್ದಾರೆ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ A To Z ಹಗರಣ ಆಗಿವೆ. ಮೋದಿ ಹೆಸರಲ್ಲಿ ವೋಟ್ ಬೇಡುತ್ತೀರಿ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಆದರೆ ನೀವು ಯಾರ ಹೆಸರು ಹೇಳುತ್ತೀರಿ? ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಿಂದ ಪಕ್ಷಕ್ಕೆ ಮುಜುಗರ: ಅರವಿಂದ ಲಿಂಬಾವಳಿ
ಘರ್ ಮೆ ಘುಸ್ ಕೆಮಾರೇಂಗೆ ಎಂದು ಮೋದಿ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹೇಗಾಗಿದೆ. ನಮ್ಮ ಸೈನಿಕರನ್ನು ಹೊಡೆದರೆ ಎದುರಾಳಿಗಳ ಅದಕ್ಕೆ ಪ್ರತಿಯಾಗಿ 24 ಗಂಟೆಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದರು. 800 ರಿಂದ 900 ಪಾಕಿಸ್ತಾನದ ಸೈನಿಕರು ಹತರಾದರು. ಪಾಕಿಸ್ತಾನದ ಸೈನಿಕರ ಸಾವಿನ ಬಗ್ಗೆ ಕಾಂಗ್ರೆಸ್ ಹಾಗೂ ವಿರೋಧಿಗಳು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿದರು. ಇದನ್ನು ಕಾಂಗ್ರೆಸ್ ಒಪ್ಪಲಿಲ್ಲ. ಇದನ್ನು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದೆ. ಘೋಷಣೆ ಕೂಗಿದವರು ನಮಕ್ ಹರಾಮಿಗಳು, ತಾಯಿ ಗಂಡ ಮಕ್ಕಳು ಎಂದೆ. ರಾಯರೆಡ್ಡಿ ನನ್ನ ಮಾತಿಗೆ ವಿರೋಧ ಮಾಡಿದರು. ಅದಕ್ಕೆ ರಾಯರೆಡ್ಡಿಗೆ ಮಾತಿನಿಂದ ಕುಟುಕಿದೆ. ಸಭಾದ್ಯಕ್ಷ ಖಾದರ್ ನನಗೆ ಮಾತನಾಡಲು ಅನುಮತಿ ನೀಡಿದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಸ್ಲಿಂಮರದ್ದೇ ರಾಜ್ಯವಾದಂತಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣ ಪ್ರಸ್ತಾಪ ಮಾಡಿದ ಯತ್ನಾಳ್, ರಾಜ್ಯದಲ್ಲಿ ಇಂಥ ಪರಿಸ್ಥಿತಿ ಬಂದಿದೆ. ಯಾದಗಿರಿಯಲ್ಲಿ ದಲಿತ ಯುವಕನನ್ನು ಮುಸ್ಲಿಂ ಯುವಕನ ಕೊಲೆ ಮಾಡಿದ ಘಟನೆ ನಡೆದಿದೆ. ಅಲ್ಲಿ ಸಿದ್ದರಾಮಯ್ಯ, ಖರ್ಗೆ ಗೃಹ ಸಚಿವರು ಹೋಗಿಲ್ಲ, ಅದೇ ಮುಸ್ಲಿಂಮರಿಗೆ ಆಗಿದ್ದರೆ ರಾಹುಲ್ ಗಾಂಧಿ ಪ್ರಿಯಾಂಕಾ ಸಿದ್ದರಾಮಯ್ಯ ಡಿಕೆಶಿ ಬ್ರದರ್ಸ್ ಎಂದು ಬರುತ್ತಿದ್ದರು. ನೇಹಾ ಕೊಲೆ ವೈಯಕ್ತಿಕ ಎಂದು ಸಿಎಂ ಹೇಳಿದರು. ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹತ್ಯೆಯೂ ವೈಯುಕ್ತಿಕ ಎನ್ನುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಬರ ಮತ ಕಾಂಗ್ರೆಸ್‌ಗೆ ಬೇಕು. ಇದು ಸಾಬರ ಸರ್ಕಾರವಾಗಿದೆ. ಮೋದಿ ಮೂರನೇ ಬಾರಿಗೆ ಪಿಎಂ ಆದರೆ ಚೆಂಬು ಹಿಡಿದುಕೊಂಡು ಓಡಿ ಹೋಗಬಹುದು ಎಂದು ಚೊಂಬು ಹಿಡಿದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಯತ್ನಾಳ್ ಹರಿಹಾಯ್ದಿದ್ದಾರೆ.
ಕೊರೊನಾ ವೇಳೆ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದ ಸಿದ್ದರಾಮಯ್ಯ, ಡಿಕೆಶಿ ಜನರಿಗೆ ಹೇಳಿದ್ದರು. ಆದರೆ ತಾವೇ ಮೊದಲು ಲಸಿಕೆ ಹಾಕಿಸಿಕೊಂಡರು. ಮೋದಿಗೆ ಕೆಟ್ಟ ಹೆಸರು ತರಲು ಲಸಿಕೆ ಹಾಕಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ನವರು ಹೇಳಿದ್ದರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ನೂರು ರೂಪಾಯಿಯಲ್ಲಿ ಜನರಿಗೆ ಮೂರು ರೂಪಾಯಿ ಸಿಗುತ್ತದೆ ಎಂದಿದ್ದರು. ಬೊಮ್ಮಾಯಿ ಸರ್ಕಾರದಲ್ಲಿ ಜಾರಿಗೆ ಬಂದಿದ್ದ ವಿದ್ಯಾನಿಧಿ ಬಂದ್ ಆಯ್ತು. ಬರೀ ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದ್ದಾರೆ. ಹತ್ತು ಕೆಜಿ ಅಕ್ಕಿ ಎಂದು ಸಿದ್ದರಾಮಯ್ಯ ಹೇಳಿದರು. ಐದು ಕೆಜಿ ಅಕ್ಕಿನೂ ಕೊಡುತ್ತಿಲ್ಲ. ಉಚಿತ ವಿದ್ಯುತ್ ಎಂದು ದರ ಏರಿಕೆ ಮಾಡಿದರು. ಮಹಿಳೆಯರಿಗೆ ಉಚಿತ ಬಸ್ ಎಂದು ಇತರೆ ಸೇವೆಗಳ ಶುಲ್ಕ ಹಾಗೂ ಬೆಲೆ ಏರಿಕೆ ಮಾಡಿದರು. ಪುರುಷರಿಂದ ಕಿತ್ತು ಮಹಿಳೆಯರಿಗೆ ಕೊಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಬೀಳುತ್ತದೆ. ಡಿಕೆಶಿ ಹಾಗೂ ಶಿವಾನಂದ ಪಾಟೀಲ್ ಸೇರಿ ಸಿಎಂ ಸ್ಥಾನದಿಂದ ಇಳಿಸುತ್ತಾರೆ. ಒಕ್ಕಲಿಗರು ಲಿಂಗಾಯತರು ಒಂದಾಗೋಣ ಎಂದು ಇಬ್ಬರೂ ಕೂಡಿ ಸಿದ್ದರಾಮಯ್ಯರನ್ನು ಕೆಳಗಿಳಿಸುತ್ತಾರೆ ಎಂದು ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಒಕ್ಕಲಿಗರ ಮುಂದೆ ನಾನು ಸಿಎಂ ಆಗುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಎಲ್ಲಾ ಮುಟ್ಟಿಸಿದ್ದೇನೆ. ನಾನು ಸಿಎಂ ಆಗುತ್ತೇನೆ ಹಾಗಾಗಿ ಡಿಕೆ ಸುರೇಶ್‌ಗೆ ಮತ ಹಾಕಿ ಎಂದು ಹೇಳಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ಶಿವಾನಂದ ಪಾಟೀಲ್ ವಿರುದ್ಧ ಯತ್ನಾಳ್ ವಾಗ್ದಾಳಿ
ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ್ ಪುತ್ರಿ ಬಾಗಲಕೋಟೆ ಲೋಕಸಭಾ ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಹೇಳಿದ್ದಾರೆ. ತಾನು ಪಿಎಂ ಆಗುತ್ತೇನೆಂದು ಹೇಳಿದ್ದಾಳೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಇವರ ಮನೆಯ ಕೆಲಸಕ್ಕೆ ಬರಬೇಕಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ರೈತರು ಐದು ಲಕ್ಷ ಪರಿಹಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಶಿವಾನಂದ ಪಾಟೀಲ್ ಹೇಳಿದ್ದಾರೆ. ಬರಗಾಲ ಬಯಸುತ್ತಾರೆ ರೈತರು ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ. ಶಿವಾನಂದ ಪಾಟೀಲ್ ಗೆ ಐದು ಕೋಟಿ ಕೊಡುತ್ತೇನೆ ಬೇವಿನಮರಕ್ಕೆ ನೇಣು ಹಾಕಿಕೋ ಎಂದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಆಸ್ತಿ ಎರಡು ಕೋಟಿ ಮೂವತ್ತು ಲಕ್ಷ ಮೌಲ್ಯದ ಆಸ್ತಿಯಿದೆ. ಮೋದಿ ಅವರ ತಾಯಿ ಮೃತಪಟ್ಟಾಗ ಹೆಗಲು ಕೊಟ್ಟು ಅಂತ್ಯ ಸಂಸ್ಕಾರ ಮಾಡಿ ದೇಶದ ಕೆಲಸಕ್ಕೆ ಬಂದರು. ಕೋತ್ವಾಲ್ ರಾಮಚಂದ್ರನ ಶಿಷ್ಯ ಡಿಕೆ, ಚಹಾ ತಂದು ಕೊಡುತ್ತಿದ್ದವ ಡಿಕೆಶಿ, ಈಗ ಡಿಕೆ ಸಹೋದರರ ಆಸ್ತಿ 2000 ಕೋಟಿ ಆಸ್ತಿ ಇದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅಗ್ನಿಪಥ ಯೋಜನೆ ಮಾಡಿದ್ದಾರೆ. ಸಂಬಳದ ಜೊತೆಗೆ ನಾಲ್ಕು ವರ್ಷದ ಬಳಿಕ ಹಣವನ್ನು ಕೊಡುತ್ತಾರೆ. ಹಳ್ಳಿ ಹಳ್ಳಿಗಳಲ್ಲಿ ನೀಚರು ಹುಟ್ಟುತ್ತಾರೆಂದು ಮೋದಿ ಗ್ರಾಮಗಳಲ್ಲಿ ಯೋಧ ಇರಬೇಕು ಎಂದು ಅಗ್ನಿಪಥ ಯೋಜನೆ ಜಾರಿ ಮಾಡಿದ್ದಾರೆ. ದೇಶದಲ್ಲಿ ಮೊದಲ ಹಕ್ಕು ಮುಸ್ಲಿಂಮರಿಗೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. ನಮಗ ಹಕ್ಕು ಇಲ್ಲವಾ ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ಎಲ್ಲ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ಹಾಕೋದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದಲ್ಲಿ 65 ಕೋಟಿ ಮಹಿಳೆಯರಿದ್ದಾರೆ. 65,000 ಕೋಟಿ ರೂಪಾಯಿ ಕೊಡಬೇಕು. ನಮ್ಮ ಬಜೆಟ್ ಎಷ್ಟಿದೆ ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಸೋಲಬೇಕು: ಸಚಿವ ರಾಮಲಿಂಗಾರೆಡ್ಡಿ
ಮೋದಿ 3ನೇ ಬಾರಿ ಪ್ರಧಾನಿಯಾಗುವುದು ಸೂರ್ಯ ಚಂದ್ರರಷ್ಟೇ ಸತ್ಯ
ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವುದು ಸೂರ್ಯ ಚಂದ್ರರಷ್ಟೇ ಸತ್ಯ. ಅಭಿ ಟ್ರೇಲರ್ ಎಂದು ಮೋದಿ ಹೇಳಿದ್ದಾರೆ. ಪಿಚ್ಚರ್ ಬಾಕಿ ಹೈ ಹೊಂದಿದ್ದಾರೆ. ಒಂದೇ ಮದುವೆಯಾಗಬೇಕು ಎರಡೇ ಮಕ್ಕಳನ್ನು ಹೆರಬೇಕು. ಎರಡ್ಮೂರು ಮದುವೆಯಾಗಿ ಹತ್ತಾರು ಮಕ್ಕಳು ಹೆರೋದು ಬಂದ್ ಆಗಲಿದೆ. ದೇಶ ಉಳಿದರೆ ಎಲ್ಲರೂ ಉಳಿಯುತ್ತೇವೆ. ಜಾತಿಯ ಚುನಾವಣೆ ಅಲ್ಲಾ, ಮೋದಿ ದೇಶ ರಕ್ಷಣೆ ಮಾಡುತ್ತಿದ್ದಾರೆ. ನಮ್ಮ ಮಕ್ಕಳು ನಮ್ಮ ಮನೆ ನಮ್ಮ ದೇಶ ಸುರಕ್ಷಿತವಾಗಿರಬೇಕು ಅದಕ್ಕಾಗಿ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನೇಹಾ ಹಿರೇಮಠ ಕೊಲೆ ಪ್ರಕರಣ ಆಕಸ್ಮಿಕ ಎಂದು ಸಚಿವ ಶಿವಾನಂದ್ ಪಾಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ನಿಮ್ಮ ಮಗಳಿಗೆ ಹೀಗೆ ಆಗಿದ್ದರೆ ಆಕಸ್ಮಿಕ ಎಂದು ಹೇಳುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ನಗರ ಕ್ಷೇತ್ರದಲ್ಲಿ ಮುಸ್ಲಿಮರ ಮತಗಳೇ ಬೇಡ ಎಂದು ಹೇಳಿದ್ದೇನೆ. ಸಮುದಾಯದವರು ಈಗ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುತ್ತಿದ್ದಾರೆ. ವಿಜಯಪುರ ನಗರದಲ್ಲಿ ಜಾತಿಯ ಮೇಲೆ ಚುನಾವಣೆ ಆಗಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುರುಗೇಶ್ ನಿರಾಣಿ, ಸತೀಶ್ ಜಾರಕಿಹೊಳಿ ಹಾಗೂ ಬೆಂಗಳೂರಿನ ಜನರು ಹಣ ಹಂಚಿ ನನ್ನ ಸೋಲಿಸಲು ಪ್ರಯತ್ನ ಮಾಡಿದರು. ಆದರೂ 2018 ಕ್ಕಿಂತ ಹೆಚ್ಚು ಮತಗಳನ್ನು ಪಡೆದೆ. ಅಯೋಧ್ಯೆ ರಾಮಮಂದಿರ, ಕಾಶಿ ವಿಶ್ವನಾಥ ಮಂದಿರ ನೆನಪು ಮಾಡಿಕೊಂಡು ಮತ ಹಾಕಿ. ಮೇ. 7 ರಂದು ನಡೆಯುವ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ, ಬಿಜೆಪಿ ಪರ ಮತದಾನ ಮಾಡಬೇಕೆಂದು ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿಕೊಂಡಿದ್ದಾರೆ.