ಇತ್ತೀಚೆಗಷ್ಟೇ ಮುಕ್ತಾಯವಾದ 2024ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಖ್ವೆಟ್ಟಾ ಗ್ಲಾಡಿಯೇಟರ್ಸ್‌ ಪರ 9 ಪಂದ್ಯಗಳನ್ನಾಡಿ 8.41ರ ಎಕಾನಮಿಯಲ್ಲಿ 10 ವಿಕೆಟ್ ಕಬಳಿಸಿದ್ದರು. ಇನ್ನು ಮೊಹಮದ್ ಅಮೀರ್‌ ನಿವೃತ್ತಿ ವಾಪಾಸ್ ಪಡೆದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಇಮಾದ್ ವಾಸೀಂ ನಿವೃತ್ತಿ ವಾಪಾಸ್ ಪಡೆದಿದ್ದಾರೆ. 

ಕರಾಚಿ(ಮಾ.25): ಪಾಕಿಸ್ತಾನದ ವಿವಾದಿತ ಎಡಗೈ ವೇಗಿ ಮೊಹಮದ್‌ ಅಮೀರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಘೋಷಿಸಿದ್ದ ನಿವೃತ್ತಿ ಹಿಂಪಡೆದಿದ್ದು, ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಮ್ಯಾಚ್‌ ಫಿಕ್ಸಿಂಗ್ ಪ್ರಕರಣದಲ್ಲಿ 2010ರಿಂದ 2015ರ ವರೆಗೆ ನಿಷೇಧಕ್ಕೊಳಗಾಗಿ, ಬಳಿಕ ಕೆಲ ಕಾಲ ಜೈಲು ಸೇರಿದ್ದ ಅಮೀರ್‌ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ ವಿವಿಧ ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದರು. 32ರ ಅಮೀರ್‌ ಪಾಕ್‌ ಪರ 36 ಟೆಸ್ಟ್‌, 61 ಏಕದಿನ, 50 ಟಿ20 ಪಂದ್ಯಗಳನ್ನಾಡಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ 2024ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಖ್ವೆಟ್ಟಾ ಗ್ಲಾಡಿಯೇಟರ್ಸ್‌ ಪರ 9 ಪಂದ್ಯಗಳನ್ನಾಡಿ 8.41ರ ಎಕಾನಮಿಯಲ್ಲಿ 10 ವಿಕೆಟ್ ಕಬಳಿಸಿದ್ದರು. ಇನ್ನು ಮೊಹಮದ್ ಅಮೀರ್‌ ನಿವೃತ್ತಿ ವಾಪಾಸ್ ಪಡೆದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಇಮಾದ್ ವಾಸೀಂ ನಿವೃತ್ತಿ ವಾಪಾಸ್ ಪಡೆದಿದ್ದಾರೆ.

Scroll to load tweet…

ಈಗಾಗಲೇ ಪಾಕಿಸ್ತಾನ ತಂಡದಲ್ಲಿ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ, ನಸೀಂ ಶಾ ಅವರಂತಹ ಮಾರಕ ವೇಗಿಗಳಿದ್ದಾರೆ. ಇವರ ಜತೆಗೆ ಮೊಹಮದ್ ಅಮೀರ್ ಕೂಡಾ ಸೇರ್ಪಡೆಯಾದರೆ, ಪಾಕ್ ವೇಗದ ಬೌಲಿಂಗ್ ಪಡೆ ಮತ್ತಷ್ಟು ಬಲಾಢ್ಯವಾಗುವುದರಲ್ಲಿ ಅನುಮಾನವೇ ಇಲ್ಲ.

ರಣಜಿ ಪಂದ್ಯದ ಸಂಭಾವನೆ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ

ನವದೆಹಲಿ: ಐಪಿಎಲ್‌ನ ಭರಾಟೆ ನಡುವೆ ದೇಸಿ ಕ್ರಿಕೆಟ್‌ನತ್ತ ಆಟಗಾರರನ್ನು ಆಕರ್ಷಿಸಲು ಬಿಸಿಸಿಐ ಹೊಸ ಯೋಜನೆ ರೂಪಿಸಿದೆ. ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ನ ಸಂಭಾವನೆ ಹೆಚ್ಚಿಸಿದ್ದ ಮಂಡಳಿಯು ರಣಜಿ ಟ್ರೋಫಿ ಸಂಭಾವನೆಯನ್ನೂ ಏರಿಸಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ. 

IPL 2024 ಗುಜರಾತ್ ಟೈಟಾನ್ಸ್ ಎದುರು ಮುಂಬೈ ಇಂಡಿಯನ್ಸ್‌ಗೆ ಮೊದಲ ಸೋಲಿನ ಶಾಕ್‌!

ಸದ್ಯ ರಣಜಿ ಪಂದ್ಯ ಆಡುವ ಆಟಗಾರನಿಗೆ ಪ್ರತಿ ದಿನಕ್ಕೆ ₹40,000 ರಿಂದ ₹60,000 ಇರುವ ಸಂಭಾವನೆ ಸಿಗುತ್ತಿದೆ. ಅಂದರೆ ಆಟಗಾರ ಆವೃತ್ತಿಯಲ್ಲಿ ಗುಂಪು ಹಂತದಲ್ಲಿ 7 ಪಂದ್ಯಗಳನ್ನಾಡಿದರೆ ಅಂದಾಜು ₹11 ಲಕ್ಷ ಸಂಭಾವನೆ ಲಭಿಸಲಿದೆ. ಆದರೆ ಈ ಮೊತ್ತವನ್ನು ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.

ಅನುಚಿತ ವರ್ತನೆ: ವೇಗಿ ರಾಣಾಗೆ ಭಾರಿ ದಂಡ!

ಕೋಲ್ಕತಾ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ವೇಗಿ ಹರ್ಷಿತ್‌ ರಾಣಾಗೆ ಐಪಿಎಲ್‌ ಆಡಳಿತ ಮಂಡಳಿ ಪಂದ್ಯದ ಸಂಭಾವನೆಯ ಶೇ.60ರಷ್ಟು ದಂಡ ವಿಧಿಸಿದೆ. ಪಂದ್ಯದಲ್ಲಿ 2 ಬಾರಿ ಹರ್ಷಿತ್‌ ನಿಯಮ ಉಲ್ಲಂಘಿಸಿದ್ದಾಗಿ ಅಂಪೈರ್‌ಗಳು ರೆಫ್ರಿಗೆ ದೂರಿದ ಕಾರಣ, ದೊಡ್ಡ ಪ್ರಮಾಣದ ದಂಡ ಹಾಕಲಾಗಿದೆ. ಮಯಾಂಕ್‌ರ ವಿಕೆಟ್‌ ಪಡೆದಾಗ ಹರ್ಷಿತ್‌ ಅನುಚಿತವಾಗಿ ವರ್ತಿಸಿದ್ದರು.