ICC Test Rankings: ಟಾಪ್‌-10ಗೆ ಲಗ್ಗೆ ಇಟ್ಟ ಯಶಸ್ವಿ ಜೈಸ್ವಾಲ್‌

ಕಳೆದ ವರ್ಷ ಜುಲೈನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ ಪಾದಾರ್ಪಣೆ ಮಾಡಿದ್ದ ಜೈಸ್ವಾಲ್‌ ಕೇವಲ 9 ತಿಂಗಳಲ್ಲೇ ಟಾಪ್‌-10ಗೆ ಕಾಲಿಟ್ಟಿದ್ದಾರೆ. ಅವರು ಈ ವರೆಗೆ ಕೇವಲ 8 ಪಂದ್ಯಗಳನ್ನಾಡಿದ್ದಾರೆ.

Team India Cricketer Yashasvi Jaiswal dashes into top 10 of ICC Test rankings kvn

ದುಬೈ: ಭಾರತದ ಯುವ, ತಾರಾ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಇದೇ ಮೊದಲ ಬಾರಿ ಅಗ್ರ-10ಕ್ಕೆ ಕಾಲಿಟ್ಟಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಆರ್ಭಟಿಸುತ್ತಿರುವ 22ರ ಜೈಸ್ವಾಲ್‌ ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 2 ಸ್ಥಾನ ಜಿಗಿತ ಕಂಡಿದ್ದು, 727 ರೇಟಿಂಗ್‌ ಅಂಕದೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ ಪಾದಾರ್ಪಣೆ ಮಾಡಿದ್ದ ಜೈಸ್ವಾಲ್‌ ಕೇವಲ 9 ತಿಂಗಳಲ್ಲೇ ಟಾಪ್‌-10ಗೆ ಕಾಲಿಟ್ಟಿದ್ದಾರೆ. ಅವರು ಈ ವರೆಗೆ ಕೇವಲ 8 ಪಂದ್ಯಗಳನ್ನಾಡಿದ್ದಾರೆ.

ಇದೇ ವೇಳೆ ಇಂಗ್ಲೆಂಡ್‌ ಸರಣಿಗೆ ಗೈರಾದ ಹೊರತಾಗಿಯೂ ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ 1 ಸ್ಥಾನ ಮೇಲೇರಿ 8ನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ 11, ರಿಷಭ್‌ ಪಂತ್‌ 14ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ ನಂ.1 ಸ್ಥಾನದಲ್ಲೇ ಮುಂದುವರಿದಿದ್ದು, ಅಶ್ವಿನ್‌ 2ನೇ ಸ್ತಾನದಲ್ಲಿದ್ದಾರೆ.

ಅಶ್ವಿನ್‌ ತಾಯಿ ಕುಸಿದು ಬಿದ್ದಾಗ ಪೂಜಾರಗೆ ಕರೆ ಮಾಡಿದ್ದ ಅಶ್ವಿನ್‌ ಪತ್ನಿ

ಚೆನ್ನೈ: ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ವೇಳೆ ತಮ್ಮ ತಾಯಿಯ ಅನಾರೋಗ್ಯ ಕಾರಣಕ್ಕೆ ಭಾರತದ ಸ್ಪಿನ್ನರ್‌ ಆರ್‌.ಅಶ್ವಿನ್‌ ತಂಡ ತೊರೆದು ತಾಯಿಯನ್ನು ನೋಡಲು ತೆರಳಿದ್ದರು. ಅಂದಿನ ಘಟನೆಯನ್ನು ಅಶ್ವಿನ್‌ ಪತ್ನಿ ಪ್ರೀತಿ ತೆರೆದಿಟ್ಟಿದ್ದು, ‘ಅಶ್ವಿನ್‌ರ ತಾಯಿ ಕುಸಿದು ಬಿದ್ದಾಗ ಮೊದಲು ಚೇತೇಶ್ವರ ಪೂಜಾರಗೆ ಕರೆ ಮಾಡಿದ್ದೆ ಎಂದಿದ್ದಾರೆ.

Dharamsala Test: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಕನ್ನಡಿಗ ಟೆಸ್ಟ್‌ಗೆ ಪಾದಾರ್ಪಣೆ..!

‘ರಾಜ್‌ಕೋಟ್‌ನಿಂದ ಚೆನ್ನೈಗೆ ಉತ್ತಮ ವಿಮಾನ ಸಂಪರ್ಕವಿಲ್ಲ. ಹೀಗಾಗಿ ಅಶ್ವಿನ್‌ಗೆ ಮಾಹಿತಿ ನೀಡಿರಲಿಲ್ಲ. ಪೂಜಾರ ಮತ್ತು ಕುಟುಂಬಸ್ಥರು ನಮಗೆ ಸಹಾಯ ಮಾಡಿದರು. ಬಳಿಕ ಅಶ್ವಿನ್‌ಗೆ ವಿಷಯ ತಿಳಿಸಿದೆವು’ ಎಂದಿದ್ದಾರೆ. ಇನ್ನು ಘಟನೆ ಬಗ್ಗೆ ಮಾತನಾಡಿರುವ ಅಶ್ವಿನ್‌, ‘ನಾನು ಆಸ್ಪತ್ರೆಗೆ ಬಂದಾಗ ನನ್ನ ತಾಯಿ ಮೊದಲು ಕೇಳಿದ್ದು ನೀನು ಯಾಕೆ ಬಂದೆ ಎಂದಾಗಿತ್ತು. ಕೂಡಲೇ ಹೋಗಿ ಟೆಸ್ಟ್‌ ಆಡು ಎಂದಿದ್ದರು’ ಎಂದು ತಿಳಿಸಿದ್ದಾರೆ.

ಸಿ.ಕೆ.ನಾಯ್ಡು ಟ್ರೋಫಿ: ರಾಜ್ಯಕ್ಕೆ ಫೈನಲ್‌ನಲ್ಲಿ ಯುಪಿ ಎದುರಾಳಿ

ಕಾನ್ಪುರ: ಸಿ.ಕೆ.ನಾಯ್ಡು ಅಂಡರ್‌-23 ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶದ ಸವಾಲು ಎದುರಾಗಲಿದೆ. ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಮುಂಬೈ ವಿರುದ್ಧ ಮೇಲುಗೈ ಸಾಧಿಸಿ ಫೈನಲ್‌ ಪ್ರವೇಶಿಸಿತು. ಪಂದ್ಯದ ಮೊದಲೆರಡು ದಿನ ಮಳೆಗೆ ಬಲಿಯಾದ ಬಳಿಕ ಉ.ಪ್ರದೇಶ ಮೊದಲ ಇನ್ನಿಂಗ್ಸಲ್ಲಿ 381 ರನ್‌ ಕಲೆಹಾಕಿತು. ಇದಕ್ಕುತ್ತರಾಗಿ ಮುಂಬೈ ಮೊದಲ ಇನ್ನಿಂಗ್ಸಲ್ಲಿ 203 ರನ್‌ಗೆ ಆಲೌಟ್‌ ಆಯಿತು. ಮಾ.10ರಿಂದ ಫೈನಲ್‌ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಚಿನ್ ತೆಂಡೂಲ್ಕರ್ ವಿಕೆಟ್ ಕಬಳಿಸಿದ ಬಿಗ್‌ಬಾಸ್ ವಿನ್ನರ್ ಮುನಾವರ್, ಕ್ರೀಡಾಂಗಣ ಸ್ತಬ್ಧ!

ಆರ್‌ಸಿಬಿಗೆ 3ನೇ ಸೋಲು

ನವದೆಹಲಿ: 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಆರ್‌ಸಿಬಿ 3ನೇ ಸೋಲು ಕಂಡಿದೆ. ಬುಧವಾರ ಸ್ಮೃತಿ ಮಂಧನಾ ನಾಯಕತ್ವದ ಬೆಂಗಳೂರು ತಂಡಕ್ಕೆ ಗುಜರಾತ್‌ ಜೈಂಟ್ಸ್‌ ವಿರುದ್ಧ 19 ರನ್‌ ಸೋಲು ಎದುರಾಯಿತು. ಸತತ 4 ಪಂದ್ಯ ಸೋತಿದ್ದ ಗುಜರಾತ್‌ ಕೊನೆಗೂ ಮೊದಲ ಗೆಲುವಿನ ಸಿಹಿ ಅನುಭವಿಸಿತು. ಆರ್‌ಸಿಬಿ 6 ಪಂದ್ಯಗಳನ್ನಾಡಿದ್ದು, ಇನ್ನೆರಡು ಪಂದ್ಯ ಬಾಕಿ ಇದೆ.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 5 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಬರೋಬ್ಬರಿ 199 ರನ್‌. ಮೊದಲ ವಿಕೆಟ್‌ಗೆ ನಾಯಕಿ ಬೆಥ್‌ ಮೂನಿ ಹಾಗೂ ಲಾರಾ ವೊಲ್ವಾರ್ಟ್‌ 13 ಓವರಲ್ಲಿ 140 ರನ್‌ ಜೊತೆಯಾಟವಾಡಿದರು. ವೊಲ್ವಾರ್ಟ್‌ 45 ಎಸೆತಗಳಲ್ಲಿ 76 ರನ್‌ ಸಿಡಿಸಿದರೆ, ಮೂನಿ 51 ಎಸೆತಗಳಲ್ಲಿ ಔಟಾಗದೆ 85 ರನ್‌ ಚಚ್ಚಿದರು.

ಬೃಹತ್‌ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರಲ್ಲಿ 00 ವಿಕೆಟ್‌ ಕಳೆದುಕೊಂಡು 000 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಜಾರ್ಜಿಯಾ ವೇರ್‌ಹ್ಯಾಮ್‌(22 ಎಸೆತದಲ್ಲಿ 48), ರಿಚಾ ಘೋಷ್‌(30) ಕೊನೆಯಲ್ಲಿ ಹೋರಾಡಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.

ಸ್ಕೋರ್‌: 

ಗುಜರಾತ್‌ 199/5 (ಮೂನಿ 85, ವೊಲ್ವಾರ್ಟ್‌ 76, ಮಾಲಿನ್ಯುಕ್ಷ್‌ 1-32), 

ಆರ್‌ಸಿಬಿ 180/8 (ವೇರ್‌ಹ್ಯಾಮ್‌ 48, ರಿಚಾ 30, ಗಾರ್ಡ್ನರ್‌ 2-23)
 

Latest Videos
Follow Us:
Download App:
  • android
  • ios