ಕೊರೋನಾ ಯುದ್ಧ ಸಮಯದಲ್ಲಿ ಬಿಹಾರದ ಚುನಾವಣೆ ಇದ್ದರೆ, ಯುದ್ಧ ಬಹುತೇಕ ಮುಗಿದ ನಂತರ ನಡೆಯುವ ಮೊದಲ ಚುನಾವಣೆ 2021ರಲ್ಲಿ ಪಶ್ಚಿಮ ಬಂಗಾಳದ ಮಮತಾ ದೀದಿಯದ್ದು. ಹೀಗಾಗಿ ಕೊರೋನಾ ಬಗ್ಗೆ ಮೋದಿ ಜೊತೆ ಕಾದಾಟದಲ್ಲಿ ಮಾತ್ರ ಕಾಣಿಸಿಕೊಳ್ಳುವ ದೀದಿ ಉಳಿದಂತೆ ಕೊರೋನಾ ಜೊತೆಗಿನ ಸೆಣಸಾಟವನ್ನು ಮಂತ್ರಿ ಪಾರ್ಥ ಚಟರ್ಜಿಗೆ ವಹಿಸಿದ್ದಾರೆ.
India May 15, 2020, 3:50 PM IST
ಜಾಗತೀಕರಣದ ಗ್ಲೋಬಲ್ ರಾಗ ಅಲಾಪಿಸುತ್ತಿದ್ದ ಫಲಾನುಭವಿಗಳೆಲ್ಲ ಈಗ ದೇಸಿ ರಾಗ ನುಡಿಸುತ್ತಿದ್ದಾರೆ. ಸ್ವಯಮೇವ ಅಮೆರಿಕವೂ ಮುಕ್ತ ಮಾರುಕಟ್ಟೆಬೇಡ ಎಂದು ಆರ್ಥಿಕ ಗೋಡೆ ಕಟ್ಟುವ ಬಗ್ಗೆ ಮಾತನಾಡತೊಡಗಿದೆ. ಹೀಗಾಗಿ ಭಾರತಕ್ಕೆ ಇದು ಅನಿವಾರ್ಯ ಮತ್ತು ಅವಕಾಶ ಕೂಡ ಹೌದು.
India May 15, 2020, 1:03 PM IST
ಮಂಗಳವಾರ ರಾತ್ರಿ ದೇಶದ ಜನರನ್ನು ಉದ್ದೇಶಿಸಿ ಮೋದಿ ಸಾಹೇಬರು ಮಾತನಾಡಲು ಬಂದಾಗ ಯಾಕೋ ದಣಿದಂತೆ ಕಾಣುತ್ತಿದ್ದರು. ಹಗಲು ರಾತ್ರಿ ಕೆಲಸ ಮಾಡುತ್ತಿರುವ ಆಯಾಸ ಹಾಗೂ ಕೊರೋನಾ ಒಡ್ಡುತ್ತಿರುವ ಸವಾಲಿನ ಚಿಂತೆಯ ಜೊತೆಗೆ ದೇಶದ 130 ಕೋಟಿ ಜನರನ್ನು ಈ ವಿಪತ್ತಿನ ಕಾಲದಲ್ಲಿ ಸುರಕ್ಷಿತವಾಗಿರಿಸುವುದು ಹೇಗೆಂಬ ಯೋಚನೆ ಅವರಲ್ಲಿ ಮಡುಗಟ್ಟಿದಂತಿತ್ತು.
India May 15, 2020, 12:36 PM IST
ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದ ಭಾರತೀಯರನ್ನು ವಾಪಸ್ ಕರೆದುಕೊಂಡು ಬರುವ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ. ಬೆಂಗಳೂರಲ್ಲಿ ಇಳಿದ ಮೇಲೆ 14 ದಿನ ಕಡ್ಡಾಯ ಕ್ವಾರಂಟೈನ್ನಲ್ಲಿದ್ದು ತಮ್ಮ ಊರಿಗೆ ಮರಳಬೇಕು. ಎಲ್ಲರಿಗೂ ಸರ್ಕಾರದಿಂದಲೇ ಹೋಟೆಲ್ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡುವುದಾಗಿ ರಾಜ್ಯದಿಂದ ಕೇಂದ್ರಕ್ಕೆ ಒಪ್ಪಿಗೆ ಪತ್ರ ಕೊಡಲಾಗಿದೆ.
India May 8, 2020, 6:41 PM IST
ದಿಲ್ಲಿ ಪತ್ರಕರ್ತರಲ್ಲಿ ಅತ್ಯಂತ ಹೆಚ್ಚು ಸಕ್ರಿಯರಾಗಿರುವ ತೆಲುಗು ಟೀವಿ ಚಾನಲ್ವೊಂದರ ಪತ್ರಕರ್ತನಿಗೆ ಕೊರೋನಾ ಸೋಂಕು ತಾಕಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರದವರೆಗೂ ಬಹುತೇಕ ಮಂತ್ರಿಗಳ ಮನೆಗೆ ಎಡತಾಕುತ್ತಾ ಬೈಟ್ ತೆಗೆದುಕೊಳ್ಳುತ್ತಿದ್ದ ಪತ್ರಕರ್ತ ಆಸ್ಪತ್ರೆ ಸೇರಿರುವುದರಿಂದ ದಕ್ಷಿಣ ಭಾರತ ಮೂಲದ ಅನೇಕ ಪತ್ರಕರ್ತರಿಗೆ ದಿಗಿಲು ಶುರುವಾಗಿದೆ.
India May 8, 2020, 5:23 PM IST
ಕೊರೋನಾ ಸಂಕಷ್ಟದಲ್ಲಿ ಪುನರ್ ದರ್ಶನ ಕೊಡುತ್ತಿರುವ ರಾಹುಲ್ ಗಾಂಧಿ, ಸಂಕಷ್ಟದಲ್ಲಿ ಜನರೊಂದಿಗೆ ನೇರ ಸಂವಾದ ನಡೆಸಿ, ಕಾರ್ಯಕರ್ತರು ನಾಯಕರೊಂದಿಗೆ ಸಹಾಯ ಮಾಡುವುದನ್ನು ಬಿಟ್ಟು, ಪರಿಣತರೊಂದಿಗೆ ಇಂಟರ್ವ್ಯೂ ಶುರುಮಾಡಿದ್ದಾರೆ.
India May 8, 2020, 5:08 PM IST
ಕೇಂದ್ರ ಸಚಿವ ನಿತಿನ್ ಗಡ್ಕರಿ ಲಾಕ್ಡೌನ್ ಸಂದರ್ಭದಲ್ಲಿ ಅವರ ಊರಾದ ನಾಗ್ಪುರದಲ್ಲಿ ಠಿಕಾಣಿ ಹೂಡಿದ್ದಾರೆ. ಈ ವಿರಾಮದಲ್ಲಿ ಪಂಚಕರ್ಮಿ ಚಿಕಿತ್ಸೆ ಪಡೆಯುತ್ತಿದ್ದಾರೆ.
India May 8, 2020, 12:48 PM IST
40 ದಿನಗಳ ಲಾಕ್ಡೌನ್ನಲ್ಲಿ ಅತ್ಯಂತ ಹೆಚ್ಚು ಪೇಚಾಡಿದ್ದು 10 ಕೋಟಿಗೂ ಜಾಸ್ತಿ ಇರುವ ವಲಸೆ ಕಾರ್ಮಿಕರು. ಅವರ ಬಗ್ಗೆ ಯೋಚಿಸದೆ ದಿಢೀರನೆ ನೋಟು ರದ್ದತಿಯ ತರಹ ಲಾಕ್ಡೌನ್ ಘೋಷಿಸಿದ ಕೇಂದ್ರ ಸರ್ಕಾರಕ್ಕೆ, ಸಾವಿರಾರು ಕಾರ್ಮಿಕರು ನಡೆದುಕೊಂಡು ಊರಿಗೆ ಹೊರಟಾಗಲೇ ಸಮಸ್ಯೆಯ ಅರಿವಾಗಿದ್ದು.
state May 8, 2020, 11:57 AM IST
ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ಕೊಡಲು ಗೃಹ ಸಚಿವ ಅಮಿತ್ ಶಾ ಅವರಿಗೆ ಮನಸ್ಸಿರಲಿಲ್ಲ. ಪ್ರಧಾನಿ ಮತ್ತು ಅಧಿಕಾರಿಗಳ ಜೊತೆಗಿನ ಸಭೆಗಳಲ್ಲೂ ಅಮಿತ್ ಶಾ ಖಂಡತುಂಡವಾಗಿ ಮದ್ಯ ಮಾರಾಟ ಬೇಡ ಎಂದು ವಾದಿಸಿದ್ದರಂತೆ.
India May 8, 2020, 10:34 AM IST
ಆರೋಗ್ಯ ಇಲಾಖೆ ಕಾರ್ಯಾಲಯಕ್ಕೆ ಬಂದ ಸರ್ಕಾರಿ ಫೈಲ್ ಒಂದು ಮಧ್ಯಪ್ರದೇಶದಲ್ಲಿ ಅವಾಂತರ ಸೃಷ್ಟಿಸಿದ್ದು, ಪ್ರಿನ್ಸಿಪಲ್ ಸೆಕ್ರೆಟರಿಯಿಂದ ಹಿಡಿದು ಪ್ಯೂನ್ವರೆಗೆ 100ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಕೊರೋನಾ ನಿಯಂತ್ರಿಸುವ ಜವಾಬ್ದಾರಿ ಹೊತ್ತ ಅಧಿಕಾರಿಗಳೇ ಅಸ್ಪತ್ರೆಯಲ್ಲಿದ್ದಾರೆ.
India May 1, 2020, 2:51 PM IST
ಕೊರೋನಾ ಸಂಕಷ್ಟಮುಗಿದ ನಂತರ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಲಿದ್ದಾರಂತೆ. ಸೋನಿಯಾ, ಪ್ರಿಯಾಂಕಾ ಎದುರು ರಾಹುಲ್ ಪಕ್ಷ ನಡೆಸುವ ಪೂರ್ತಿ ಜವಾಬ್ದಾರಿ ಮತ್ತು ಸ್ವಾತಂತ್ರ್ಯ ಕೊಟ್ಟರೆ ಮರಳಿ ಅಧ್ಯಕ್ಷನಾಗಲು ಬಹುತೇಕ ಓಕೆ ಅಂದಿದ್ದಾರೆ ಎಂಬ ಸುದ್ದಿ ಟೆನ್ಜನ್ ಪಥದಿಂದ ಬರುತ್ತಿದೆ.
India May 1, 2020, 2:35 PM IST
ಉದ್ಧವ್ ಠಾಕ್ರೆ ಕೊರೋನಾ ಸಮಯದಲ್ಲಿ ತಾಂತ್ರಿಕ ಆಟದಲ್ಲಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಏನಕೇನ ಉದ್ಧವ್ ಠಾಕ್ರೆ ಮೇ 28ರೊಳಗೆ ವಿಧಾನ ಪರಿಷತ್ ಸದಸ್ಯರಾಗದೇ ಹೋದರೆ ಚೀಫ್ ಮಿನಿಸ್ಟರ್ ಆಗಿ ಮುಂದುವರೆಯುವುದು ಅಸಾಧ್ಯ. ಉದ್ಧವ್ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ಠಾಕ್ರೆಯನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿ ಎಂದು ಶಿಫಾರಸ್ಸು ಮಾಡಿದರೂ ರಾಜ್ಯಪಾಲ ಭಗತ್ ಕೊಶಿಯಾರಿ ‘ಇದು ಸಾಧ್ಯವಿಲ್ಲ’ ಎಂದಿದ್ದಾರೆ.
India May 1, 2020, 2:09 PM IST
ಮೇ 3 ಕ್ಕೆ ಎರಡನೇ ಹಂತದ ಲಾಕ್ಡೌನ್ ಏನೋ ಮುಗಿಯುತ್ತಿದೆ. ಆದರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಬಹುತೇಕ ಮೋದಿ ಸಾಹೇಬರಿಗೆ ಮಾತ್ರ ಗೊತ್ತು. ಕೊರೋನಾ ದಿಂದ ಜೀವ ಉಳಿಸುವುದು ಮುಖ್ಯ ಎಂದು ವೈದ್ಯರು ಸರ್ಕಾರಕ್ಕೆ ಹೇಳುತ್ತಿದ್ದರೆ, ವೈರಸ್ ಬಂದರೆ ಬರಲಿ ಜೀವನ ನಿಲ್ಲಿಸಿ ಮನೆಯಲ್ಲಿ ಕೂತರೆ ಎಲ್ಲ ಮುಗಿದೇ ಹೋದೀತು ಎಂದು ಉದ್ಯಮಿಗಳು ಸರ್ಕಾರಕ್ಕೆ ಕಿವಿ ಊದುತ್ತಿದ್ದಾರೆ.
state May 1, 2020, 1:54 PM IST
ಕೊರೋನಾ ವೈರಸ್ಅನ್ನು ಪ್ರಾಣಿಯಿಂದ ಮನುಷ್ಯನಿಗೆ ಹರಡಿಸಿ ಜಗತ್ತನ್ನು ಕಂಗಾಲಾಗಿಸಿದರೂ ಚೀನಾ ಅಟಾಟೋಪ ಮಾತ್ರ ತಣ್ಣಗಾಗಿಲ್ಲ. ಕೊರೋನಾ ಕೊಟ್ಟಿದ್ದಕ್ಕೆ ಅಮೆರಿಕದ ಕಟುಟೀಕೆಗೆ ಪ್ರತಿಯಾಗಿ ಚೀನಾ ಅಮೆರಿಕಾದ ಮಿತ್ರ ಆಸ್ಪ್ರೇಲಿಯಾಕ್ಕೆ ಆರ್ಥಿಕ ದಿಗ್ಬಂಧನದ ಧಮಕಿ ಹಾಕಿದೆ.
India May 1, 2020, 12:11 PM IST
ಶರದ್ ಪವಾರ್ ಅವರ ಮಾನಸ ಪುತ್ರ ಎನ್ನಿಸಿಕೊಳ್ಳುವ ಮಹಾರಾಷ್ಟ್ರದ ಕ್ಯಾಬಿನೆಟ್ ಮಂತ್ರಿ ಜಿತೇಂದ್ರ ಆಹ್ವಾಡ್ ತನ್ನ ಉಡಾಫೆ ಮತ್ತು ಬೇಜವಾಬ್ದಾರಿತನದಿಂದ ಸುದ್ದಿಯಲ್ಲಿದ್ದಾರೆ. ಸ್ಪೇನ್ನಿಂದ ಬಂದ ಜಿತೇಂದ್ರ ಪುತ್ರಿ ಥಾಣೆ ನಿವಾಸಕ್ಕೆ ಬಂದ ನಂತರ ಮಂತ್ರಿಯ 14 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.
India Apr 24, 2020, 5:31 PM IST