Asianet Suvarna News Asianet Suvarna News

ಅನಿವಾಸಿ ಕನ್ನಡಿಗರ ಬಗ್ಗೆ ಸಚಿವರ ಕಾಳಜಿ

ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದ ಭಾರತೀಯರನ್ನು ವಾಪಸ್‌ ಕರೆದುಕೊಂಡು ಬರುವ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ. ಬೆಂಗಳೂರಲ್ಲಿ ಇಳಿದ ಮೇಲೆ 14 ದಿನ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದು ತಮ್ಮ ಊರಿಗೆ ಮರಳಬೇಕು. ಎಲ್ಲರಿಗೂ ಸರ್ಕಾರದಿಂದಲೇ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡುವುದಾಗಿ ರಾಜ್ಯದಿಂದ ಕೇಂದ್ರಕ್ಕೆ ಒಪ್ಪಿಗೆ ಪತ್ರ ಕೊಡಲಾಗಿದೆ.

NRIs look to return to safe haven  India amid global COVID 19
Author
Bengaluru, First Published May 8, 2020, 6:41 PM IST
  • Facebook
  • Twitter
  • Whatsapp

ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದ ಭಾರತೀಯರನ್ನು ವಾಪಸ್‌ ಕರೆದುಕೊಂಡು ಬರುವ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ. ಆದರೂ ದುಬೈನಲ್ಲಿರುವ 1900 ಕನ್ನಡಿಗರಿಗೆ ಬೆಂಗಳೂರು ಅಥವಾ ಮಂಗಳೂರಿಗೆ ಬರಲು ವಿಮಾನ ನಿಗದಿ ಆಗಿರಲಿಲ್ಲ.

ಆದರೆ ಕೇಂದ್ರ ಸಚಿವ ಸದಾನಂದಗೌಡರು ಎರಡು ದಿನ ಪ್ರಧಾನಿ ಕಾರ್ಯಾಲಯ ಮತ್ತು ವಿದೇಶಾಂಗ ಸಚಿವ ಜೈಶಂಕರ್‌ ಬಳಿ ಓಡಾಡಿ ಮುಂದಿನ ವಾರದಿಂದ ದುಬೈ-ಮಂಗಳೂರು, ದುಬೈ-ಬೆಂಗಳೂರು ವಿಮಾನ ಹಾರುವ ವ್ಯವಸ್ಥೆ ಮಾಡಿಸಿದ್ದಾರೆ. ಅಷ್ಟೇ ಅಲ್ಲ, ದಿಲ್ಲಿ ಆಸುಪಾಸು ಸಿಕ್ಕಿ ಹಾಕಿಕೊಂಡಿರುವ 700 ಕನ್ನಡಿಗರಿಗೆ ದಿಲ್ಲಿ- ಬೆಂಗಳೂರು ಟ್ರೈನ್‌ ಶುರುಮಾಡಲು ಕನ್ನಡದ 3 ಕೇಂದ್ರ ಸಚಿವರು ಪೀಯೂಷ್‌ ಗೋಯಲ್‌ಗೆ ಬೆನ್ನು ಹತ್ತಿದ್ದರಿಂದ ಇನ್ನು ನಾಲ್ಕು ದಿನದಲ್ಲಿ ದಿಲ್ಲಿಯಿಂದ ನೇರ ಟ್ರೈನ್‌ ಬೆಂಗಳೂರಿಗೆ ಬರಲಿದೆ.

ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ವಲಸೆ; ಕೃಷಿಗೆ ಸಿಕ್ತಾರೆ ಜನ...!

ಆದರೆ ಸಮಸ್ಯೆ ಎಂದರೆ ಟ್ರೈನ್‌ ಮಧ್ಯೆ ಎಲ್ಲಿಯೂ ನಿಲ್ಲೋದಿಲ್ಲ. ಬೆಂಗಳೂರಲ್ಲಿ ಇಳಿದ ಮೇಲೆ 14 ದಿನ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದು ತಮ್ಮ ಊರಿಗೆ ಮರಳಬೇಕು. ಎಲ್ಲರಿಗೂ ಸರ್ಕಾರದಿಂದಲೇ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡುವುದಾಗಿ ರಾಜ್ಯದಿಂದ ಕೇಂದ್ರಕ್ಕೆ ಒಪ್ಪಿಗೆ ಪತ್ರ ಕೊಡಲಾಗಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios