Asianet Suvarna News Asianet Suvarna News

ಬೇಜವಾಬ್ದಾರಿಯಿಂದ ಕೊರೋನಾ ಹರಡಲು ಕಾರಣವಾದ 'ಮಹಾ'ಮಂತ್ರಿ

ಶರದ್‌ ಪವಾರ್‌ ಅವರ ಮಾನಸ ಪುತ್ರ ಎನ್ನಿಸಿಕೊಳ್ಳುವ ಮಹಾರಾಷ್ಟ್ರದ ಕ್ಯಾಬಿನೆಟ್‌ ಮಂತ್ರಿ ಜಿತೇಂದ್ರ ಆಹ್ವಾಡ್‌ ತನ್ನ ಉಡಾಫೆ ಮತ್ತು ಬೇಜವಾಬ್ದಾರಿತನದಿಂದ ಸುದ್ದಿಯಲ್ಲಿದ್ದಾರೆ. ಸ್ಪೇನ್‌ನಿಂದ ಬಂದ ಜಿತೇಂದ್ರ ಪುತ್ರಿ ಥಾಣೆ ನಿವಾಸಕ್ಕೆ ಬಂದ ನಂತರ ಮಂತ್ರಿಯ 14 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್‌ ಬಂದಿದೆ.

Maharashtra minister Jitendra Awhad tests positive for Corona virus
Author
Bengaluru, First Published Apr 24, 2020, 5:31 PM IST

ಶರದ್‌ ಪವಾರ್‌ ಅವರ ಮಾನಸ ಪುತ್ರ ಎನ್ನಿಸಿಕೊಳ್ಳುವ ಮಹಾರಾಷ್ಟ್ರದ ಕ್ಯಾಬಿನೆಟ್‌ ಮಂತ್ರಿ ಜಿತೇಂದ್ರ ಆಹ್ವಾಡ್‌ ತನ್ನ ಉಡಾಫೆ ಮತ್ತು ಬೇಜವಾಬ್ದಾರಿತನದಿಂದ ಸುದ್ದಿಯಲ್ಲಿದ್ದಾರೆ. ಸ್ಪೇನ್‌ನಿಂದ ಬಂದ ಜಿತೇಂದ್ರ ಪುತ್ರಿ ಥಾಣೆ ನಿವಾಸಕ್ಕೆ ಬಂದ ನಂತರ ಮಂತ್ರಿಯ 14 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್‌ ಬಂದಿದೆ.

ಆದರೆ ಮಂತ್ರಿ ಸಾಹೇಬರು ಎಷ್ಟೇ, ಯಾರೇ ಹೇಳಿದರೂ ಆಸ್ಪತ್ರೆಗೆ ಹೋಗಲು ತಯಾರು ಇರಲಿಲ್ಲ. ಅಷ್ಟೇ ಅಲ್ಲ, ಕ್ಯಾಬಿನೆಟ್‌ ಸಭೆಗೆ ಶರದ್‌ ಪವಾರ್‌ ನಿವಾಸಕ್ಕೆ ಓಡೋಡಿ ಬಂದಿದ್ದಾರೆ. ಕೊನೆಗೆ ಸ್ವಯಂ ಮುಖ್ಯಮಂತ್ರಿಯೇ ಫೋನ್‌ ಮಾಡಿ ಕೂಗಾಡಿದ ನಂತರ ನಿನ್ನೆ ಹೋಗಿ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದಾರೆ.

ಜಿತೇಂದ್ರ ಆಹ್ವಾಡ್‌ ಟೆಸ್ಟ್‌ ರಿಪೋರ್ಟ್‌ ಬರುವ ತನಕವೂ ಮಹಾರಾಷ್ಟ್ರದ ಮಂತ್ರಿಗಳಿಗೆ ಟೆನ್ಶನ್‌ ತಪ್ಪಿದ್ದಲ್ಲ. ಇಷ್ಟೇ ಆಗಿದ್ದಲ್ಲ, ಮಂತ್ರಿಗಳ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದಕ್ಕೆ ಯುವಕನೊಬ್ಬನನ್ನು ಮಂತ್ರಿಗಳ ಅಂಗ ರಕ್ಷಕರು ಬೀದಿಯಲ್ಲಿ ನಾಯಿಗೆ ಬಡಿದಂತೆ ಬಡಿದಿದ್ದಾರೆ. ಈಗ ಅದೇ ಅಂಗ ರಕ್ಷಕರಿಗೆ ಸಿಬ್ಬಂದಿಗೆ ಕೊರೋನಾ ಬಂದಿದೆ. ಮಾಡಿದ್ದುಣ್ಣೋ ಮಹಾರಾಯ ನೋಡಿ!

ಅಮಿತ್‌ ಶಾ ಫುಲ್‌ ಆ್ಯಕ್ಟಿವ್‌, ಆದರೂ ಮೌನ!

ಚೀನಾ ಮೇಲಿನ ಸಿಟ್ಟು

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಿನವೂ ಶ್ವೇತ ಭವನದಲ್ಲಿ ಕೊರೋನಾ ಕುರಿತಂತೆ ಪತ್ರಿಕಾಗೋಷ್ಠಿ ನಡೆಸುತ್ತಾರೆ. ದಿನವೂ ಸುಮಾರು ಒಂದೂವರೆ ಗಂಟೆ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್‌ ಅರ್ಧಕ್ಕರ್ಧ ಸಮಯವನ್ನು ಚೀನಾ ಟೀಕೆಗೇ ಮೀಸಲಿಡುತ್ತಾರೆ. ಅಷ್ಟಕ್ಕೇ ಮಿಸ್ಟರ್‌ ಪ್ರೆಸಿಡೆಂಟ್‌ ಸುಮ್ಮನಾಗಿಲ್ಲ. ಅಮೆರಿಕದ ಅರ್ಧದಷ್ಟುರಾಜ್ಯಗಳು ಚೀನಾ ವಿರುದ್ಧ ಕೋರ್ಟ್‌ನಲ್ಲಿ ಕೇಸ್‌ ಹೂಡುತ್ತಿವೆ. ಮುಂದೆ ಟ್ರಂಪ್‌, ಚೀನಾ ದಂಡ ಕೊಡಬೇಕೆಂದು ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲು ಇದು ಪೀಠಿಕೆ ಅಂತೆ.

ಲಾಕ್‌ ಡೌನ್ ನಂತರ ಮೊದಲು ವಿಮಾನ ಹಾರಾಡುತ್ತಾ? ರೈಲು ಓಡುತ್ತಾ?

ಅಮೆರಿಕದ ರಾಜತಾಂತ್ರಿಕ ಮಿತ್ರರಾದ ಆಸ್ಪ್ರೇಲಿಯಾ, ಬ್ರಿಟನ್‌, ಜಪಾನ್‌ ದೇಶಗಳು ಈಗಾಗಲೇ ಚೀನಾ ವಿರುದ್ಧ ಕೆರಳಿ ಮಾತನಾಡತೊಡಗಿವೆ. ಪ್ರಧಾನಿ ಮೋದಿ ಮೇಲೆ ಕೂಡ ಅಮೆರಿಕದ ರಾಜತಾಂತ್ರಿಕ ಒತ್ತಡ ಇದೆಯಾದರೂ, ಇಲ್ಲಿಯವರೆಗೆ ಭಾರತ ಕೊರೋನಾವನ್ನು ‘ಚೀನಾ ವೈರಸ್‌’ ಎಂದು ಕರೆಯುವುದಾಗಲಿ, ಬಹಿರಂಗ ಟೀಕೆ ಸ್ವತಃ ಸರ್ಕಾರದಿಂದ ಮಾಡುವುದಾಗಲಿ ಮಾಡಿಲ್ಲ. ಚೀನಾ ಜೊತೆ ನಿಂತ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ವಾರ್ಷಿಕವಾಗಿ ನೀಡುವ ಹಣ ನೀಡಲು ಅಮೆರಿಕ ನಿರಾಕರಿಸಿದ್ದು, ಚೀನಾ ಹೆಚ್ಚು ಹಣ ನೀಡುವುದಾಗಿ ಹೇಳುತ್ತಿದೆ. ಕೊರೋನಾ ಜೊತೆಗೆ ಜಿಯೋ ಪಾಲಿಟಿಕ್ಸ್‌ ಕೂಡ ಬಿಸಿ ಆಗುತ್ತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios