ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕೊರೋನಾ ಸಮಯದಲ್ಲಿ ನಾಗಪುರದಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಕೇಂದ್ರ ಕ್ಯಾಬಿನೆಟ್‌ ಸಚಿವರ ಪೈಕಿ ದೆಹಲಿಯಲ್ಲಿ ಇರದೆ ಊರಲ್ಲಿ ಠಿಕಾಣಿ ಹೂಡಿದವರು ಗಡ್ಕರಿ ಒಬ್ಬರೇ. ಅದಕ್ಕೆ ಅವರ ಆರೋಗ್ಯದ ಸ್ಥಿತಿಯೂ ಕಾರಣ. ಊರಲ್ಲಿರುವ ಗಡ್ಕರಿ 40 ದಿನಗಳ ಆಯುರ್ವೇದಿಕ್‌ ಪಂಚಕರ್ಮ ಚಿಕಿತ್ಸೆ ತೆಗೆದುಕೊಂಡಿದ್ದಾರೆ.

ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ವಲಸೆ; ಕೃಷಿಗೆ ಸಿಕ್ತಾರೆ ಜನ...!

ದಿನವೂ ಬೆಳಿಗ್ಗೆ 2 ಗಂಟೆ ಎಣ್ಣೆ ಮಸಾಜ್‌, ಬಸ್ತಿ ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಗಡ್ಕರಿ, ಒಂದೂವರೆ ಗಂಟೆ ನಡಿಗೆ ಸೇರಿದಂತೆ ಲಘು ವ್ಯಾಯಾಮ ಕೂಡ ಆರಂಭಿಸಿ ಇನ್ನೂ ಸ್ವಲ್ಪ ತೂಕ ಇಳಿಸಿಕೊಂಡಿದ್ದಾರೆ. ದಿನವೂ ಸಂಜೆ ಒಂದು ಟೀವಿ ಚಾನಲ್‌ಗೆ ಭರ್ತಿ ಒಂದು ಗಂಟೆ ಸಂದರ್ಶನ ಕೊಡುವ ಗಡ್ಕರಿ ಸಾಹೇಬರು, ‘ಏನು ಮುಖ ಲಕಲಕ ಹೊಳೆಯುತ್ತಿದೆ’ ಎಂದು ಕೇಳಿದರೆ ಆರೋಗ್ಯದ ಗುಟ್ಟಿನ ಟಿಫ್ಸ್‌ ಕೊಡಲು ಶುರುಮಾಡುತ್ತಾರಂತೆ. ಏನೇ ಇರಲಿ ಗಡ್ಕರಿ ಜೀವನ ಪ್ರೀತಿ ಇರೋ ದಿಲ್‌ದಾರ್‌ ಮನುಷ್ಯ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ