ಲೇಟ್ ಆದ್ರೂ ಲೇಟೆಸ್ಟ್ ಆಗಿ ಸ್ಫರ್ಧೆಗೆ ಧುಮುಕಿದ Vodafone-Idea; ₹200 ಗಿಂತಲೂ ಕಡಿಮೆ ಬೆಲೆಯ 4 ಪ್ಲಾನ್!
10 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಕಳೆದುಕೊಂಡ ಬಳಿಕ ಅಲರ್ಟ್ ಆಗಿರುವ ವೊಡಾಫೋನ್-ಐಡಿಯಾ 200 ರೂಪಾಯಿಗಿಂತಲೂ ಕಡಿಮೆ ಬೆಲೆಯ 4 ಪ್ಲಾನ್‌ಗಳನ್ನು ಬಿಡುಗಡೆಗೊಳಿಸಿದೆ.
ನವದೆಹಲಿ: ಟ್ಯಾರಿಫ್ ಬೆಲೆ ಏರಿಕೆಯ ನಂತರ ಟೆಲಿಕಾಂ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳು ಕಂಡು ಬರುತ್ತಿವೆ. ಬೆಲೆ ಏರಿಕೆ ಬೆನ್ನಲ್ಲೇ ವೊಡಾಫೋನ್-ಐಡಿಯಾ 10.4 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಹೀಗಾಗಿ ಸ್ಪರ್ಧೆಗೆ ಇಳಿದಿರುವ ವೊಡಾಫೋನ್-ಐಡಿಯಾ ನಾಲ್ಕು ಹೊಸ ಪ್ಲಾನ್‌ಗಳ ಜೊತೆ ಗ್ರಾಹಕರನ್ನ ಉಳಿಸಿಕೊಳ್ಳಲು ಮುಂದಾಗಿದೆ. ಜಿಯೋ 7.5 ಲಕ್ಷ ಮತ್ತು ಏರ್‌ಟೈಲ್ 10.6 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ರೆ, ಸರ್ಕಾರಿ ಕಂಪನಿ ಬಿಎಸ್‌ಎನ್‌ಎಲ್ 20.9 ಲಕ್ಷ ಗ್ರಾಹಕರನ್ನು ಹೆಚ್ಚಿಸಿಕೊಂಡಿದೆ. ಗ್ರಾಹಕರನ್ನು ಕಳೆದುಕೊಂಡ ಬೆನ್ನಲ್ಲೇ ಎಚ್ಚೆತ್ತಿರುವ ವೊಡಾಫೋನ್ ಐಡಿಯಾ 200 ರೂಪಾಯಿಗಿಂತಲೂ ಕಡಿಮೆ ಬೆಲೆಯ ನಾಲ್ಕು ಪ್ರೀಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಿದೆ.
ವೊಡಾಫೋನ್-ಐಡಿಯಾ ನೀಡುತ್ತಿರುವ ನಾಲ್ಕು ಪ್ಲಾನ್‌ಗಳ ಬೆಲೆ 99 ರೂಪಾಯಿ, 155 ರೂಪಾಯಿ, 179 ರೂಪಾಯಿ ಮತ್ತು 189 ರೂಪಾಯಿ ಆಗಿದ್ದು, ವ್ಯಾಲಿಡಿಟಿ ಕ್ರಮವಾಗಿ 15 ದಿನ, 20 ದಿನ, 24 ದಿನ ಮತ್ತು 26 ದಿನವಾಗಿದೆ. ರೀಚಾರ್ಜ್‌ಗೆ ಕಡಿಮೆ ಹಣ ಖರ್ಚು ಮಾಡುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ವೊಡಾಫೋನ್-ಐಡಿಯಾ ಈ ನಾಲ್ಕು ಪ್ಲಾನ್‌ಗಳನ್ನು ಪರಿಚಯಿಸಿದೆ ಎಂದು ಹೇಳಲಾಗುತ್ತಿದೆ.
BSNL ನೆಟ್‌ವರ್ಕ್‌ಗೆ Port ಆಗುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ..
99 ರೂಪಾಯಿಯ ಪ್ಲಾನ್: ವೊಡಾಫೋನ್-ಐಡಿಯಾ ಬಳಕೆದಾರರು 99 ರೂಪಾಯಿ ರೀಚಾರ್ಜ್ ಮಾಡಿಕೊಂಡ್ರೆ ಇದರ ವ್ಯಾಲಿಡಿಟಿ 15 ದಿನ ವ್ಯಾಲಿಡಿಟಿ ಹೊಂದಿದೆ. ನಿಮಗೆ 99 ರೂಪಾಯಿ ಟಾಕ್‌ಟೈಮ್ ಜೊತೆ 200 ಎಂಬಿ ಡೇಟಾ ಸಿಗುತ್ತದೆ. ಈ ಪ್ಲಾನ್‌ನಲ್ಲಿ ಔಟ್ ಗೋಯಿಂಗ್ ಕಾಲ್ ಸೆಕೆಂಡ್‌ಗೆ 2.5 ಪೈಸೆ ಚಾರ್ಜ್ ಮಾಡಲಾಗುತ್ತದೆ. ಯಾವುದೇ ಉಚಿತ ಎಸ್ಎಂಎಸ್ ಆಫರ್ ಈ ಪ್ಲಾನ್‌ನಲ್ಲಿ ಲಭ್ಯವಿಲ್ಲ.
155 ರೂಪಾಯಿಯ ಪ್ಲಾನ್: 20 ದಿನ ವ್ಯಾಲಿಡಿಟಿಯ ಪ್ಲಾನ್ ಇದಾಗಿದ್ದು, ನಿಮಗೆ 300 ಎಸ್‌ಎಂಎಸ್‌ಗಳನ್ನು ಉಚಿತವಾಗಿ ಕಳುಹಿಸಬಹುದು. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್ ಜೊತೆಯಲ್ಲಿ ಉಚಿತವಾಗಿ 1 ಜಿಬಿ ಡೇಟಾ ಸಿಗುತ್ತದೆ. ಡೇಟಾ ಖಾಲಿಯಾದ ಬಳಿಕ ಪ್ರತಿ 1MBಗೆ 50 ಪೈಸೆ ಚಾರ್ಜ್ ಮಾಡಲಾಗುತ್ತದೆ.
179 ರೂಪಾಯಿಯ ಪ್ಲಾನ್: ಈ ಪ್ಲಾನ್ 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಕಾಲ್, 300 ಉಚಿತ ಎಸ್‌ಎಂಎಸ್ ಮತ್ತು 1GB ಡೇಟಾ ಸಿಗುತ್ತದೆ. ಡೇಟಾ ಖಾಲಿಯಾದ ಬಳಿಕ ಪ್ರತಿ 1MBಗೆ 50 ಪೈಸೆ ಚಾರ್ಜ್ ಮಾಡಲಾಗುತ್ತದೆ.
189 ರೂಪಾಯಿಯ ಪ್ಲಾನ್: ವೊಡಾಫೋನ್ ಐಡಿಯಾ ಗ್ರಾಹಕರು 189 ರೂ. ರೀಚಾರ್ಜ್ ಮಾಡಿಕೊಂಡರೆ 26 ದಿನ ವ್ಯಾಲಿಡಿಟಿಯ ಪ್ಲಾನ್ ಆಕ್ಟಿವೇಟ್ ಆಗುತ್ತದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್, 300 ಉಚಿತ ಎಸ್‌ಎಂಎಸ್ ಮತ್ತು 1GB ಡೇಟಾ ಸಿಗುತ್ತದೆ. ಡೇಟಾ ಖಾಲಿಯಾದ ಬಳಿಕ ಪ್ರತಿ 1MBಗೆ 50 ಪೈಸೆ ಚಾರ್ಜ್ ಮಾಡಲಾಗುತ್ತದೆ.
ಬಿಎಸ್ಎನ್ಎಲ್ ಹೊಸ ಪ್ಲಾನ್‌ಗೆ ಎದುರಾಳಿಗಳು ಧೂಳಿಪಟ; 200Mbps ಸ್ಪೀಡ್ ಜೊತೆ 5000GB ಡೇಟಾ