ಜಗತ್ತಿನಲ್ಲೇ ಹೇಗೆ ಇರಲಿ ಆದರೆ ಭಾರತದಲ್ಲಿ ಮಾತ್ರ ರಾಜಕಾರಣಿಗಳೆಂದರೆ ಮನುಷ್ಯನ ಬದುಕಿಗೆ ಸಂಬಂಧಿಸಿದ ಎಲ್ಲ ವಿಷಯದಲ್ಲೂ ಪರಿಣತರು ಇರಲೇಬೇಕು ಎಂದು ಜನಸಾಮಾನ್ಯರು ಬಯಸುತ್ತಾರೆ. ಆದರೆ ಕೊರೋನಾ ಸಂಕಷ್ಟದಲ್ಲಿ ಪುನರ್‌ ದರ್ಶನ ಕೊಡುತ್ತಿರುವ ರಾಹುಲ್‌ ಗಾಂಧಿ, ಸಂಕಷ್ಟದಲ್ಲಿ ಜನರೊಂದಿಗೆ ನೇರ ಸಂವಾದ ನಡೆಸಿ, ಕಾರ್ಯಕರ್ತರು ನಾಯಕರೊಂದಿಗೆ ಸಹಾಯ ಮಾಡುವುದನ್ನು ಬಿಟ್ಟು, ಪರಿಣತರೊಂದಿಗೆ ಇಂಟರ್‌ವ್ಯೂ ಶುರುಮಾಡಿದ್ದಾರೆ.

ಜೂನ್, ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ?

2019 ರಲ್ಲಿ ದೇಶದ ಸಮಸ್ಯೆಗಳಿಗೆ ತಮ್ಮ ಬಳಿ ಮಾತ್ರ ಉತ್ತರವಿದೆ ಎಂದು ಹೇಳುತ್ತಿದ್ದ ರಾಹುಲ್‌, ಈಗ ರಘುರಾಮ್‌ ರಾಜನ್‌ ಜೊತೆ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳು ಮಾಡುವ ಕೆಲಸವನ್ನು ಮಾಡಿದರೆ ರಾಹುಲ್‌ ಇಮೇಜ್‌ ವೃದ್ಧಿ ಹೇಗೆ ಆಗುತ್ತದೋ ಗೊತ್ತಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ