ಕೊರೋನಾ ವೈರಸ್ ಇದೀಗ ಹಳ್ಳಿ ಹಳ್ಳಿಯಲ್ಲೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇದೀಗ ಕೊರೋನಾ ವೈರಸ್ 3ನೇ ಹಂತಕ್ಕೆ ತಲುಪಿದೆ ಅನ್ನೋದನ್ನು ತಜ್ಞರು ಹೇಳುತ್ತಿದ್ದಾರೆ. ಸಮುದಾಯ ಮಟ್ಟದಲ್ಲಿ ಕೊರೋನಾ ವ್ಯಾಪಕವಾಗಿ ಹರಡಿದರೆ, ದೇಶದ ಸ್ಥಿತಿ ಇಟಲಿಗಿಂತ ನರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.
India Jun 1, 2020, 5:26 PM IST
ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಾಕ್ ಹೈಕಮೀಷನ್ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳನ್ನು ಗಡೀಪಾರಿಗೆ ಭಾರತ ಮುಂದಾಗಿದೆ. ಮತ್ತೊಂದೆಡೆ ಗಡಿಯಲ್ಲಿ ಉಗ್ರರ ಚಟುವಟಿಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಲಾಕ್ಡೌನ್ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಆದಾಯ ನಿರೀಕ್ಷಿಸಿದ್ದ ಅಧಿಕಾರಿಗಳ ಲೆಕ್ಕಾಚಾರಾ ಉಲ್ಟಾ ಆಗಿದೆ. ಇದೀಗ ಎಣ್ಣೆಗೆ ಬೇಡಿಕೆ ಕುಸಿತವಾಗಿದೆ. ನಟಿ ರಚಿತಾ ರಾಮ್ ಹೇಳಿದ್ದ ಸರ್ಪ್ರೈಸ್ ಬಯಲಾಗಿದೆ. ವ್ಯಾಟ್ಸಾಪ್ ಬಳಕೆದಾರರೇ ಎಚ್ಚರ, ಟಿಕ್ಟಾಕ್ನಿಂದ ಬಲೆಬಿದ್ದ ಕಳ್ಳಿ ಸೇರಿದಂತೆ ಜೂನ್ 01ರ ಟಾಪ್ 10 ಸುದ್ದಿ ಇಲ್ಲಿವೆ.
News Jun 1, 2020, 5:05 PM IST
ಮಕ್ಕಳು ನಿಮ್ಮಿಂದ ಏನೇನು ಕಲಿಯಬಹುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಎಲ್ಲವನ್ನೂ... ಹೌದು, ನೀವು ಮಾಡುವ, ಮಾತನಾಡುವ ಪ್ರತಿಯೊಂದನ್ನೂ ಮಕ್ಕಳು ನಿಮ್ಮಿಂದ ಕಲಿಯಬಲ್ಲರು.
relationship Jun 1, 2020, 5:03 PM IST
ದೇಶಾದ್ಯಂತ ಆವರಿಸಿರುವ ಕೊರೋನಾ ಮಹಾಮಾರಿನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಲಾಕ್ಡೌನ್ ಹೇರಿದೆ. ಈ ಮಾರಕ ಕೊರೋನಾದಿಂದಾಗಿ ಜನರ ಜೀವನ ಶೈಲಿಯೂ ಸಂಪೂರ್ಣ ಬದಲಾಗಿದೆ. ಅನಗತ್ಯ ಓಡಾಟಕ್ಕೆ ಬ್ರೇಕ್ ಬಿದ್ದಿದ್ದು, ಜನರು ಮನೆಯಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಹೀಗಿರುವಾಗ ನಮ್ಮ ಜನ ನಾಯಕರು ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಕುರುತು ಸಂದರ್ಶನ ನಡೆಸಿದ್ದು, ಅವರೇ ಖುದ್ದು ತಮ್ಮ ದಿನಚರಿಯನ್ನು ವಿವರಿಸಿದ್ದಾರೆ. ಕರ್ನಾಟಕದಿಂದ ಆಯ್ಕೆದಯಾದ ರಾಜ್ಯಸಭೆಗೆ ಸದಸ್ಯ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Coronavirus India Jun 1, 2020, 4:59 PM IST
ಆನೇಕಲ್ನ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕಿಗೆ ತುತ್ತಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಆನೇಕಲ್ನ ಬಾಬಯ್ಯನಗುಡಿ ರಸ್ತೆಯಲ್ಲಿದ್ದ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದೆ. ಭಾನುವಾರ ಇದ್ದಕ್ಕಿದ್ದಂತೆ ಮಹಿಳೆಗೆ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದಾಗ ಸೋಂಕು ತಗುಲಿರುವ ವಿಚಾರ ಬೆಳಕಿಗೆ ಬಂದಿದೆ.
state Jun 1, 2020, 4:02 PM IST
ಒಂದೆಡೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು ಇನ್ನೊಂದೆಡೆ ಅಧಿಕಾರಿಗಳು ಯಡವಟ್ಟಿನ ಮೇಲೆ ಯಡವಟ್ಟು ಮಾಡುತ್ತಿದ್ದಾರೆ. ಕ್ವಾರಂಟೈನ್ನಲ್ಲಿದ್ದ 9 ಜನರ ವರದಿ ಬರುವ ಮುನ್ನವೇ ರಿಲೀಸ್ ಮಾಡಿದ್ದಾರೆ. ಬೆಳಗಾವಿ, ಚಿಕ್ಕೋಡಿ ಅಧಿಕಾರಿಗಳು ಈ ಯಡವಟ್ಟು ಮಾಡಿದ್ದಾರೆ. ಕ್ವಾರಂಟೈನ್ನಿಂದ ರಿಲೀಸ್ ಆದವರಲ್ಲಿ ಸೋಂಕು ಕಾಣಿಸಿಕೊಂಡಿದೆ.
state Jun 1, 2020, 3:20 PM IST
ಕೊರೋನಾ ನಿಯಂತ್ರಿಸಲು ಜಾರಿಗೊಳಿಸಿದ್ದ ಲಾಕ್ಡೌನ್ ವೇಳೆ ಬಂದ್ ಮಾಡಿದ್ದ ಮದ್ಯದ ಮಾರಾಟ ಅಂಗಡಿಗಳು ತೆರೆದರೇ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತದೆ ಎಂಬ ಸರ್ಕಾರ ಹಾಗೂ ಅಧಿಕಾರಗಳ ಲೆಕ್ಕಾಚಾರ ಹುಸಿಯಾಗಿದೆ.
Karnataka Districts Jun 1, 2020, 2:37 PM IST
ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಗೋಲ್ಮಾರ್ಕೆಟ್ ಬಡಾವಣೆಯಲ್ಲಿ ನಡೆದಿದೆ. ಹುಸೇನ್(33) ಎಂಬುವನೇ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ.
Karnataka Districts Jun 1, 2020, 1:50 PM IST
ಗ್ರೀನ್ ಝೋನ್ನಲ್ಲಿದ್ದ ದಾಸರಹಳ್ಳಿಗೂ ಕೊರೋನಾ ಎಂಟ್ರಿಕೊಟ್ಟಿದೆ. ಇನ್ನು ಕಾಡುಗೋಡಿ, HSR ಲೇ ಔಟ್ ಸೇರಿದಂತೆ ಹಲವೆಡೆ ಕೊರೋನಾ ತನ್ನ ಕೆನ್ನಾಲಿಗೆ ಚಾಚಿದೆ. ಟ್ರಾವೆಲ್ ಹಿಸ್ಟರಿ ಇಲ್ಲದಿರುವವರಿಗೂ ಕೊರೋನಾ ವಕ್ಕರಿಸಿರುವುದು ಬೆಂಗಳೂರಿಗರ ನಿದ್ದೆಗೆಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jun 1, 2020, 1:09 PM IST
ಸಾರಿಗೆ ಸಂಸ್ಥೆಗಳ ನೌಕರರಿಗೆ ಬಿಗ್ ಶಾಕ್ ಸಾಧ್ಯತೆ ಇದೆ. 4 ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಶೇ. 50 ರಷ್ಟು ನೌಕರರಿಗೆ 4 ತಿಂಗಳು ವೇತನ ರಹಿತ ರಜೆ ನೀಡಲು ಚಿಂತನೆ ನಡೆಸಲಾಗದೆ ಎನ್ನಲಾಗಿದೆ. 4 ಸಾರಿಗೆ ಸಂಸ್ಥೆಗಳಲ್ಲಿ 1.20 ಲಕ್ಷ ನೌಕರರಿದ್ದಾರೆ. ಎಸಿ ಬಸ್ ಪ್ರಯಾಣ ದರ ಶೇ. 30 ರಷ್ಟು ಹೆಚ್ಚಳಕ್ಕೆ ಸಿದ್ಧತೆ ನಡೆಸಲಾಗಿದೆ. ಸಿಬ್ಬಂದಿಗಳಿಗೆ ಮುಂದಿನ 3 ತಿಂಗಳು ಅರ್ಧ ಸಂಬಳ ನೀಡುವ ಸಾಧ್ಯತೆ ಇದೆ. ಉಳಿದ ಅರ್ಧ ಸಂಬಳವನ್ನು ಕಂತಿನಲ್ಲಿ ಕೊಡಲು ಚರ್ಚೆಯನ್ನು ನಡೆಸಲಾಗಿದೆ. ಹೊಸ ನೇಮಕ ರದ್ಧತಿ ಜತೆ ಅನಗತ್ಯ ಸಿಬ್ಬಂದಿ ಕಡಿತಕ್ಕೂ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state Jun 1, 2020, 12:46 PM IST
ರಾಜ್ಯದಲ್ಲಿ ಇಂದಿನಿಂದ ಅನ್ಲಾಕಿಂಗ್ 1.0 ಶುರುವಾಗಿದೆ. ಇಂದಿನಿಂದ ರೈಲು, ಕೋರ್ಟ್, ಬಸ್ ಸಂಚಾರ ಆರಂಭವಾಗಿದೆ. ದೇಶದಾದ್ಯಂತ 200 ರೈಲುಗಳ ಓಡಾಟ ಶುರುವಾಗಿದೆ. ಕರ್ನಾಟಕದಿಂದಲೇ 16 ರೈಲುಗಳ ಸಂಚಾರ ಆರಂಭವಾಗಿದೆ. 90 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಬೇಕು. ತಪಾಸಣೆ ನಡೆಸಬೇಕಾಗುತ್ತದೆ. ಮೆಜೆಸ್ಟಿಕ್ನ ಚಿತ್ರಣ ಹೇಗಿದೆ? ಇಲ್ಲಿದೆ ಗ್ರೌಂಡ್ ರಿಪೋರ್ಟ್..!
state Jun 1, 2020, 10:17 AM IST
ಕೊರೋನಾ ಲಾಕ್ಡೌನ್ ಪರಿಸ್ಥಿತಿಯಲ್ಲಿ ಜರ್ಮನಿಯಲ್ಲಿದ್ದು, ಹೆರಿಗೆಗಾಗಿ ಮರಳಿ ಭಾರತಕ್ಕೆ ಬರಲು ಹಾತೊರೆಯುತ್ತಿದ್ದ ಅಳ್ನಾವರದ ವಿಜೇತಾ ಶಶಾಂಕ ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆ ತಂದು ಅಲ್ಲಿಯೇ ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
Karnataka Districts Jun 1, 2020, 10:01 AM IST
ಪ್ರಪಂಚದಲ್ಲಿನ ಮುಂದುವರೆದ ದೇಶಗಳು ಕೊರೋನಾ ವೈರಸ್ಗೆ ಭಯಗೊಂಡಿರುವಾಗ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರಿಯಾದ ಸಮಯಕ್ಕೆ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ವಿಶ್ವವೇ ಮೆಚ್ಚಿಕೊಂಡಂತೆ ನಾಯಕರಾಗಿದ್ದಾರೆ ಎಂದು ಮಾಜಿ ಶಾಸಕ ನೇಮಿರಾಜ್ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Karnataka Districts Jun 1, 2020, 9:38 AM IST
ಎಂಜಿನಿಯರಿಂಗ್ ಪದವಿ ಗಳಿಸಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಯುವಕ ಈಗ ಕುಟುಂಬ ನಿರ್ವಹಣೆಗಾಗಿ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಇದು ಕೊರೋನಾ ತಂದ ಸಂಕಷ್ಟ.
Karnataka Districts Jun 1, 2020, 8:50 AM IST
ಇಂದಿನಿಂದ(ಸೋಮವಾರ)ದಿಂದ ಗದಗ- ಮುಂಬೈ ಎಕ್ಸ್ಪ್ರೆಸ್ ಡೈಲಿ ರೈಲು ಆರಂಭವಾಗಲಿದ್ದು, ಮುಂಬೈ ಕಂಟಕ ಗದಗ ಜಿಲ್ಲೆಗೂ ತಗಲುತ್ತಾ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಪ್ರಾರಂಭವಾಗಿದೆ.
Karnataka Districts Jun 1, 2020, 8:29 AM IST